Weird Marriage Rituals: ಈ ದೇಶದಲ್ಲಿ ಮದುವೆಯಾಗಲು ಇನ್ನೊಬ್ಬರ ಹೆಂಡತಿಯನ್ನು ಕದಿಯಲಾಗುತ್ತದೆ!

Weird Marriage Rituals: ಈ ರೀತಿ ಬೇರೆಯವರ ಹೆಂಡತಿ ಕದ್ದು ಮದುವೆಯಾಗುವ ವ್ಯಕ್ತಿಗೆ ಆ ದೇಶದಲ್ಲಿ ಯಾವುದೇ ರೀತಿಯ ದಂಡ ಅಥವಾ ಶಿಕ್ಷೆ ನೀಡುವುದಿಲ್ಲ. ಇದು ವಿಚಿತ್ರವಾದರೂ ನಿಜ.

ಮದುವೆಯ ವಿಚಿತ್ರ ಆಚರಣೆಗಳು: ಮದುವೆಗೆ ಸಂಬಂಧಿಸಿದಂತೆ ಪ್ರಪಂಚದಾದ್ಯಂತ ವಿವಿಧ ಆಚರಣೆಗಳು ಮತ್ತು ಪದ್ಧತಿಗಳಿವೆ. ಭಾರತದಲ್ಲಿಯೂ ವಿಭಿನ್ನ ಸಂಪ್ರದಾಯ ಮತ್ತು ಪದ್ಧತಿಗಳು ಚಾಲ್ತಿಯಲ್ಲಿವೆ. ಭಾರತದ ಪ್ರತಿಯೊಂದು ರಾಜ್ಯದ ವಿವಿಧ ಸಮುದಾಯಗಳಲ್ಲಿ ಮದುವೆಗೆ ಸಂಬಂಧಿಸಿದಂತೆ ವಿಭಿನ್ನ ಸಂಪ್ರದಾಯಗಳಿವೆ. ಆದರೆ ಇಂದು ನಾವು ಇತರರ ಹೆಂಡತಿಯನ್ನು ಕದ್ದು ನಂತರ ಮದುವೆಯಾಗುವ ದೇಶದ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಈ ರೀತಿ ಬೇರೆಯವರ ಹೆಂಡತಿ ಕದ್ದು ಮದುವೆಯಾಗುವ ವ್ಯಕ್ತಿಗೆ ಆ ದೇಶದಲ್ಲಿ ಯಾವುದೇ ರೀತಿಯ ದಂಡ ಅಥವಾ ಶಿಕ್ಷೆ ನೀಡುವುದಿಲ್ಲ. ಇದು ವಿಚಿತ್ರವಾದರೂ ನಿಜ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ನಿಮಗೆ ಇದು ವಿಚಿತ್ರ ಅನಿಸಬಹುದು, ಆದರೂ ಇದು ಸತ್ಯ. ಆಫ್ರಿಕಾದಲ್ಲಿ ಒಂದು ಬುಡಕಟ್ಟು ಇದೆ, ಅಲ್ಲಿ ಜನರು ಮದುವೆಯಾಗಲು ಇತರರ ಹೆಂಡತಿಯರನ್ನು ಕದಿಯಬೇಕಾಗುತ್ತದೆ.

2 /5

ನಾವು ಮಾತನಾಡುತ್ತಿರುವುದು ಆಫ್ರಿಕಾದ ವೊಡಾಬ್ಬೊ ಬುಡಕಟ್ಟಿನ ಬಗ್ಗೆ. ಈ ರೀತಿಯ ವಿವಾಹವು ಈ ಬುಡಕಟ್ಟಿನ ಸಂಪ್ರದಾಯದ ಭಾಗವಾಗಿದೆ. ಇಲ್ಲಿನ ಜನರು ಇತರರ ಹೆಂಡತಿಯರನ್ನು ಕದ್ದು ಅವರನ್ನು ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳಬೇಕು.

3 /5

ವರದಿಗಳ ಪ್ರಕಾರ ಈ ಬುಡಕಟ್ಟಿನಲ್ಲಿ ಮೊದಲ ಮದುವೆಯನ್ನು ಕುಟುಂಬ ಸದಸ್ಯರ ಒಪ್ಪಿಗೆಯೊಂದಿಗೆ ಮಾಡಲಾಗುತ್ತದೆ. ಆದರೆ 2ನೇ ಮದುವೆಗೆ ಸಂಬಂಧಿಸಿದಂತೆ ಸಂಪ್ರದಾಯದಲ್ಲಿ ಸ್ವಲ್ಪ ಟ್ವಿಸ್ಟ್ ಇದೆ. ಯಾರಾದರೂ ಇನ್ನೊಬ್ಬರನ್ನು ಮದುವೆಯಾಗಬಯಸಿದ್ರೆ, ಆತ ಇನ್ನೊಬ್ಬನ ಹೆಂಡತಿಯನ್ನು ಕದಿಯಬೇಕು. ಇದು ಆತನ ಕೈಲಿ ಸಾಧ್ಯವಾಗದಿದ್ದರೆ, ಆತ ಮತ್ತೆ ಮದುವೆಯಾಗುವ ಹಕ್ಕು ಪಡೆಯುವುದಿಲ್ಲ.

4 /5

ಪ್ರತಿವರ್ಷ ಈ ಬುಡಕಟ್ಟುಗಳಲ್ಲಿ ಗೆರೆವೋಲ್ ಹಬ್ಬವನ್ನು ಆಯೋಜಿಸಲಾಗುತ್ತದೆ. ಈ ಹಬ್ಬದಲ್ಲಿ ಹುಡುಗರು ಮುಖಕ್ಕೆ ಬಣ್ಣ ಹಚ್ಚಿಕೊಂಡು ಅಲಂಕಾರ ಮಾಡಿಕೊಳ್ಳುತ್ತಾರೆ. ನಂತರ ಅವರು ಸಾಮೂಹಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಅಲ್ಲಿ ಅವರು ಇನ್ನೊಬ್ಬ ವ್ಯಕ್ತಿಯ ಹೆಂಡತಿಯ ಮುಂದೆ ನೃತ್ಯ ಮಾಡುತ್ತಾ ಅವರನ್ನು ಓಲೈಸಲು ಪ್ರಯತ್ನಿಸುತ್ತಾರೆ.

5 /5

ಆದರೆ ಇದಕ್ಕಾಗಿ ಆ ಮಹಿಳೆಯ ಪತಿಗೆ ತಿಳಿಯದಂತೆ ನೋಡಿಕೊಳ್ಳಬೇಕು. ವಿವಾಹಿತ ಮಹಿಳೆ ಪುರುಷನತ್ತ ಆಕರ್ಷಿತಳಾಗಿ ಮನೆ ಬಿಟ್ಟು ಓಡಿ ಹೋದರೆ ಸಮುದಾಯದ ಜನರು ಆಕೆಯನ್ನು ಕರೆತಂದು ಮದುವೆ ಮಾಡಿಸುತ್ತಾರೆ. ಇದಾದ ಬಳಿಕ ಇಬ್ಬರ ಮದುವೆಯನ್ನು ಪ್ರೇಮವಿವಾಹವೆಂದು ಒಪ್ಪಿಕೊಳ್ಳಲಾಗುತ್ತದೆ.