ನವದೆಹಲಿ: ಭಯೋತ್ಪಾದಕ ಮಸೂದ್ ಅಜರ್ ಅವರನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಈಗ ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಿದೆ. ಈ ಹಿಂದೆ ನಾಲ್ಕು ಬಾರಿ ಅವರನ್ನು ಈ ಪಟ್ಟಿಗೆ ಸೇರಿಸುವಲ್ಲಿನ ಭಾರತದ ಯತ್ನಕ್ಕೆ ಚೀನಾ ಅಡ್ಡಿಯುಂಟು ಮಾಡಿತ್ತು. ಈಗ ಅದು ಭದ್ರತಾ ಮಂಡಳಿಯಲ್ಲಿ ತನ್ನ ನಿರ್ಬಂಧಗಳನ್ನು ಕೈ ಬಿಟ್ಟ ಹಿನ್ನಲೆಯಲ್ಲಿ ವಿಶ್ವಸಂಸ್ಥೆ ಮಸೂದ್ ಅಜರ್ ರನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಿದೆ.
Big,small, all join together.
Masood Azhar designated as a terrorist in @UN Sanctions list
Grateful to all for their support. 🙏🏽#Zerotolerance4Terrorism
— Syed Akbaruddin (@AkbaruddinIndia) May 1, 2019
ಆ ಮೂಲಕ ಭಾರತಕ್ಕೆ ಈಗ ರಾಜತಾಂತ್ರಿಕ ಗೆಲುವು ಸಿಕ್ಕಿದೆ. ಈಗ ಫ್ರಾನ್ಸ್ ಕೂಡ ವಿಶ್ವಸಂಸ್ಥೆ ನಡೆಯನ್ನು ಸ್ವಾಗತಿಸಿದೆ. ಪುಲ್ವಾಮಾ ಉಗ್ರದಾಳಿಯ ನಂತರ ಈ ದಾಳಿಯ ಹೊಣೆ ಹೊತ್ತಿದ್ದ ಜೈಶ್ ಎ ಮೊಹಮ್ಮದ್ ಸಂಘಟನೆಯನ್ನು ಜಾಗತಿಕ ಉಗ್ರ ಸಂಘಟನೆ ಎಂದು ಘೋಷಿಸಬೇಕೆಂದು ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ಒತ್ತಾಯಿಸಿತ್ತು.ಈಗ ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿಯಾಗಿರುವ ಸಯ್ಯದ್ ಅಕ್ಬರುದ್ದೀನ್ ಟ್ವೀಟ್ ಮಾಡಿ" ಸಣ್ಣ ರಾಷ್ಟ್ರಗಳು,ದೊಡ್ಡ ರಾಷ್ಟ್ರಗಳು ಎಲ್ಲರು ಕೂಡಿ ಈಗ ವಿಶ್ವಸಂಸ್ಥೆಯಲ್ಲಿ ಮಸೂದ್ ಅಜರ್ ರನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡಿದ್ದಾರೆ.ಇದಕ್ಕೆ ನಾವು ಅಬಾರಿಯಾಗಿದ್ದೇವೆ ಎಂದು ಟ್ವೀಟ್ ನಲ್ಲಿ ಹೇಳಿದ್ದಾರೆ.
ಪುಲ್ವಾಮಾ ದಾಳಿಯಾದ ನಂತರ ಅಮೇರಿಕಾ, ಬ್ರಿಟನ್, ಫ್ರಾನ್ಸ್ ದೇಶಗಳು ವಿಶ್ವಸಂಸ್ಥೆ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ಘೋಷಿಸಲು ಒತ್ತಡ ಹೇರಿದ್ದವು.ಆದರೆ ಇದಕ್ಕೆ ಚೀನಾ ಅಡ್ಡಿಯುಂಟು ಮಾಡಿತ್ತು.ಇದಾದ ನಂತರ ಭಾರತದ ನಿರಂತರ ಒತ್ತಡದ ಪರಿಣಾಮವಾಗಿ ಕೊನೆಗೂ ತನ್ನ ನಿರ್ಭಂದಗಳಿಂದ ಹಿಂದೆ ಸರಿದಿತ್ತು.