Uniform Civil Code: ದೆಹಲಿಯ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರವು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಕುರಿತು ಕೇಂದ್ರದ ನರೇಂದ್ರ ಮೋದಿ ಸರ್ಕಾರವನ್ನು ಬೆಂಬಲಿಸಿದೆ. ಯುಸಿಸಿಗೆ ಬೆಂಬಲ ವ್ಯಕ್ತಪಡಿಸಿದ ಆಮ್ ಆದ್ಮಿ ಪಕ್ಷವು ಎಲ್ಲಾ ಸ್ಟೇಕ್ ಹೊಲ್ಡರ್ ಗಳ ಸಮಾಲೋಚನೆಯ ಮೂಲಕ ವಿಶಾಲವಾದ ಒಮ್ಮತವನ್ನು ತಲುಪಿದಾಗ ಮಾತ್ರ ಇದು ಸಾಧ್ಯ ಎಂದು ಅದು ಹೇಳಿದೆ. ಆಮ್ ಆದ್ಮಿ ಪಕ್ಷದ ನಾಯಕ ಸಂದೀಪ್ ಪಾಠಕ್, "ನಾವು ತಾತ್ವಿಕವಾಗಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಬೆಂಬಲಿಸುತ್ತೇವೆ, ಆರ್ಟಿಕಲ್ 44 ಸಹ ದೇಶದಲ್ಲಿ ಯುಸಿಸಿ ಇರಬೇಕು ಎಂದು ಹೇಳುತ್ತದೆ. ಸಮಾಲೋಚನೆಗಳು ನಡೆಯಬೇಕು ಮತ್ತು ಒಮ್ಮತವನ್ನು ತಲುಪಬೇಕು." ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ದೇಶವು ಎರಡು ಕಾನೂನುಗಳ ಮೇಲೆ ನಡೆಯಲು ಸಾಧ್ಯವಿಲ್ಲ ಮತ್ತು ಏಕರೂಪ ನಾಗರಿಕ ಸಂಹಿತೆ ಸಂವಿಧಾನದ ಒಂದು ಭಾಗವಾಗಿದೆ ಎಂದು ಹೇಳುವ ಮೂಲಕ ರಾಷ್ಟ್ರವ್ಯಾಪಿ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಗಾಗಿ ಪಿಎಂ ಮೋದಿ ಮಾಡಿದ ಈ ಪ್ರಬಲ ಪ್ರತಿಪಾದನೆಯ ಒಂದು ದಿನದ ಬಳಿಕ, ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರು "ಅಜೆಂಡಾ-ಚಾಲಿತ ಬಹುಮತದ ಸರ್ಕಾರ" ಅದನ್ನು ಜನರ ಮೇಲೆ ಹೇರಲು ಸಾಧ್ಯವಿಲ್ಲ ಏಕೆಂದರೆ ಅದು ಜನರ ನಡುವೆ "ವಿಭಜನೆ" ಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ಈ ಕುರಿತು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿರುವ ಚಿದಂಬರಂ “ಪ್ರಧಾನಿ ಯುಸಿಸಿ ಒಂದು ಸರಳ ಪ್ರಕ್ರಿಯೆ ಎಂಬಂತೆ ಬಿಂಬಿಸಲು ಯತ್ನಿಸುತ್ತಿದ್ದಾರೆ. ಆದರೆ, ಈ ಹಿಂದೆ ಇದ್ದ ಕಾನೂನು ಆಯೋಗದ ವರದಿಯನ್ನು ಪ್ರಧಾನಿಗಳು ಒಮ್ಮೆ ಓದಬೇಕು. ಅದು ಈ ಸಮಯದಲ್ಲಿ ಪ್ರಸ್ತುತವಲ್ಲ ಎಂದು ಹೇಳುತ್ತದೆ ಎಂದಿದ್ದರು. ಬಿಜೆಪಿಯವರ ಮಾತು ಮತ್ತು ನಡೆಗಳಿಂದಾಗಿ ಇಂದು ದೇಶ ಇಬ್ಭಾಗವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಜನರ ಮೇಲೆ ಹೇರಿದ ಯುಸಿಸಿ ವಿಭಜನೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅಜೆಂಡಾ ಆಧಾರಿತ ಬಹುಮತದ ಸರ್ಕಾರ ಅದನ್ನು ಜನರ ಮೇಲೆ ಹೇರಲು ಸಾಧ್ಯವಿಲ್ಲ" ಎಂದಿದ್ದರು.
ಇಂದು ಯುಸಿಸಿ ಹೆಸರಿನಲ್ಲಿ ಜನರನ್ನು ಪ್ರಚೋದಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ದೇಶವು ಎರಡು (ಕಾನೂನು) ಮೇಲೆ ಹೇಗೆ ನಡೆಯಲು ಸಾಧ್ಯ? ಸಂವಿಧಾನದಲ್ಲಿ ಸಮಾನ ಹಕ್ಕುಗಳ ಬಗ್ಗೆಯೂ ಹೇಳಲಾಗಿದೆ... ಸುಪ್ರೀಂ ಕೋರ್ಟ್ ಕೂಡ ಯುಸಿಸಿ ಜಾರಿಗೆ ತರುವಂತೆ ಹೇಳಿದೆ. ಈ (ವಿರೋಧ) ಜನರು ವೋಟ್ ಬ್ಯಾಂಕ್ ರಾಜಕಾರಣ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ-Amit Malviya ವಿರುದ್ಧ ಕರ್ನಾಟಕದಲ್ಲಿ ಆಫ್ಐಆರ್, ಟ್ವಿಟ್ಟರ್ ನಲ್ಲಿ ರಾಹುಲ್ ವಿರುದ್ಧ ವಿಡಿಯೋ ಹಂಚಿಕೆ ಆರೋಪ
ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು "ದೇಶದ ಬಹುತ್ವ ಮತ್ತು ವೈವಿಧ್ಯತೆಯನ್ನು ಕೊನೆಗೊಳಿಸಲು" ಸರ್ಕಾರ ಪರಿಗಣಿಸುತ್ತಿದೆಯೇ ಎಂದು ಪ್ರಧಾನಿಯನ್ನು ಕೇಳಿದ್ದರು .
ಇದನ್ನೂ ಓದಿ-Uniform Civil Code: ಏಕರೂಪ ನಾಗರಿಕ ಸಂಹಿತೆಯನ್ನು ಜನತೆಯ ಮೇಲೆ ಹೇರಲು ಆಗಲ್ಲ... ಒಂದು ವೇಳೆ...!
ಯುಸಿಸಿಯು ಬಿಜೆಪಿಯ ಮೂರು ಪ್ರಮುಖ ಚುನಾವಣಾ ಅಂಶಗಳಲ್ಲಿ ಒಂದಾಗಿದೆ, ಇನ್ನೊಂದು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ 370 ನೇ ವಿಧಿಯನ್ನು ರದ್ದುಗೊಳಿಸುವುದು ಮತ್ತು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ. ಕಾನೂನು ಆಯೋಗವು ಸಾರ್ವಜನಿಕರು ಮತ್ತು ಮಾನ್ಯತೆ ಪಡೆದ ಧಾರ್ಮಿಕ ಸಂಸ್ಥೆಗಳು ಸೇರಿದಂತೆ ಮಧ್ಯಸ್ಥಗಾರರಿಂದ ಯುಸಿಸಿ ಕುರಿತು ಇತ್ತೀಚಗಷ್ಟೇ ಹೊಸದಾಗಿ ಅಭಿಪ್ರಾಯಗಳನ್ನು ಕೋರಿರುವುದು ಇಲ್ಲಿ ಉಲ್ಲೇಖನೀಯ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.