Bottle Gourd Benefits: ಸೋರೆಕಾಯಿ ಕಂಡರೆ ಸಿಡಿಮಿಡಿ ಮಾಡುವವರು ಈ ಲೇಖನ ಓದಿ...

Lauki Health Benefits: ಸೋರೆಕಾಯಿ ಕಂಡರೆ ಅದನ್ನು ದೂರ ಇಡುವವರೇ ಹೆಚ್ಚು ಆದರೆ ಅದರಿಂದ ಆರೋಗ್ಯಕ್ಕೆ ಲಾಭಗಳು ಮಾತ್ರ ಹಲವಾರು ಇವೆ. ಸೋರೆಕಾಯಿ ಬಳ್ಳಿಯಲ್ಲಿ ಬಿಡುವ ಒಂದು ತರಕಾರಿಯಾಗಿದೆ.

Written by - Zee Kannada News Desk | Last Updated : May 25, 2023, 04:39 PM IST
  • ಹಲವು ರೋಗಗಳ ಸಮಸ್ಯಗೆ ಸೋರೆಕಾಯಿ ಉತ್ತಮ ಆಹಾರ
  • ಸೋರೆಕಾಯಿ ವಿಟಮಿನ್ ಎ, ಕ್ಯಾಲ್ಸಿಯಂ ಸೇರಿದಂತೆ ಅನೇಕ ಪೋಷಕಾಂಶ ಹೊಂದಿದೆ
  • ಮಲೆನಾಡು, ಕರಾವಳಿ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುವ ತರೆಕಾರಿಯಾಗಿದೆ
Bottle Gourd Benefits: ಸೋರೆಕಾಯಿ ಕಂಡರೆ ಸಿಡಿಮಿಡಿ ಮಾಡುವವರು ಈ ಲೇಖನ ಓದಿ... title=

Health Tipes: ಸೋರೆಕಾಯಿ ಕಂಡರೆ ಅದನ್ನು ದೂರ ಇಡುವವರೇ ಹೆಚ್ಚು ಆದರೆ ಅದರಿಂದ ಆರೋಗ್ಯಕ್ಕೆ ಲಾಭಗಳು ಮಾತ್ರ ಹಲವಾರು ಇವೆ. ಸೋರೆಕಾಯಿ ಬಳ್ಳಿಯಲ್ಲಿ ಬಿಡುವ ಒಂದು ತರಕಾರಿಯಾಗಿದೆ. ಇದನ್ನು ಹೆಚ್ಚಾಗಿ ಮಲೆನಾಡು, ಕರಾವಳಿ ಪ್ರದೇಶದಲ್ಲಿ ಇದನ್ನು ಬೆಳೆಯುವುದನ್ನು ಕಾಣಬಹುದು. 

ಸೋರೆಕಾಯಿ ಪದರ್ಥ,ಖಾದ್ಯಗಳನ್ನು ಇಷ್ಟ ಪಡುವವರ ಸಂಖ್ಯೆ ತೀರ ಕಡಿಮೆ. ಈ  ತರಕಾರಿಯಲ್ಲಿ ಹೇರಳ ನೀರಿನಾಂಶ ವಿರುವುದರಿಂದ ಉಷ್ಣ ದೇಹವನ್ನು ಹೊಂದಿದ್ದವರಿಗೆ ಉತ್ತಮ ಆಹಾರವಾಗಿದೆ. ಇದರಲ್ಲಿ ವಿಟಮಿನ್ ಸಿ,ಕ್ಯಾಲ್ಸಿಯಂ ಹೇರಳವಾಗಿದೆ.

ಇದನ್ನೂ ಓದಿ: Brinjal For Health : ಬದನೆಕಾಯಿ ಎಂದರೆ ಮೂಗು ಮುರಿಯುವವರು ಒಮ್ಮೆ ಈ ಲೇಖನ ಓದಿ....

ಸೋರೆಕಾಯಿ ಬಳ್ಳಿಯಲ್ಲಿ ಬಿಡುವ ಒಂದು ತರಕಾರಿ. ಅಧಿಕ ನೀರಿನಂಶವನ್ನು ಒಳಗೊಂಡಿರುವ ಸೋರೆಕಾಯಿಯು ಅತ್ಯಂತ ಔಷಧೀಯಗುಣಗಳನ್ನು ಒಳಗೊಂಡಿದೆ. ಈ ತರಕಾರಿ ಹಿಂದಿನ ಕಾಲದಲ್ಲಿ ಸೀಮಿತ ಅವಧಿಯಲ್ಲಿ ಅಥವಾ ಕಾಲದಲ್ಲಿ ಮಾತ್ರ ಬೆಳೆಯಲಾಗುತ್ತಿತ್ತು. ಆದರೆ ಈಗ ಎಲ್ಲಾ ಕಾಲದಲ್ಲೂ ಬೆಳೆಯನ್ನು ಬೆಳೆಯುತ್ತಾರೆ.

ತೂಕ ಇಳಿಕೆಗೆ ಸಹಕಾರಿ 
ಸೋರೆಕಾಯಿಯಲ್ಲಿ ಹೆಚ್ಚು ನೀರಿನಾಂಶ ಹಾಗೂ  ಕಡಿಮೆ ಕ್ಯಾಲರಿ ಹೊಂದಿದ್ದರಿಂದ ಇದು ದೇಹದ ತೂಕ ಇಳಿಕೆಗೆ ಸಹಕಾರಿಯಾಗಿದೆ. ಅಧಿಕ ಕೊಲೆಸ್ಟ್ರಾಲ್, ಹೃದಯದ ಆರೋಗ್ಯಕ್ಕೆ  ಸಮಸ್ಯೆಗೆ ಉಪಯುಕ್ತ.

ಇದನ್ನೂ ಓದಿ: Paneer: ಹಸಿ ಪನೀರ್ ತಿನ್ನುವುದರಿಂದ ಮಾತ್ರ ನೀವು ಈ 7 ಸಮಸ್ಯೆಗಳನ್ನು ಹೋಗಲಾಡಿಸಬಹುದು!

ಉತ್ತಮ ಆರೋಗ್ಯ ಚರ್ಮ ಆರೋಗ್ಯಕ್ಕೆ ಸಹಕಾರಿ
ಸೋರೆಕಾಯಿ ವಿಟಮಿನ್ ಎ, ಕ್ಯಾಲ್ಸಿಯಂ ಹೊಂದಿರುವುದರಿಂದ ಇದರ ನಿಯಮಿತ್ತ ಸೇವನೆ ಉತ್ತಮ ತ್ವಚ್ಛೆಗೆ ಸಹಕಾರಿಯಾಗಿದೆ.

ಕೂದಲಿಗೆ ಉತ್ತಮ ಔಷಧಿ
ಸೋರೆಕಾಯಿಯಲ್ಲಿರುವ ವಿಟಮಿನ್ ಎ ಮತ್ತು ಸತು ಪೋಷಕಾಂಶವು ಉತ್ತಮ ಆರೋಗ್ಯ ಜೊತೆಗೆ ಕಾಂತಿ ಹಾಗೂ, ಉತ್ತಮ ಕೇಶರಾಶಿಗೆ ಸಹಕಾರಿಯಾಗಿದೆ. 

ಕಿಡ್ನಿ ಸಮಸ್ಯೆಗೆ ಪರಿಹಾರ
ಈ ತರಕಾರಿಯಲ್ಲಿರುವ ನೀರಿನಾಂಶ ಇರುವುದರಿಂದ ಮೂತ್ರವ್ಯವಸ್ಥೆಯಲ್ಲಿ  ಸಮಸ್ಯೆಗಳಿಲ್ಲಿದ್ದರೆ,  ಸೋರೆಕಾಯಿ ಖಾದ್ಯವನ್ನು ಸೇವಿಸುವುದರಿಂದ  ಮೂತ್ರಪೀಂಡದಲ್ಲಿ ಕಲ್ಲು, ಮೂತ್ರದಲ್ಲಿ ಸೋಂಕಿನ ಸಮಸ್ಯೆ ಯನ್ನು ನಿವಾರಿಸುತ್ತದೆ.  

ಜೀರ್ಣಕ್ರಿಯೆ ಆರೋಗ್ಯ ಕಾಪಾಡುವುದು
ಮಲಬದ್ಧತೆಯಿಂದಾಗಿ ಹಲವಾರು ಸಮಸ್ಯೆಗೂ ಉತ್ತಮ ಆಹಾರವಾಗಿದೆ. 

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News