ಎಸ್​ಬಿಐ ಉಳಿತಾಯ ಖಾತೆಯ ಈ ನಿಯಮದಲ್ಲಿ ಬದಲಾವಣೆ, ಮೇ 1 ರಿಂದ ಜಾರಿ!

ನಿಮ್ಮ ಖಾತೆಯು ದೇಶದ ಅತಿ ದೊಡ್ಡ ಬ್ಯಾಂಕ್  ಎಸ್​ಬಿಐನಲ್ಲಿದ್ದರೆ, ಈ ಸುದ್ದಿ ನಿಮಗೆ ಮುಖ್ಯವಾಗಿದೆ.  ಎಸ್​ಬಿಐನ ಹೊಸ ನಿಯಮದ ಪರಿಣಾಮವು ಉಳಿತಾಯ ಖಾತೆಗೆ ಸಿಗುವ ಬಡ್ಡಿಗೆ ಸಂಬಂಧಿಸಿದ್ದಾಗಿದೆ.    

Last Updated : Apr 23, 2019, 03:38 PM IST
ಎಸ್​ಬಿಐ ಉಳಿತಾಯ ಖಾತೆಯ ಈ ನಿಯಮದಲ್ಲಿ ಬದಲಾವಣೆ, ಮೇ 1 ರಿಂದ ಜಾರಿ! title=

ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ(SBI) ತನ್ನ ಸೇವೆಯಲ್ಲಿ ಕೆಲ ಬದಲಾವಣೆ ಮಾಡಿಕೊಂಡಿದೆ. ಎಸ್​ಬಿಐನ ಹೊಸ ನಿಯಮದ ಪರಿಣಾಮವು ಉಳಿತಾಯ ಖಾತೆಗೆ ಸಿಗುವ ಬಡ್ಡಿಗೆ ಸಂಬಂಧಿಸಿದ್ದಾಗಿದೆ. 

ವಾಸ್ತವವಾಗಿ, ಎಸ್​ಬಿಐ ಆರ್ಬಿಐನ ಬೆಂಚ್ಮಾರ್ಕ್ ದರಕ್ಕೆ ತನ್ನ ಠೇವಣಿ ಮತ್ತು ಸಾಲಗಳ ಬಡ್ಡಿ ದರವನ್ನು ಸಂಪರ್ಕಿಸಿದೆ. ಹೀಗಾಗಿ ಎಸ್​ಬಿಐ ಉಳಿತಾಯ ಖಾತೆಯಲ್ಲಿ ಸ್ವೀಕರಿಸಿದ ಬಡ್ಡಿಯ ಮೇಲೆ ಇದು ಪರಿಣಾಮ ಬೀರಲಿದೆ. ಈ ಹಿಂದೆ ಬ್ಯಾಂಕ್ ಮನೆ ಸಾಲಗಳ ಮೇಲೆ 5 ಬೇಸಿಸ್ ಪಾಯಿಂಟ್ ಕಡಿತಗೊಳಿಸಿದೆ. ಗೃಹ ಸಾಲಗಳು ಆರ್‌ಬಿಐನ ರೆಪೋ ದರಕ್ಕೆ ಅನುಗುಣವಾಗಿ ಬದಲಾಗುತ್ತಿರುತ್ತದೆ.  ಇತ್ತೀಚಿಗೆ ಆರ್‌ಬಿಐ ರೆಪೋ ದರವನ್ನು ಕಡಿಮೆ ಮಾಡಿದ್ದು, ಎಸ್​ಬಿಐನಲ್ಲಿ 1 ಲಕ್ಷಕ್ಕೂ ಹೆಚ್ಚಿನ ಠೇವಣಿ ಮತ್ತು ಸಾಲದ ಬಡ್ಡಿ ದರಗಳು ಮೇ 1 ರಿಂದ ಬದಲಾಗಲಿವೆ.

7 ದಿನಗಳ ನಂತರ ಜಾರಿಯಾಗಲಿರುವ ನಿಯಮ;
ಮೇ 1 ರಿಂದ ಎಸ್​ಬಿಐ ಖಾತೆಯಲ್ಲಿ 1 ಲಕ್ಷದವರೆಗಿನ ಹಣ ಜಮಾ ಆಗಿದ್ದರೆ ಮೇಲೆ 3.5 ಪ್ರತಿಶತ ಬಡ್ಡಿ ಸಿಗಲಿದೆ. ಅದೇ ವೇಳೆ 1 ಲಕ್ಷಕ್ಕಿಂತ ಹೆಚ್ಚು ಹಣ ಖಾತೆಯಲ್ಲಿದ್ದರೆ ಅದರ ಮೇಲೆ 3.25 ಪ್ರತಿಶತದಷ್ಟು ಬಡ್ಡಿ ದೊರೆಯಲಿದೆ. ಎಸ್​ಬಿಐ 1 ಲಕ್ಷಕ್ಕಿಂತ ಹೆಚ್ಚು ಹಣ ಹೊಂದಿರುವವರ ತನ್ನ ಎಲ್ಲಾ ನಗದು ಕ್ರೆಡಿಟ್ ಗಳು ಮತ್ತು ಓವರ್ ಡ್ರಾಫ್ಟ್ ಖಾತೆಗಳನ್ನೂ ರೆಪೋ ದರದೊಂದಿಗೆ ಸಂಪರ್ಕಿಸಿದೆ. ಇತ್ತೀಚಿಗೆ ರಿಸರ್ವ್ ಬ್ಯಾಂಕಿನ ರೆಪೋ ದರದಲ್ಲಿ 25 ಬೇಸಿಸ್ ಪಾಯಿಂಟ್ಗಳನ್ನು ಕಡಿತಗೊಳಿಸಲಾಯಿತು. ಇದರ ನಂತರ ಬ್ಯಾಂಕ್ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ರಿಸರ್ವ್ ಬ್ಯಾಂಕಿನಿಂದ ರಿಪೋ ದರ ಕಡಿತಗೊಂಡಿದ್ದರೂ ಗ್ರಾಹಕರು ಈ ಪ್ರಯೋಜನವನ್ನು ಪಡೆಯಲಿಲ್ಲ ಎಂದು ಗ್ರಾಹಕರು ದೂರಿದ್ದಾರೆ. ಇದೀಗ ಹೊಸ ವ್ಯವಸ್ಥೆಯ ಪರಿಚಯದೊಂದಿಗೆ, ಬಡ್ಡಿಯ ದರ ಕಡಿಮೆಯಾಗುತ್ತದೆ ಮತ್ತು ಮನೆಯ ಸಾಲ ಮತ್ತು ಕಾರು ಸಾಲದ ಫಲಾನುಭವಿಗಳಿಗೆ ನೇರ ಪ್ರಯೋಜನ ದೊರೆಯುತ್ತದೆ. ಎಸ್​ಬಿಐನಲ್ಲಿ 1 ಲಕ್ಷಕ್ಕಿಂತ ಕಡಿಮೆಯಿರುವ ಸಾಲಗಳು ಮತ್ತು ಠೇವಣಿಗಳು ನಿಧಿ ಆಧಾರಿತ ಸಾಲ ದರ(MCLR) ದೊಂದಿಗೆ ಸಂಪರ್ಕಗೊಳ್ಳುತ್ತದೆ. ಎಸ್​ಬಿಐನಲ್ಲಿ ಮೇ 1 ರಿಂದ ಜಾರಿಗೆ ಬರಲಿರುವ ಹೊಸ ವ್ಯವಸ್ಥೆಯಲ್ಲಿ 1 ಲಕ್ಷಕ್ಕಿಂತ ಹೆಚ್ಚು ಹಣ ಹೊಂದಿರುವ ಉಳಿತಾಯ ಖಾತೆಗಳನ್ನು ರೆಪೋ ದರದಲ್ಲಿ ಆರ್ಬಿಐ ಬೆಂಚ್ಮಾರ್ಕ್ ರಿಪೋ ದರಕ್ಕೆ ಲಿಂಕ್ ಮಾಡಲಾಗುತ್ತದೆ. 
 

Trending News