ನವದೆಹಲಿ: ಇದೇ ಮೊದಲ ಬಾರಿಗೆ ವಿದ್ಯಾರ್ಥಿ ಚಳುವಳಿಯಿಂದ ಚುನಾವಣಾ ರಾಜಕಾರಣಕ್ಕೆ ಪ್ರವೇಶಿಸಿರುವ ಕನ್ನಯ್ಯ ಕುಮಾರ್ ಬೇಗುಸರಾಯೈಗೆ ಕೆಟ್ಟ ಹೆಸರು ತರಲು ಯತ್ನಿಸುತ್ತಿರುವ ಶಕ್ತಿಗಳು ಸೋಲಲಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
#Bihar: CPI candidate from Begusarai, Kanhaiya Kumar arrives to cast his vote at a polling centre in the city, says, "Begusarai ko badnam karne wali takton ko Begusarai mein muh ki khani padegi." He is contesting against BJP leader Giriraj Singh in Begusarai. pic.twitter.com/N6wWqT0J3j
— ANI (@ANI) April 29, 2019
ಬೇಗುಸರಾಯೈನಲ್ಲಿ ಮತ ಚಲಾಯಿಸುವುದಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಕನ್ನಯ್ಯಕುಮಾರ್ " ಬೇಗುಸರಾಯೈ ಹೆಸರನ್ನು ಕೆಡಿಸಲು ಯತ್ನಿಸುತ್ತಿರುವ ಶಕ್ತಿಗಳು ಸೋಲಲಿವೆ"ಎಂದು ಕನ್ನಯ್ಯ ಕುಮಾರ್ ಹೇಳಿದರು. ಎಡಪಕ್ಷಗಳ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಕನ್ನಯ್ಯ ಕುಮಾರ್, ಈಗ ಪ್ರತಿಸ್ಪರ್ಧಿ ಬಿಜೆಪಿಯ ಕೇಂದ್ರ ಸಚಿವರಾಗಿರುವ ಗಿರಿರಾಜ್ ಸಿಂಗ್ ಗೆ ಭಾರಿ ಸ್ಪರ್ಧಿಯನ್ನೊಡ್ಡಲಿದ್ದಾರೆ ಎಂದು ಹೇಳಲಾಗುತ್ತಿದೆ.
#Bihar: CPI candidate from Begusarai, Kanhaiya Kumar after casting his vote at a polling centre in Begusarai. #LokSabhaElections2019 pic.twitter.com/zL57N8dUDB
— ANI (@ANI) April 29, 2019
ಕನ್ನಯ್ಯ ಕುಮಾರ್ ಬೇಗುಸರಾಯೈನಲ್ಲಿ ಎಡಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವುದರಿಂದ ಈಗ ಈ ಕ್ಷೇತ್ರ ದೇಶದ ಗಮನ ಸೆಳೆದಿದೆ. ಇತ್ತೀಚಿಗೆ ಕನ್ನಯ್ಯ ಪರವಾಗಿ ಪ್ರಚಾರ ಮಾಡಲು ಜಾವೇದ್ ಅಕ್ತರ್ ,ಶಬನಾ ಅಜ್ಮಿ,ಪ್ರಕಾಶ್ ರಾಜ್ ,ಸ್ವರಾಜ್ ಭಾಸ್ಕರ್ ಹಾಗೂ ಜಿಗ್ನೇಶ್ ಮೆವಾನಿ ಯಂತಹ ಸಿನಿಮಾ ವ್ಯಕ್ತಿಗಳು ಆಗಮಿಸಿದ್ದರು.