ನವದೆಹಲಿ: ಕ್ಯಾನ್ಸರ್ ರೋಗದ ಚಿಕಿತ್ಸೆಗೆ ಸಂಬಂಧಿಸಿದ 390 ಔಷಧಿಗಳ ಬೆಲೆಯನ್ನು ಗರಿಷ್ಠ ಶೇ.87ರ ವರೆಗೆ ಇಳಿಕೆ ಮಾಡಲಾಗಿದೆ. ಇದರಿಂದಾಗಿ ದೇಶದ ಸುಮಾರು 22 ಲಕ್ಷ ಕ್ಯಾನ್ಸರ್ ರೋಗಿಗಳಿಗೆ ಅನುಕೂಲವಾಗಲಿದೆ.
ಈ ಬಗ್ಗೆ ಸರ್ಕಾರ ಹೇಳಿಕೆ ನೀಡಿದ್ದು, ಮಾರ್ಚ್ 8ರಿಂದಲೇ ಅನುಷ್ಠಾನಕ್ಕೆ ಬರುವಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಎನ್ಪಿಪಿಎ ನಿಗದಿತ 390 ಕ್ಯಾನ್ಸರ್ ಔಷಧಗಳ ಬೆಲೆಯನ್ನು ಶೇ.87ರಷ್ಟು ಇಳಿಕೆ ಮಾಡಲಾಗಿದೆ" ಎಂದು ತಿಳಿಸಿದೆ.
ಸದ್ಯ ದೇಶದಲ್ಲಿ ಕ್ಯಾನ್ಸರ್ಗೆ ಸಂಬಂಧಿಸಿದ ಚಿಕಿತ್ಸೆಗಳಿಗೆ 426 ಔಷಧಗಳನ್ನು ಬಳಸಲಾಗುತ್ತಿದ್ದು, ಈ ಬೆಲೆ ನಿಯಂತ್ರಣದಿಂದಾಗಿ ಶೇ. 91ಕ್ಕೂ ಹೆಚ್ಚು ಔಷಧಗಳ ಬೆಲೆ ಇಳಿಕೆಯಾದಂತಾಗಿದೆ. ಬೆಲೆ ಕಡಿತಗೊಲಿಸಲಾಗಿರುವ 390 ಔಷಧಿಗಳಲ್ಲಿ 38 ಔಷಧಗಳ ಬೆಲೆಯನ್ನು ಶೇ. 75 ರಷ್ಟು, 124 ಔಷಧಗಳ ಬೆಲೆಯನ್ನು ಶೇ. 50 ರಿಂದ ಶೇ. 75ರ ವರೆಗೆ, 121 ಔಷಧಗಳ ಬೆಲೆಯನ್ನು ಶೇ. 25 ರಿಂದ ಶೇ. 50 ರಷ್ಟು ಇಳಿಸಲಾಗಿದೆ.
ಫೆಬ್ರವರಿ 27ರಂದು ಕ್ಯಾನ್ಸರ್ ಗುಣಪಡಿಸುವ ನಿಗದಿತ 42 ಔಷಧಗಳ ಬೆಲೆಯನ್ನು ರಾಷ್ಟ್ರೀಯ ಔಷಧಗಳ ಬೆಲೆ ಪ್ರಾಧಿಕಾರ(ಎನ್ಪಿಪಿಎ) ಶೇ.30ರಷ್ಟು ತಗ್ಗಿಸಿತ್ತು.