ನವದೆಹಲಿ: ಮಾವೋವಾದಿಗಳ ದಾಳಿಯಿಂದಾಗಿ ಮಹಾರಾಷ್ಟ್ರದ ಗಾಡ್ಚಿರೋಲಿಯಲ್ಲಿ 15 ಭದ್ರತಾ ಸಿಬ್ಬಂದಿ ಮತ್ತು ಅವರ ಚಾಲಕ ಮೃತಪಟ್ಟಿದ್ದಾರೆ. ಛತ್ತೀಸ್ ಗಡ ಗಡಿಭಾಗದಲ್ಲಿರುವ ಮಾವೋವಾದಿ-ಪೀಡಿತ ಜಿಲ್ಲೆಯ ಪೋಲಿಸ್ ವಾಹನದ ಮೇಲೆ ಐಇಡಿ ಸ್ಫೋಟಿಸಿ ನಕ್ಸಲರು ಈ ದುಷ್ಕೃತ್ಯ ಮೆರೆದಿದ್ದಾರೆ.
ಮಾವೊವಾದಿಗಳು ಗಡ್ಚಿರೋಲಿ ಜಿಲ್ಲೆಯ ಕುರ್ಖೇಡಾದಲ್ಲಿ ರಸ್ತೆ ನಿರ್ಮಾಣ ಸ್ಥಳದಲ್ಲಿದ್ದ ಸುಮಾರು 25 ವಾಹನಗಳಿಗೆ ಸೀಮೆ ಎಣ್ಣೆ ಮತ್ತು ಡಿಸೇಲ್ ನ್ನು ಸುರಿದ್ದಾರೆ ಎಂದು ಪೋಲಿಸ್ ಅಧಿಕಾರಿ ಶೈಲೇಶ್ ಬಾಲ್ಕವೇಡೆ ಹೇಳಿದ್ದಾರೆ.ಈ ಘಟನೆ ಬೆಳಗ್ಗೆ ಸುಮಾರು 3.30ಕ್ಕೆ ನಡೆದಿದೆ ಎಂದು ತಿಳಿದುಬಂದಿದೆ.
ಎರಡು ವಾರಗಳ ಹಿಂದೆ, ಏಪ್ರಿಲ್ 11ರಂದು ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ಗಾಡ್ಚಿರೋಲಿಯಲ್ಲಿ ಮತದಾನ ಮತಗಟ್ಟೆ ಬಳಿ ಮತ್ತೊಂದು ಐಇಡಿ ಸ್ಫೋಟ ಸಂಭವಿಸಿತ್ತು. ಆದರೆ ಈ ಘಟನೆಯಲ್ಲಿ ಯಾರೂ ಗಾಯಗೊಂಡಿದ್ದರಲಿಲ್ಲ ಎನ್ನಲಾಗಿದೆ.ಇದಕ್ಕೂ ಒಂದು ದಿನದ ಮುಂಚೆ, ಗಡ್ಚಿರೋಲಿಯ ಐಎಡಿ ಸ್ಫೋಟದಲ್ಲಿ ಕೇಂದ್ರ ರಿಸರ್ವ್ ಪೋಲಿಸ್ ಫೋರ್ಸ್ (ಸಿಆರ್ಪಿಎಫ್) ಸೈನಿಕರು ತೀವ್ರವಾಗಿ ಗಾಯಗೊಂಡಿದ್ದರು ಎನ್ನಲಾಗಿದೆ.
ಮಹಾರಾಷ್ಟ್ರ ದಿನವನ್ನು ಆಚರಿಸುತ್ತಿರುವ ಸಂರ್ಭದಲ್ಲಿ ನಕ್ಸಲರು ಈ ಕೃತ್ಯವನ್ನು ಎಸೆಗಿದ್ದಾರೆ.ಕಳೆದ ವರ್ಷ ಏಪ್ರಿಲ್ 22 ರಂದು ಭದ್ರತಾ ಪಡೆಗಳು 40 ಮಾವೋವಾದಿಗಳನ್ನು ಗುಂಡಿಕ್ಕಿ ಕೊಂದಿದ್ದರು.