ಭಾರತೀಯ ಸೇನೆಯ ಐತಿಹಾಸಿಕ ನಡೆ; ಮಿಲಿಟರಿ ಪೊಲೀಸ್ ಪಡೆಗೆ ಮಹಿಳಾ ಯೋಧರ ನೇಮಕಾತಿ ಪ್ರಕ್ರಿಯೆ ಆರಂಭ!

ಬೆಂಗಳೂರು, ಅಂಬಾಲಾ, ಲಖನೌ, ಜಬಲ್​ಪುರ್​ ಮತ್ತು ಶಿಲ್ಲಾಂಗ್​ನಲ್ಲಿ ನೇಮಕಾತಿ ರ‍್ಯಾಲಿ ನಡೆಯಲಿದೆ. 

Last Updated : Apr 25, 2019, 03:25 PM IST
ಭಾರತೀಯ ಸೇನೆಯ ಐತಿಹಾಸಿಕ ನಡೆ; ಮಿಲಿಟರಿ ಪೊಲೀಸ್ ಪಡೆಗೆ ಮಹಿಳಾ ಯೋಧರ ನೇಮಕಾತಿ ಪ್ರಕ್ರಿಯೆ ಆರಂಭ! title=
Image Courtesy: Indian Army website

ನವದೆಹಲಿ: ಮಿಲಿಟರಿ ಪೊಲೀಸ್ ಪಡೆಯಲ್ಲಿ ಮಹಿಳಾ ಯೋಧರ ನೇಮಕಾತಿಗೆ ಅಧಿಸೂಚನೆ ಪ್ರಕಟಿಸುವ ಮೂಲಕ ಭಾರತೀಯ ಸೇನೆ ಇತಿಹಾಸ ನಿರ್ಮಿಸಿದೆ. ಇದಕ್ಕಾಗಿ ಈಗಾಗಲೇ ಆನ್ಲೈನ್ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.

ಭಾರತಿಯ ಸೇನೆಯಲ್ಲಿ ಜನರಲ್ ಡ್ಯೂಟಿಗಾಗಿ 100 ಮಹಿಳಾ ಯೋಧರ ನೇಮಕಾತಿಗೆ ಇಂದು(ಏಪ್ರಿಲ್ 25) https://joinindianarmy.nic.in ವೆಬ್ಸೈಟ್ ನಲ್ಲಿಅಧಿಕೃತ ಅಧಿಸೂಚನೆ ಹೊರಡಿಸಲಾಗಿದ್ದು, ಜೂನ್ 8 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ. 

ಅರ್ಜಿ ಸಲ್ಲಿಸಲು ಗರಿಷ್ಠ 21 ವರ್ಷ ಮತ್ತು ಕನಿಷ್ಠ 17 ವರ್ಷ 6 ತಿಂಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದ್ದು, ಹುತಾತ್ಮರಾದ ಯೋಧರ ವಿಧವಾ ಪತ್ನಿಯರಿಗೆ ಗರಿಷ್ಠ 30 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿದೆ. 

ಆಫೀಸರ್​ ಹುದ್ದೆಗಿಂತ ಕೆಳಗಿನ ಹುದ್ದೆಗಳಿಗಾಗಿ ಈ ನೇಮಕಾತಿ ಆರಂಭಿಸಲಾಗಿದ್ದು ಬೆಂಗಳೂರು, ಅಂಬಾಲಾ, ಲಖನೌ, ಜಬಲ್​ಪುರ್​ ಮತ್ತು ಶಿಲ್ಲಾಂಗ್​ನಲ್ಲಿ ನೇಮಕಾತಿ ರ‍್ಯಾಲಿ ನಡೆಯಲಿದೆ. ಆನ್​ಲೈನ್​ನಲ್ಲಿ ಹೆಸರು ನೋಂದಾಯಿಸಿಕೊಂಡವರಿಗೆ ಅಡ್ಮಿಟ್​ ಕಾರ್ಡ್​ ಅನ್ನು ಕಳುಹಿಸಿ, ಯಾವುದಾದರೂ ಒಂದು ನೇಮಕಾತಿ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ. 

ನೇಮಕಾತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. 

Trending News