Tamanna Bhatia : ಬಾಲಿವುಡ್ ಮಿಲ್ಕಿ ಬ್ಯೂಟಿ ತಮನ್ನಾ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಇವರು ತಮಿಳು ಮತ್ತು ತೆಲುಗು ಸಿನಿರಂಗದಿಂದ ಗುರುತಿಸಿಕೊಂಡವರು. ಸೌತ್ನ ಬಹುತೇಕ ಎಲ್ಲ ಸ್ಟಾರ್ಗಳ ಜೊತೆ ಇವರು ನಟಿಸಿದ್ದಾರೆ. ಇನ್ನು ಹೀಗಿರುವಾಗಲೇ ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮಿಡಿಯಾದಲ್ಲಿ ತಮನ್ನಾ ಭಾಟಿಯಾ ಭಾರೀ ಚರ್ಚೆಯಲ್ಲಿದ್ದಾರೆ.
ತಮನ್ನಾ ಹಾಗೂ ವಿಜಯ್ ವರ್ಮಾ ನಟಿಸಿರುವ ಜೀ ಕರ್ದಾ ವೆಬ್ ಸಿರೀಸ್ನ ಹಸಿಬಿಸಿ ದೃಶ್ಯಗಳು ಎಲ್ಲರಿಗೂ ಅಚ್ಚರಿ ಮೂಡಿಸಿದ್ದವು. ತಮನ್ನಾ ಕಿಸ್ಸಿಂಗ್ ಸೀನ್ಗಳನ್ನು ಸಹ ಒಪ್ಪಿಕೊಳ್ಳುತ್ತಿರಲಿಲ್ಲ ಆದರೆ ಇದೀಗ ಇಷ್ಟು ಮೈಚಳಿ ಬಿಟ್ಟು ನಟಿಸಿದ್ದು ಎಲ್ಲರಿಗೂ ಆಶ್ಚರ್ಯಚಕಿತರಾಗುವಂತೆ ಮಾಡಿತ್ತು. ಹೀಗೆ ಬೋಲ್ಡ್ ಲುಕ್ನಲ್ಲಿ ಕಾಣಿಸಿಕೊಂಡ ಬಳಿಕ ನಟಿ ತಮನ್ನಾ ಈಗ ಲಸ್ಟ್ ಸ್ಟೋರಿಸ್ ಸೀಸನ್ 2 ಶೂಟಿಂಗ್ ಬಗ್ಗೆ ನಟಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ-ಕಿರುತೆರೆಯ ರಾಮ ಸೀತೆ ಇವರು..ಕನ್ನಡತಿ ಸಿರೀಯಲ್ನ ಈ ಜೋಡಿಯ ಬಗ್ಗೆ ನಿಮ್ಮ ಅನಿಸಿಕೆ ಹೇಳಿ..!
ನಟಿ ತಮನ್ನಾ ಯಾವುದೇ ಕಿಸ್ಸಿಂಗ್ ಸೀನ್ಗಳಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಸಿನಿ ರಂಗಕ್ಕೆ ಕಾಲಿಟ್ಟ ಬಳಿಕ ಆ ಒಂದು ರೂಲ್ಸ್ನ್ನು ಫಾಲೋ ಮಾಡುತ್ತಿದ್ದರು. ಇದೀಗ ನಟಿ ತಮನ್ನಾ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬೋಲ್ಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಲಿಪ್ ಕಿಸ್ ಅಲ್ಲ, ಬೆಡ್ ರೂಂ ದೃಶ್ಯಗಳಲ್ಲಿಯೂ ಮೈಚಳಿ ಬಿಟ್ಟು ನಟಿಸಿದ್ದಾರೆ.
ಲಸ್ಟ್ ಸ್ಟೋರೀಸ್ 2 ಶೂಟಿಂಗ್ ಸೆಟ್ನಲ್ಲಯೇ ವಿಜಯ್ ವರ್ಮಾ ಹಾಗೂ ತಮನ್ನಾ ಭಾಟಿಯಾ ಮದ್ಯ ಪ್ರೀತಿ ಚಿಗುರಿದ್ದು ಎನ್ನಲಾಗುತ್ತಿದೆ. ಇನ್ನು ಇದೇ ಸಮಯದಲ್ಲಿಯೇ ತಮನ್ನಾ, ತಾನು ಇಂಟಿಮೇಟ್ ದೃಶ್ಯಗಳಲ್ಲಿ ನಟಿಸುವಾಗ ವಿಜಯ್ ನನಗೆ ತುಂಬಾ ಸಪೋರ್ಟ್ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇನ್ನು ಸಂದರ್ಶನದಲ್ಲಿ ವಿಜಯ್ ವರ್ಮಾ ಬಗ್ಗಯೂ ನಟಿ ತಮನ್ನಾ ಮಾತನಾಡಿದ್ದಾರೆ.
"ವಿಜಯ್ ಹೊರತು ಬೇರೆ ಯಾರೋ ಆ ಜಾಗದಲ್ಲಿದ್ದರೆ ನಾನು ಸೇಫ್ ಇರುತ್ತಿದ್ದೇನಾ. ರಕ್ಷಣೆ ಅನ್ನೊದು ಕಲಾವಿದರಿಗೆ ಬಹಳ ಮುಖ್ಯ. ರಕ್ಷಣೆ ಇದೆ ಎಂದಾದರೇ ಅಲ್ಲಿ ಕಲಾವಿದರು ಏನು ಬೇಕಾದರೂ ಮಾಡಲು ಸಿದ್ದರಿರುತ್ತಾರೆ. ಆ ವಿಚಾರದಲ್ಲಿ ವಿಜಯ್ ವರ್ಮಾ ಹಸಿಬಿಸಿ ದೃಶ್ಯಗಳಲ್ಲಿ ತುಂಬಾ ಸಹಕರಿಸಿದರು. ನನಗೆ ಧೈರ್ಯ ತುಂಬಿ, ಕಂಪರ್ಟ್ ಫೀಲ್ ನೀಡಿ, ನನಗೆ ಸೇಫ್ ಭಾವನೆಬರುವಂತೆ ನಡೆದುಕೊಂಡಿದ್ದಾರೆ ಇದರಿಂದ ನನಗೆ ನಟಿಸುವುದು ಸುಲಭವಾಯಿತು" ಎಂದಿದ್ದಾರೆ
ಇದನ್ನೂ ಓದಿ-ಭರ್ಜರಿ ಬ್ಯಾಚುಲರ್ಸ್ಗೆ ಜೋಡಿ ಆಗೋಕೆ ಬರ್ತಾ ಇರೋ ಕಿರುತೆರೆ ಸುಂದರಿಯರು ಇವರೇ ನೋಡಿ..!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.