Guru Gochar 2023: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಗುರು ಶುಭ ಸ್ಥಾನದಲ್ಲಿದ್ದಾಗ ಮದುವೆ ಸೇರಿದಂತೆ ಇತರ ಮಂಗಳ ಕಾರ್ಯಗಳು ಜರುಗುತ್ತವೆ. ನವಗ್ರಹಗಳಲ್ಲೇ ಅತ್ಯಂತ ಶುಭ ಗ್ರಹವೆಂದು ಪರಿಗಣಿಸಲ್ಪಟ್ಟಿರುವ ದೇವಗುರು ಬೃಹಸ್ಪತಿಯನ್ನು ಅದೃಷ್ಟ, ಸುಖ-ಸಂತೋಷಕಾರಕನೆಂದು ಪರಿಗಣಿಸಲಾಗುತ್ತದೆ. ಸದ್ಯ 2023 ರ ಏಪ್ರಿಲ್ 22 ರಂದು ಮೇಷ ರಾಶಿಯನ್ನು ಪ್ರವೇಶಿಸಿರುವ ಗುರು ಮೇ 1, 2024 ರವರೆಗೆ ಇದೇ ರಾಶಿಯಲ್ಲಿ ಸಂಚರಿಸುತ್ತಾನೆ. ಇದರ ಪ್ರಭಾವ ದ್ವಾದಶ ರಾಶಿಗಳ ಮೇಲೆ ಕಂಡು ಬರುತ್ತದೆ. ಆದರೂ, ಈ ಸಮಯದಲ್ಲಿ ಐದು ರಾಶಿಯವರ ಜೀವನದಲ್ಲಿ ಭಾಗ್ಯೋದಯವನ್ನು ಕರುಣಿಸಲಿರುವ ಗುರುವು ಹಣದ ಹೊಳೆಯನ್ನೇ ಹರಿಸಲಿದ್ದಾನೆ ಎಂದು ಹೇಳಲಾಗುತ್ತಿದೆ.
2024ರ ಏಪ್ರಿಲ್ ತಿಂಗಳವರೆಗೂ ಈ ರಾಶಿಯವರಿಗೆ ಭಾರೀ ಸಂಪತ್ತನ್ನು ಕರುಣಿಸಲಿದ್ದಾನೆ ಗುರು:
ಮೇಷ ರಾಶಿ:
ಸ್ವ ರಾಶಿಯಲ್ಲಿಯೇ ಗುರುವಿನ ಸಂಚಾರವು ಈ ರಾಶಿಯವರಿಗೆ ಮುಂದಿನ ಏಪ್ರಿಲ್ ತಿಂಗಳವರೆಗೆ ಬಂಪರ್ ಪ್ರಯೋಜನಗಳನ್ನು ತರಲಿದೆ. ಈ ಸಮಯದ್ಲಲಿ ಮೇಷ ರಾಶಿಯವರಿಗೆ ಉದ್ಯೋಗ ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಉದ್ಯೋಗಸ್ಥರಿಗೆ ಬಡ್ತಿ-ಇನ್ಕ್ರಿಮೆಂಟ್ ಪ್ರಾಪ್ತಿಯಾಗಲಿದೆ. ಮದುವೆಗಾಗಿ ಪ್ರಯತ್ನಿಸುತ್ತಿದ್ದವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.
ಸಿಂಹ ರಾಶಿ:
ಮೇಷ ರಾಶಿಯಲ್ಲಿ ಬೃಹಸ್ಪತಿ ಉಪಸ್ಥಿತಿಯು ಸಿಂಹ ರಾಶಿಯವರ ಅದೃಷ್ಟವನ್ನು ಬೆಳಗಲಿದೆ. ಈ ಸಮಯದಲ್ಲಿ ಸಿಂಹ ರಾಶಿಯವರು ವೃತ್ತಿ ಬದುಕಿನಲ್ಲಿ ಯಶಸ್ಸಿನ ಉತ್ತುಂಗವನ್ನು ಏರುವರು. ಅಷ್ಟೇ ಅಲ್ಲದೆ, ನಿಮ್ಮ ಬಹುದಿನದ ಕನಸುಗಳು ಈಗ ಈಡೇರಲಿದೆ. ನಿಮ್ಮ ಪ್ರೀತಿಗೆ ಮನೆಯವರ ಒಪ್ಪಿಗೆ ದೊರೆತು ವಿವಾಹ ಯೋಗವೂ ಇದೆ.
ಇದನ್ನೂ ಓದಿ- Shasha Rajyoga: ಶನಿ ದೇವನ ಕೃಪೆಯಿಂದ ಈ ರಾಶಿಯವರಿಗೆ ಪ್ರಾಪ್ತಿಯಾಗಲಿದೆ ಕುಬೇರನ ಸಂಪತ್ತು
ಕನ್ಯಾ ರಾಶಿ:
ಗುರು ರಾಶಿ ಪರಿವರ್ತನೆಯು ಕನ್ಯಾ ರಾಶಿಯವರಿಗೆ ವಿತ್ತೀಯ ಲಾಭವನ್ನು ನೀಡಲಿದ್ದು ದಿಢೀರ್ ಧನಾಗಮನವು ನಿಮ್ಮ ಆರ್ಥಿಕ ಸಂಕಷ್ಟಗಳನ್ನು ಕೊನೆಗೊಳಿಸಲಿದೆ. ಉದ್ಯೋಗದಲ್ಲಿ ಪ್ರಗತಿ, ವ್ಯವಹಾರದಲ್ಲಿ ಬಂಪರ್ ಲಾಭ ಸಾಧ್ಯತೆ ಇದೆ. ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ.
ತುಲಾ ರಾಶಿ:
ತುಲಾ ರಾಶಿಯವರಿಗೆ ಗುರುವು ಶುಭ ಸ್ಥಾನದಲ್ಲಿದ್ದು ಬಂಪರ್ ಆರ್ಥಿಕ ಪ್ರಯೋಜನವನ್ನು ನೀಡಲಿದ್ದಾನೆ. ದೀರ್ಘ ಸಮಯದಿಂದ ಬೇರೆಡೆ ಸಿಲುಕಿರುವ ಹಣ ಈಗ ನಿಮ್ಮ ಕೈ ಸೇರಲಿದೆ. ನಿಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಅಥವಾ ಉದ್ಯೋಗಕ್ಕಾಗಿ ವಿದೇಶ ಪ್ರಯಾಣ ಯೋಗವಿದ್ದು ಮಕ್ಕಳ ಪ್ರಗತಿಯಿಂದ ಮನಃಶಾಂತಿ ಸಿಗಲಿದೆ. ವ್ಯಾಪಾರ ವೃದ್ದಿಯಾಗಲಿದೆ.
ಇದನ್ನೂ ಓದಿ- Shani Vakri Surya Gochar: ಇನ್ನು 11 ದಿನಗಳ ಬಳಿಕ ಈ ರಾಶಿಯವರಿಗೆ ಸುವರ್ಣ ದಿನ ಆರಂಭ
ಮೀನ ರಾಶಿ:
ಗುರು ರಾಶಿ ಬದಲಾವಣೆಯು ಮೀನ ರಾಶಿಯವರಿಗೂ ಕೂಡ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ಯಾವುದೇ ವಿಷಯದಲ್ಲಿ ನೀವು ತೆಗೆದುಕೊಳ್ಳುವ ಕಠಿಣ ನಿರ್ಧಾರಗಳು ನಿಮ್ಮ ಭವಿಷ್ಯವನ್ನು ಬೆಳಗಿಸಲಿದೆ. ನಿಮ್ಮ ಪ್ರತಿ ಕೆಲಸದಲ್ಲೂ ನಿಮ್ಮ ಬಂಧು-ಮಿತ್ರರು ಹೆಗಲು ಕೊಟ್ಟು ನಿಲ್ಲುವುದರಿಂದ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಈ ಸಮಯದಲ್ಲಿ ಆಸ್ತಿ-ವಾಹನ ಖರೀದಿ ಯೋಗವೂ ಇದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.