Attack On Sikh: ಸಿಖ್ಖರ ಮೇಲಿನ ದಾಳಿ, ಪಾಕ್ ಉನ್ನತ ಆಯೋಗದ ರಾಜತಾಂತ್ರಿಕರಿಗೆ ಬುಲಾವ್ ಕಳುಹಿಸಿದ ಭಾರತ

Attack On Sikh: ಪಾಕಿಸ್ತಾನದ ಪೇಶಾವರದಲ್ಲಿ ಶನಿವಾರ ಅಪರಿಚಿತ ಬಂದೂಕುಧಾರಿಗಳು ಸಿಖ್ ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ.  ಕೇವಲ ಎರಡೇ ದಿನಗಳಲ್ಲಿ ಪೇಶಾವರದಲ್ಲಿ ಸಿಖ್ಖರ ಮೇಲೆ ಎರಡನೇ ಬಾರಿ ದಾಳಿ ನಡೆಸಲಾಗಿದೆ.  

Written by - Nitin Tabib | Last Updated : Jun 26, 2023, 10:26 PM IST
  • ಪ್ರಸ್ತುತ ಮನಮೋಹನ್ ಸಿಂಗ್ ಹತ್ಯೆ ಪ್ರಕರಣದಲ್ಲಿ ಕೆಲವು ಶಂಕಿತರನ್ನು ಬಂಧಿಸಲಾಗಿದೆ ಎಂದು ಪೇಶಾವರ ಪೊಲೀಸರು ತಿಳಿಸಿದ್ದಾರೆ.
  • ಮನಮೋಹನ್ ಸಿಂಗ್ ಅವರು ವೃತ್ತಿಯಲ್ಲಿ 'ಹಕೀಮ್' ಅಂದರೆ ಯುನಾನಿ ವೈದ್ಯರಾಗಿದ್ದರು ಎನ್ನಲಾಗಿದೆ.
  • ಕೊಲೆಯಲ್ಲಿ ಭಾಗಿಯಾಗಿರುವ ಪ್ರಮುಖ ಆರೋಪಿಯನ್ನು ಬಂಧಿಸುವ ಹಂತಕ್ಕೆ ತಲುಪಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
  • ಕಳೆದ 48 ಗಂಟೆಗಳಲ್ಲಿ ಪೇಶಾವರದಲ್ಲಿ ಸಿಖ್ ವ್ಯಕ್ತಿಯ ಮೇಲೆ ನಡೆದ ಎರಡನೇ ದಾಳಿ ಇದಾಗಿದೆ.
Attack On Sikh: ಸಿಖ್ಖರ ಮೇಲಿನ ದಾಳಿ, ಪಾಕ್ ಉನ್ನತ ಆಯೋಗದ ರಾಜತಾಂತ್ರಿಕರಿಗೆ ಬುಲಾವ್ ಕಳುಹಿಸಿದ ಭಾರತ title=

Attack On Sikh: ಪಾಕಿಸ್ತಾನದಲ್ಲಿ ಸಿಖ್ ಸಮುದಾಯದ ವ್ಯಕ್ತಿಗಳ ಮೇಲೆ ಇತ್ತೀಚಿನ ದಾಳಿಯ ನಂತರ, ಭಾರತವು ಸೋಮವಾರ ನವದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನ  ಹಿರಿಯ ರಾಜತಾಂತ್ರಿಕರಿಗೆ ಬುಲಾವ್ ಕಳುಹಿಸಿದೆ. ಈ ಘಟನೆಗಳ ವಿರುದ್ಧ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸುದ್ದಿ ಸಂಸ್ಥೆ ಎಎನ್‌ಐಗೆ ಮೂಲಗಳು ಈ ಕುರಿತು ಮಾಹಿತಿಯನ್ನು ನೀಡಿವೆ. ಪಾಕಿಸ್ತಾನದ ಪೇಶಾವರದಲ್ಲಿ ಶನಿವಾರ ಮನಮೋಹನ್ ಸಿಂಗ್ (35) ಎಂಬ ಸಿಖ್ ವ್ಯಕ್ತಿಯನ್ನು ಬಂದೂಕುಧಾರಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ.
 
ಮನಮೋಹನ್ ಸಿಂಗ್ ಅವರು ಪೇಶಾವರದ ಉಪನಗರವಾದ ರಶೀದ್ ಗರ್ಹಿಯಿಂದ ನಗರ ಪ್ರದೇಶಕ್ಕೆ ಹೋಗುತ್ತಿದ್ದಾಗ, ಕೆಲವು ಶಸ್ತ್ರಸಜ್ಜಿತ ವ್ಯಕ್ತಿಗಳು ಕಕ್ಷಾಲ್‌ನ ಗುಲ್ದಾರಾ ಚೌಕ್ ಬಳಿ ಅವರ ಮೇಲೆ ದಾಳಿ ನಡೆಸಿದ್ದಾರೆ. ಏಪ್ರಿಲ್ ಮತ್ತು ಜೂನ್ 2023 ರ ನಡುವೆ ಪಾಕಿಸ್ತಾನದಲ್ಲಿ ಸಿಖ್ಖರ ವಿರುದ್ಧ ನಾಲ್ಕು ಘಟನೆಗಳು ನಡೆದಿವೆ ಮತ್ತು ಭಾರತವು ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿದೆ.
 
ಪಾಕಿಸ್ತಾನಿ ಅಧಿಕಾರಿಗೆ ಸಮನ್ಸ್ ನೀಡಿದ ಭಾರತ
ಮೂಲಗಳ ಪ್ರಕಾರ, ಸಿಖ್ ಸಮುದಾಯದ ಮೇಲಿನ ಈ ಹಿಂಸಾತ್ಮಕ ದಾಳಿಗಳ ಬಗ್ಗೆ ಪ್ರಾಮಾಣಿಕವಾಗಿ ತನಿಖೆ ನಡೆಸಬೇಕು ಮತ್ತು ತನಿಖಾ ವರದಿಯನ್ನು ಹಂಚಿಕೊಳ್ಳಬೇಕು ಎಂದು ಭಾರತವು ಪಾಕಿಸ್ತಾನದ ಅಧಿಕಾರಿಗಳಿಗೆ ಒತ್ತಾಯಿಸಿದೆ. ಧಾರ್ಮಿಕ ಕಿರುಕುಳದ ನಿರಂತರ ಭಯದಲ್ಲಿ ಬದುಕುತ್ತಿರುವ ತನ್ನ ಅಲ್ಪಸಂಖ್ಯಾತರ ಸುರಕ್ಷತೆಯನ್ನು ಪಾಕಿಸ್ತಾನ ಖಚಿತಪಡಿಸಬೇಕು ಎಂದು ಭಾರತ ಬಯಸಿದೆ ಎನ್ನಲಾಗುತ್ತಿದೆ. 

ಇದನ್ನೂ ಓದಿ-Wagner Mutiny: ರಷ್ಯಾದಲ್ಲಿನ ವ್ಯಾಗ್ನರ್ ದಂಗೆಯ ಕುರಿತು ಅಮೆರಿಕಾಗೆ ಮೊದಲೇ ತಿಳಿದಿತ್ತು, ಯೆವೇನಿ ಪ್ರಿಗೋಝಿನ್ ಜೊತೆಗೆ ಸಿಕ್ರೆಟ್ ಒಪ್ಪಂದ?
 
ಕೊಲೆ ಪ್ರಕರಣದಲ್ಲಿ ಬಂಧನ
ಪ್ರಸ್ತುತ ಮನಮೋಹನ್ ಸಿಂಗ್ ಹತ್ಯೆ ಪ್ರಕರಣದಲ್ಲಿ ಕೆಲವು ಶಂಕಿತರನ್ನು ಬಂಧಿಸಲಾಗಿದೆ ಎಂದು ಪೇಶಾವರ ಪೊಲೀಸರು ತಿಳಿಸಿದ್ದಾರೆ. ಮನಮೋಹನ್ ಸಿಂಗ್ ಅವರು ವೃತ್ತಿಯಲ್ಲಿ 'ಹಕೀಮ್' ಅಂದರೆ ಯುನಾನಿ ವೈದ್ಯರಾಗಿದ್ದರು ಎನ್ನಲಾಗಿದೆ. ಕೊಲೆಯಲ್ಲಿ ಭಾಗಿಯಾಗಿರುವ ಪ್ರಮುಖ ಆರೋಪಿಯನ್ನು ಬಂಧಿಸುವ ಹಂತಕ್ಕೆ ತಲುಪಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ 48 ಗಂಟೆಗಳಲ್ಲಿ ಪೇಶಾವರದಲ್ಲಿ ಸಿಖ್ ವ್ಯಕ್ತಿಯ ಮೇಲೆ ನಡೆದ ಎರಡನೇ ದಾಳಿ ಇದಾಗಿದೆ.

ಇದನ್ನೂ ಓದಿ-Yevgeny Prigozhin ಯಾರು? ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೆ ನೇರ ಚಾಲೆಂಜ್!
 
ಪಾಕಿಸ್ತಾನದಲ್ಲಿ ಸಿಖ್ಖರ ಮೇಲೆ ಹೆಚ್ಚುತ್ತಿರುವ ದಾಳಿಗಳು
ಶುಕ್ರವಾರ ನಡೆದ ಗುಂಡಿನ ದಾಳಿಯಲ್ಲಿ ಸಿಖ್ ವ್ಯಕ್ತಿಯೊಬ್ಬರು ಗಾಯಗೊಂಡಿದ್ದರು. ಸಿಖ್ ಉದ್ಯಮಿ ತ್ರಿಲೋಕ್ ಸಿಂಗ್ ಮೇಲಿನ ದಾಳಿಯ ಕುರಿತು ಭಯೋತ್ಪಾದನಾ ನಿಗ್ರಹ ಇಲಾಖೆ (CTD) ತನಿಖೆ ನಡೆಸುತ್ತಿದೆ. ಪೇಶಾವರದಲ್ಲಿ ಇಬ್ಬರು ಸಿಖ್ ವ್ಯಕ್ತಿಗಳ ಮೇಲೆ ನಡೆದ ದಾಳಿಯನ್ನು 48 ಗಂಟೆಗಳ ಒಳಗೆ ಕೂಲಂಕುಷವಾಗಿ ತನಿಖೆ ಮಾಡಿದ ನಂತರವಷ್ಟೇ ಇದರ ಹಿಂದಿನ ನಿಜವಾದ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News