ನವದೆಹಲಿ: 13 ವರ್ಷದ ಆನ್ಯಾ ಎನ್ನುವ ಅಹ್ಮದಾಬಾದ್ ವಿದ್ಯಾರ್ಥಿಯೊಬ್ಬಳು ಪ್ರತಿವರ್ಷ ಜರುಗುವ ಅಂಟಾರ್ಟಿಕಾ ಪ್ರದರ್ಶನಕ್ಕೆ ಆಯ್ಕೆಯಾಗಿದ್ದಾಳೆ.ಆ ಮೂಲಕ ಇದಕ್ಕೆ ಆಯ್ಕೆಯಾದ ಅತಿ ಕಿರಿಯ ವಯಸ್ಸಿನ ವ್ಯಕ್ತಿ ಎಂದು ಎನ್ನುವ ಹಿರಿಮೆಗೆ ಪಾತ್ರವಾಗಿದ್ದಾಳೆ.
ಜಗತ್ತಿನ ಎಲ್ಲಾ ಭಾಗಗಳಿಂದ ಸುಮಾರು 80 ವ್ಯಕ್ತಿಗಳನ್ನು ಈ ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿತ್ತು ಅದರಲ್ಲಿ ಅನ್ಯಾ ಕೂಡ ಒಬ್ಬಳು. ಆನ್ಯಾ ಸದ್ಯ ಪುಣೆಯ ಸಹ್ಯಾದ್ರಿ ಶಾಲೆಯಲ್ಲಿ 8 ನೇ ತರಗತಿಯಲ್ಲಿ ವ್ಯಾಸಂಗ ಮಾತನಾಡುತ್ತಿದ್ದಾರೆ. ಈ ಪ್ರದರ್ಶನವು 'ಹವಾಮಾನ ಶಕ್ತಿ :ಅಂಟಾರ್ಟಿಕಾ 2018' ಫೆಬ್ರುವರಿ 27 ರಿಂದ ಮಾರ್ಚ್ 12ರವರೆಗೆ ನಡೆಯಲಿದೆ. ಧ್ರುವ ಕುರಿತು ಸಂಶೋಧಿಸುತ್ತಿರುವ ಸರ್ ರಾಬರ್ಟ್ ಸ್ವಾನ್ ಈ ಪ್ರದರ್ಶನದ ನೇತೃತ್ವವನ್ನು ವಹಿಸಿದ್ದಾರೆ. ಈ ಪ್ರದರ್ಶನವು ಆನ್ಯಾ ನಿಗೆ ಸಾಮುದಾಯಿಕ ಮತ್ತು ಕಾರ್ಪೋರೇಟ ವಲಯದಲ್ಲಿ ಹವಾಮಾನಕ್ಕೆ ಕುರಿತಾದ ಜಾಗೃತಿಯನ್ನು ಮೂಡಿಸಲಿದ್ದಾಳೆ.
ಈ ಕುರಿತಾಗಿ ಪ್ರತಿಕ್ರಿಯಿಸಿರುವ ಆನ್ಯಾ "ನಾನು ಈ ಪ್ರದರ್ಶದ ಮೂಲಕ ಪಡೆದದಂತಹ ಜ್ಞಾನವನ್ನು ಹವಾಮಾನದ ಬದಲಾವಣೆಗೆ ಕುರಿತ ವಿಚಾರವನ್ನು ನಮ್ಮ ಸಮುದಾಯಗಳಲ್ಲಿ ಬಿತ್ತಲು ಪ್ರಯತ್ನಿಸುತ್ತೇನೆ ಮತ್ತು ಈ ಪ್ರತಿಸ್ಟಾನದ ಪ್ರತಿನಿಧಿಯಾಗಿ ನಮ್ಮ ಜೀವನದಲ್ಲಿ ಸುಸ್ಥಿರತೆಯನ್ನು ನಮ್ಮ ಜೀವನದ ಭಾಗವಾಗಿ ಅಳವಡಿಸಿಕೊಳ್ಳುವುದರ ಬಗ್ಗೆ ಜಾಗೃತಿಯನ್ನು ಮೂಡಿಸುತ್ತೇನೆ ಎಂದು ಆನ್ಯಾ ತಿಳಿಸಿದರು.