ವಯಾನಾಡ್: ವಯಾನಾಡ್ನಲ್ಲಿ ಮಂಗಳವಾರ ನಡೆಯುತ್ತಿರುವ ಮತದಾನದಲ್ಲಿ ಎಲೆಕ್ಟ್ರಾನಿಕ್ ಮತದಾನ ಯಂತ್ರ (ಇವಿಎಂ) ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಕ್ಷೇತ್ರದಲ್ಲಿ ಮರು ಮತದಾನ ನಡೆಯಬೇಕು ಎಂದು ವಯಾನಾಡ್ ಲೋಕಸಭಾ ಕ್ಷೇತ್ರದಿಂದ ಎನ್ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ತುಷಾರ್ ವೆಲ್ಲಪ್ಪಲ್ಲಿ ಆಗ್ರಹಿಸಿದ್ದಾರೆ.
Thushar Vellappally, NDA candidate from Wayanad Lok Sabha constituency, demands re-polling after EVM malfunction
Read @ANI story | https://t.co/TapQGSGNp1 pic.twitter.com/YP5pI5ggXN
— ANI Digital (@ani_digital) April 23, 2019
ಮೂಪ್ಪಾನಾಡ್ ಪಂಚಾಯತ್ನಲ್ಲಿರುವ ಅರಮಟ್ಟದ ಸಿಎಂಎಸ್ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 79ರಲ್ಲಿ, ಮತ ಚಲಾಯಿಸಲು ಎರಡು ಬಾರಿ ಬಟನ್ ಒತ್ತಿದರೂ ಮತ ಚಲಾವಣೆಯಾಗಿಲ್ಲ. ದಯವಿಟ್ಟು ಸೂಕ್ತ ಕ್ರಮಗಳನ್ನು ಕೈಗೊಂಡು ಈ ಕ್ಷೇತ್ರದಲ್ಲಿ ಮರು ಮತದಾನಕ್ಕೆ ಅನುವು ಮಾಡಿಕೊಡಬೇಕು ಎಂದು ಮುಖ್ಯ ಚುನಾವಣಾ ಅಧಿಕಾರಿ ಸುನೀಲ್ ಕುಮಾರ್ ಜಿ ಅವರಿಗೆ ಬರಿದಿರುವ ಪತ್ರದಲ್ಲಿ ವೆಲ್ಲಪ್ಪಲ್ಲಿ ಮನವಿ ಮಾಡಿದ್ದಾರೆ.
ತುಷಾರ್ ವೆಲ್ಲಪ್ಪಲ್ಲಿ ಅವರು ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್ಎನ್ಡಿಪಿ) ಯ ಅಂಗವಾದ ಭಾರತ್ ಧರ್ಮ ಜನ ಸೇನೆಯ (ಬಿ.ಡಿ.ಜೆ.ಎಸ್) ಮುಖ್ಯಸ್ಥ.
ಕೇರಳದ 20 ಲೋಕಸಭಾ ಕ್ಷೇತ್ರಗಳಿಂದ ಒಟ್ಟು 227 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇದೇ ಮೊದಲ ಬಾರಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಯನಾಡ್ ಲೋಕಸಭಾ ಕ್ಷೇತ್ರದಿಂದ ಕಣದಲ್ಲಿದ್ದು ಎಲ್ಲರ ಗಮನ ಸೆಳೆದಿದ್ದಾರೆ.