Cooperative Banks License: ನಿಯಮಗಳ ಅನುಸರಣೆಯಲ್ಲಿ ನಿರ್ಲಕ್ಷ್ಯಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಂದು ಬ್ಯಾಂಕ್ನ ಪರವಾನಗಿಯನ್ನು ರದ್ದುಗೊಳಿಸಿದೆ. ಈ ಬಾರಿ ಯುಪಿಯ ಸಹಕಾರಿ ಬ್ಯಾಂಕ್ ಯುನೈಟೆಡ್ ಇಂಡಿಯಾ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್ನ ಪರವಾನಗಿಯನ್ನು ಆರ್ಬಿಐ ರದ್ದುಗೊಳಿಸಿದೆ. ಅಲ್ಲದೆ, ಈ ಒಂದು ತಿಂಗಳಲ್ಲಿ ಕರ್ನಾಟಕದ ಎರಡು ಬ್ಯಾಂಕ್ ಸೇರಿ ಇನ್ನು ಹಲವು ಬ್ಯಾಂಕ್ ಗಳ ಪರಾವನಿಗೆ ರದ್ದು ಮಾಡಿದೆ. ಬ್ಯಾಂಕ್ ಸಾಕಷ್ಟು ಬಂಡವಾಳವನ್ನು ಹೊಂದಿಲ್ಲ ಮತ್ತು ಗಳಿಕೆಯ ಸಾಮರ್ಥ್ಯ ಕಡಿಮೆ ಇರುವ ಕಾರಣ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.
ಹಣ ಠೇವಣಿ ಮಾಡಿದ ಗ್ರಾಹಕನ ಗತಿ ಏನು ? :
ಪರವಾನಗಿ ರದ್ದತಿಯಿಂದಾಗಿ ಬುಧವಾರ ಸಂಜೆಯಿಂದ ಬ್ಯಾಂಕ್ ವ್ಯವಹಾರ ನಡೆಸುವಂತಿಲ್ಲ ಎಂದು ಆರ್ಬಿಐ ಪ್ರಕಟಣೆಯಲ್ಲಿ ತಿಳಿಸಿದೆ. ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (ಡಿಐಸಿಜಿಸಿ) ಯಿಂದ ವಿಮಾ ಕ್ಲೈಮ್ ಅಡಿಯಲ್ಲಿ ಪ್ರತಿಯೊಬ್ಬ ಠೇವಣಿದಾರನು 5 ಲಕ್ಷ ರೂಪಾಯಿ ಮಿತಿಯವರೆಗೆ ಹಣವನ್ನು ಸ್ವೀಕರಿಸಲು ಅರ್ಹನಾಗಿರುತ್ತಾನೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ. ಬ್ಯಾಂಕ್ಗಳಲ್ಲಿ ಠೇವಣಿ ಮಾಡಿದ ಪ್ರತಿಯೊಬ್ಬ ಖಾತೆದಾರನ 5 ಲಕ್ಷದವರೆಗಿನ ಠೇವಣಿಗಳ ಮೇಲೆ ಡಿಐಸಿಜಿಸಿ ವಿಮೆ ಮಾಡುತ್ತದೆ. ವಾಣಿಜ್ಯ ಬ್ಯಾಂಕುಗಳು, ಸ್ಥಳೀಯ ಪ್ರದೇಶದ ಬ್ಯಾಂಕುಗಳು, ಪ್ರಾದೇಶಿಕ ಮತ್ತು ಸಹಕಾರಿ ಬ್ಯಾಂಕುಗಳು ಸೇರಿದಂತೆ ಎಲ್ಲಾ ಬ್ಯಾಂಕುಗಳ ಠೇವಣಿಗಳನ್ನು ಡಿಐಸಿಜಿಸಿಯ ವಿಮಾ ಯೋಜನೆಯಡಿ ಒಳಗೊಂಡಿದೆ.
ಇದನ್ನೂ ಓದಿ : Modi Government: ಟೊಮೆಟೊ ದರಕ್ಕೆ ಸಂಬಂಧಿಸಿದಂತೆ ಶ್ರೀಸಾಮಾನ್ಯರಿಗೆ ಮತ್ತೊಂದು ನೆಮ್ಮದಿಯ ಸುದ್ದಿ ನೀಡಿದ ಕೇಂದ್ರ ಸರ್ಕಾರ!
ಇದುವರೆಗೆ 5 ಸಹಕಾರಿ ಬ್ಯಾಂಕ್ಗಳ ಪರವಾನಗಿ ರದ್ದು :
ಪ್ರಸಕ್ತ ಹಣಕಾಸು ವರ್ಷದಲ್ಲಿ, ಐದು ಸಹಕಾರಿ ಬ್ಯಾಂಕ್ಗಳ ಪರವಾನಗಿಯನ್ನು ಆರ್ಬಿಐ ಇದುವರೆಗೆ ರದ್ದುಗೊಳಿಸಿದೆ. ಜುಲೈ ತಿಂಗಳಿನಲ್ಲಿಯೇ ಎಲ್ಲಾ ಐದು ಬ್ಯಾಂಕ್ಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಈ ಹಿಂದೆ ಜುಲೈ 11 ರಂದು ಕರ್ನಾಟಕದ ತುಮಕೂರಿನ ಶ್ರೀ ಶಾರದಾ ಮಹಿಳಾ ಸಹಕಾರಿ ಬ್ಯಾಂಕ್ ಮತ್ತು ಮಹಾರಾಷ್ಟ್ರದ ಸತಾರಾದಲ್ಲಿರುವ ಹರಿಹರೇಶ್ವರ ಬ್ಯಾಂಕ್ ವಿರುದ್ಧ ಕೇಂದ್ರ ಬ್ಯಾಂಕ್ ಕ್ರಮ ಕೈಗೊಂಡಿತ್ತು. ಮತ್ತೊಂದೆಡೆ, ಜುಲೈ 5 ರಿಂದ, ಬುಲ್ಧಾನ ಮೂಲದ ಮಲ್ಕಾಪುರ ಅರ್ಬನ್ ಕೋಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮತ್ತು ಬೆಂಗಳೂರು ಮೂಲದ ಸುಶ್ರುತಿ ಸೌಹಾರ್ದ ಸಹಕಾರ ಬ್ಯಾಂಕ್ ನಿಯಮಿತ ಬ್ಯಾಂಕಿಂಗ್ ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ.
ಇದನ್ನೂ ಓದಿ : ಜುಲೈ 20ಕ್ಕೆ ಹೊರಬೀಳಲಿದೆಯಾ ಈ ನಿರ್ಧಾರ? ಲಕ್ಷಾಂತರ ಜನರಿಗೆ ಸಿಗಲಿದೆ ಅದರ ಲಾಭ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.