ನವದೆಹಲಿ: 2019 ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಗುರುವಾರ ರಾತ್ರಿ ಅಭ್ಯರ್ಥಿಗಳ 13 ನೇ ಪಟ್ಟಿ ಬಿಡುಗಡೆ ಮಾಡಿದೆ.
ಉತ್ತರ ಪ್ರದೇಶ, ಗುಜರಾತ್ ಮತ್ತು ರಾಜಸ್ಥಾನದ 31 ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿದ್ದು, ರಾಜಸ್ಥಾನದ 19, ಗುಜರಾತ್ 6 ಮತ್ತು ಉತ್ತರ ಪ್ರದೇಶದ 6 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಈ ಪಟ್ಟಿಯಲ್ಲಿದೆ. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪುತ್ರ ವೈಭವ್ ಗೆಹ್ಲೋಟ್ ಗೆ ಜೋಧ್ಪುರ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲಾಗಿದ್ದು, ಮಾಜಿ ಸಚಿವ ಜಸ್ವಂತ್ ಸಿಂಗ್ ಪುತ್ರ ಮನ್ವೇಂದ್ರ ಸಿಂಗ್ ಗೆ ಬಾಡ್ಮೆರ್ ನಿಂದ, ಕೇಂದ್ರ ಸಚಿವ ಬಂವಾರ್ ಜಿತೇಂದ್ರ ಸಿಂಗ್ ಅಳ್ವಾರ್ ನಿಂದ ಕಣಕ್ಕಿಳಿಯಲಿದ್ದಾರೆ.
ಉತ್ತರಪ್ರದೇಶದಲ್ಲಿ ಸಂಬಲ್ ಕ್ಷೇತ್ರದಿಂದ ಜೆಪಿ ಸಿಂಗ್, ಶಾಹಜಹಾನ್ಪುರ ಕ್ಷೇತ್ರದಿಂದ ಬ್ರಹ್ಮ ಸ್ವರೂಪ ಸಾಗರ್, ಝಾನ್ಸಿ ಕ್ಷೇತ್ರದಿಂದ ಶಿವಶರಣ್ ಕುಶವಾಹ್, ಪೂಲ್'ಪುರದಿಂದ ಪಂಕಜ್ ನಿರಂಜನ್, ಮಹಾರಾಜಗಂಜ್ ಕ್ಷೇತ್ರದಿಂದ ತನುಶ್ರೀ ತ್ರಿಪಾಠಿ ಮತ್ತು ದೇವರಿಯ ಕ್ಷೇತ್ರದಿಂದ ನಿಯಾಜ್ ಅಹಮದ್ ಅವರಿಗೆ ಟಿಕೆಟ್ ನೀಡಲಾಗಿದೆ.
ಗುಜರಾತ್ ರಾಜ್ಯದ ಪಾಟ್ನಾ ಕ್ಷೇತ್ರದಿಂದ ಜಗದೀಶ್ ಠಾಕೂರ್, ರಾಜಕೋಟ್ ಕ್ಷೇತ್ರದಿಂದ ಲಲಿತ್ ಕಾಗಾಥಾರಾ, ಪೋರಬಂದರ್ ಕ್ಷೇತ್ರದಿಂದ ಲಲಿತ್ ವಸೋಯ್, ಜೂನಾಗಡ್ ಕ್ಷೇತ್ರದಿಂದ ಪುಂಜಭಾಯ್, ಪಂಚ ಮಹಲ್ ನಿಂದ ವಿಕೆ ಖಂತ್, ವಲ್ಸಾಡ್ ಕ್ಷೇತ್ರದಿಂದ ಜೀತೂ ಚೌಧರಿ ಕಣಕ್ಕಿಳಿಯಲಿದ್ದಾರೆ.
Congress releases list of 31 candidates (19 Rajasthan, 6 each for Gujarat & Uttar Pradesh) for the upcoming #LokSabhaElections2019 pic.twitter.com/ZX4u3GUt3V
— ANI (@ANI) March 28, 2019
ಲೋಕಸಭಾ ಚುನಾವಣೆಯು 7 ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದ ಚುನಾವಣೆ ಏಪ್ರಿಲ್ 11ರಂದು ನಡೆಯಲಿದೆ. ಎಲ್ಲ ಹಂತಗಳ ಮತಎಣಿಕೆ ಮೇ 23ರಂದು ನಡೆಯಲಿದ್ದು ಅಂದೇ ಫಲಿತಾಂಶ ಹೊರಬೀಳಲಿದೆ.