ನವದೆಹಲಿ: 2008ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿನ ಪ್ರಮುಖ ಆರೋಪಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್, ಮುಂಬೈ ಭಯೋತ್ಪಾದನಾ ದಾಳಿಯ ಸಂದರ್ಭದಲ್ಲಿ ಹತ್ಯೆಯಾದ ಮಾಜಿ ಮುಂಬೈ ವಿರೋಧಿ ಭಯೋತ್ಪಾದನಾ ಪಡೆ ಮುಖ್ಯಸ್ಥ ಹೇಮಂತ್ ಕರ್ಕರೆ ತಮ್ಮನ್ನು ಕೆಟ್ಟದ್ದಾಗಿ ನಡೆಸಿಕೊಂಡಿದ್ದರ ಕರ್ಮದ ಫಲವಾಗಿ ನಿಧನರಾದರು ಎಂದು ಹೇಳಿದರು
"ಹೇಮಂತ್ ಕರ್ಕರೆ ಅವರು ನನ್ನನ್ನು ಮಾಲೆಗಾಂವ್ ಸ್ಫೋಟದಲ್ಲಿ ತಪ್ಪಾಗಿ ದೋಷಾರೋಪಣೆ ಮಾಡಿದರು ಮತ್ತು ನನ್ನನ್ನು ಕೆಟ್ಟದಾಗಿ ನೋಡಿಕೊಂಡರು. ಇದಕ್ಕೆ ಅವರಿಗೆ ನಾನು ನಿಮ್ಮ ಇಡೀ ಸರ್ವನಾಶ ವಾಗುವುದು ಎಂದು ಹೇಳಿದೆ. ಅದರ ಕ್ರಮದ ಫಲವಾಗಿ ಅವರು ತೀರಿಕೊಂಡರು" ಎಂದು ಸಾಧ್ವಿ ಹೇಳಿದ್ದಾರೆ.
#WATCH Pragya Singh Thakur:Maine kaha tera (Mumbai ATS chief late Hemant Karkare) sarvanash hoga.Theek sava mahine mein sutak lagta hai. Jis din main gayi thi us din iske sutak lag gaya tha.Aur theek sava mahine mein jis din atankwadiyon ne isko maara, us din uska anth hua (18.4) pic.twitter.com/COqhEW2Bnc
— ANI (@ANI) April 19, 2019
ಸೆಪ್ಟೆಂಬರ್ 29, 2008 ರಂದು ಸಂಭವಿಸಿದ ಮಾಲೆಗಾಂವ್ ಬಾಂಬ್ ಸ್ಫೋಟದಲ್ಲಿ ಆರು ಮಂದಿ ಸಾವನ್ನಪ್ಪಿದ್ದರಲ್ಲದೆ 100ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.ಮಾಲೆಗಾಂವ್ ಸ್ಫೋಟದ ತನಿಖೆ ನಡೆಸುತ್ತಿದ್ದ ಹೇಮಂತ್ ಕರ್ಕರೆ ಅವರು ದಾಳಿಯಲ್ಲಿ ಬಳಸಿದ ಮೋಟಾರ್ಸೈಕಲ್ ಮಾಲೀಕನನ್ನು ಪತ್ತೆಹಚ್ಚಿದ್ದರು.ಆ ಮೋಟಾರ್ಸೈಕಲ್ ಸಾಧ್ವಿ ಪ್ರಗ್ಯಾ ಠಾಕೂರ್ಗೆ ಸೇರಿತ್ತು ಎನ್ನುವುದು ತನಿಖೆ ವೇಳೆ ತಿಳಿದುಬಂದಿತ್ತು
ಮಹಾರಾಷ್ಟ್ರ ವಿರೋಧಿ ಭಯೋತ್ಪಾದನಾ ತಂಡ (ಎಟಿಎಸ್) ಈ ಪ್ರಕರಣದಲ್ಲಿ ಸಾಧ್ವಿ ಪ್ರಜ್ಞಾ ಠಾಕೂರ್ ಮತ್ತು ಇತರರನ್ನು ಬಂಧಿಸಿ, ಅವರು ಸ್ಫೋಟ ನಡೆಸಿದ ಹಿಂದೂ ಉಗ್ರಗಾಮಿ ಗುಂಪಿನ ಭಾಗವೆಂದು ಆರೋಪಿಸಿತ್ತು. ಮೇ 2016 ರಲ್ಲಿ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್ಐಎ) ಸಾಧ್ವಿ ಪ್ರಗ್ಯಾ ಅವರಿಗೆ ಕ್ಲೀನ್ ಚಿಟ್ ನೀಡಿತು. ಈಗ ಸಾಧ್ವಿ ಪ್ರಗ್ಯಾ ಮಧ್ಯಪ್ರದೇಶದ ಭೋಪಾಲ್ ನಿಂದ 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ವಿರುದ್ಧ ಸ್ಪರ್ಧಿಸಿದ್ದಾರೆ.