'ಮೋದಿ ಕಿ ಸೇನಾ' ಹೇಳಿಕೆ; ಮುಕ್ತಾರ್ ಅಬ್ಬಾಸ್ ನಖ್ವಿಗೆ ಚುನಾವಣಾ ಆಯೋಗ ಎಚ್ಚರಿಕೆ

ರಾಜಕೀಯ ಪ್ರಚಾರಕ್ಕಾಗಿ ಭದ್ರತಾ ಪಡೆಗಳ ಉಲ್ಲೇಖಗಳನ್ನು ಬಳಸುವುದನ್ನು ನಿಲ್ಲಿಸಬೇಕು ಹಾಗೂ ಭವಿಷ್ಯದಲ್ಲಿ ಈ ಬಗ್ಗೆ ಜಾಗರೂಕರಾಗಿರುವಂತೆ ಆಯೋಗ ಹೇಳಿದೆ.

Last Updated : Apr 18, 2019, 05:34 PM IST
'ಮೋದಿ ಕಿ ಸೇನಾ' ಹೇಳಿಕೆ; ಮುಕ್ತಾರ್ ಅಬ್ಬಾಸ್ ನಖ್ವಿಗೆ ಚುನಾವಣಾ ಆಯೋಗ ಎಚ್ಚರಿಕೆ  title=
Pic Courtesy: ANI

ನವದೆಹಲಿ: ರಾಂಪುರದ ಚುನಾವಣಾ ಸಮಾವೇಶ ಸಂದರ್ಭದಲ್ಲಿ ದೇಶದ ಸಶಸ್ತ್ರ ಪಡೆಯನ್ನು 'ಮೋದಿ ಕಿ ಸೇನಾ' ಎಂದು ಹೇಳಿದ್ದ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿಗೆ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ. ಅಲ್ಲದೆ, ರಾಜಕೀಯ ಪ್ರಚಾರಕ್ಕಾಗಿ ಭದ್ರತಾ ಪಡೆಗಳ ಉಲ್ಲೇಖಗಳನ್ನು ಬಳಸುವುದನ್ನು ನಿಲ್ಲಿಸಬೇಕು ಹಾಗೂ ಭವಿಷ್ಯದಲ್ಲಿ ಈ ಬಗ್ಗೆ ಜಾಗರೂಕರಾಗಿರುವಂತೆ ಆಯೋಗ ಹೇಳಿದೆ.

ಇದಕ್ಕೂ ಮುನ್ನ ರಾಜ್ಯ ಚುನಾವಣಾ ಅಧಿಕಾರಿಗಳು ನಖ್ವಿ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ನಖ್ವಿ ಅವರು 'ಮೋದಿ ಕಿ ಸೇನಾ' ಪದಪ್ರಯೋಗ ಬಳಸಿರುವುದಾಗಿ ಒಪ್ಪಿಕೊಂಡಿದ್ದರು.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ಸಹ ಚುನಾವಣಾ ಆಯೋಗ ಎಚ್ಚರಿಕೆ ನೀಡಿತ್ತು. ಅಲ್ಲದೆ, ಯೋಗಿ ಆದಿತ್ಯನಾಥ್ ಅವರಿಗೆ 48ಗಂಟೆಗಳ ಕಾಲ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳದಂತೆ ನಿಷೇಧ ಹೇರಿತ್ತು.

Trending News