BGMI ನಿಂದ ತೆರವಾಗುವುದು ಬ್ಯಾನ್ ! ಈ ಷರತ್ತುಗಳನ್ನು ಮುಂದಿಟ್ಟ ಕೇಂದ್ರ ಸರ್ಕಾರ

ಇತ್ತೀಚಿನ ಬೆಳವಣಿಗೆಯ ಪ್ರಕಾರ, ಭಾರತ ಸರ್ಕಾರವು ಮೂರು ತಿಂಗಳ ಕಾಲ ದೇಶದಲ್ಲಿ BGMI ಮೇಲಿನ ನಿಷೇಧವನ್ನು ತೆಗೆದುಹಾಕಲು ನಿರ್ಧರಿಸಿದೆ. ಮೂಲಗಳ ಪ್ರಕಾರ, ಈ ಆಟವು 90 ದಿನಗಳ ಅವಧಿಗೆ ತೀವ್ರ ಪರಿಶೀಲನೆಗೆ ಒಳಪಟ್ಟಿರುತ್ತದೆ.

Written by - Ranjitha R K | Last Updated : May 18, 2023, 01:08 PM IST
  • ಚರ್ಚೆಗೆ ಒಳಗಾದ ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ
  • ಕಳೆದ ವರ್ಷ ಸರ್ಕಾರ ಈ ಗೇಮ್ ನಿಷೇಧಿಸಿತ್ತು
  • ಶೀಘ್ರದಲ್ಲೇ ಹಿಂತಿರುಗಲಿದೆ BGMI
BGMI ನಿಂದ ತೆರವಾಗುವುದು ಬ್ಯಾನ್ !  ಈ ಷರತ್ತುಗಳನ್ನು ಮುಂದಿಟ್ಟ ಕೇಂದ್ರ ಸರ್ಕಾರ  title=

ಬೆಂಗಳೂರು : ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ (BGMI) ನಿಷೇಧದ ನಂತರ ಬಹಳಷ್ಟು ಚರ್ಚೆಗೆ ಒಳಗಾಗಿದೆ. ಗೌಪ್ಯತೆ ಮತ್ತು ಭದ್ರತೆಯ ಕಾರಣದಿಂದ ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ (BGMI)ವನ್ನು ಕಳೆದ ವರ್ಷ ಸರ್ಕಾರವು ನಿಷೇಧಿಸಿತ್ತು. ಇದು ಜನಪ್ರಿಯ PUBG ಮೊಬೈಲ್‌ನ ಕಸ್ಟಮೈಸ್ ಮಾಡಿದ ಆವೃತ್ತಿಯಾಗಿದೆ. ಆನ್‌ಲೈನ್ ಮಲ್ಟಿಪ್ಲೇಯರ್ ಬ್ಯಾಟಲ್ ರಾಯಲ್‌ಗೆ ಭಾರತವು ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಡೆವಲಪರ್ ಕ್ರಾಫ್ಟನ್ ದೇಶದಲ್ಲಿ 100 ಮಿಲಿಯನ್ ನೋಂದಾಯಿತ ಬಳಕೆದಾರರನ್ನು ದಾಟಿದೆ ಎಂದು ಕೂಡಾ ಘೋಷಿಸಲಾಗಿತ್ತು. ಇದೀಗ ಈ ಆಟ ಮತ್ತೆ ಸದ್ದು ಮಾಡುತ್ತಿದೆ. 

 ಶೀಘ್ರದಲ್ಲೇ ಹಿಂತಿರುಗಲಿದೆ BGMI: 
1. ಇತ್ತೀಚಿನ ಬೆಳವಣಿಗೆಯ ಪ್ರಕಾರ, ಭಾರತ ಸರ್ಕಾರವು ಮೂರು ತಿಂಗಳ ಕಾಲ ದೇಶದಲ್ಲಿ BGMI ಮೇಲಿನ ನಿಷೇಧವನ್ನು ತೆಗೆದುಹಾಕಲು ನಿರ್ಧರಿಸಿದೆ. ಮೂಲಗಳ ಪ್ರಕಾರ, ಈ ಆಟವು 90 ದಿನಗಳ ಅವಧಿಗೆ ತೀವ್ರ ಪರಿಶೀಲನೆಗೆ ಒಳಪಟ್ಟಿರುತ್ತದೆ.

ಇದನ್ನೂ ಓದಿ : 5 ಸ್ಟಾರ್ ಸೇಫ್ಟಿ ರೇಟಿಂಗ್ ಇರುವ SUV ಇದು ! ದರ ಎಲ್ಲಾ ಕಾರುಗಳಿಗಿಂತ ಕಡಿಮೆ !

2. ಸುದ್ದಿ  ಮಾಧ್ಯಮಗಳ ಪ್ರಕಾರ, ಈ ಮಾಹಿತಿಯನ್ನು ಉನ್ನತ ಮಟ್ಟದ MeitY ಅಧಿಕಾರಿಯಿಂದ ಸ್ವೀಕರಿಸಲಾಗಿದೆ ಮತ್ತು ಸಚಿವಾಲಯವು ಶೀಘ್ರದಲ್ಲೇ Google Play Store ಮತ್ತು Apple App Store ನಿಂದ BGMI ಅನ್ನು ತೆಗೆದುಹಾಕಲು ಅಧಿಕೃತ ಆದೇಶವನ್ನು ಹೊರಡಿಸುತ್ತದೆ.

3. ನಿಷೇಧವನ್ನು ತೆರವು ಮಾಡಿದ ನಂತರ ಸರ್ಕಾರದ ಕಣ್ಣು BGMI ಮೇಲೆ ಇರುತ್ತದೆ. ಅಂದರೆ, ಈ ಗೇಮ್ ನ ಮೇಲೆ ಹದ್ದಿನ ಕಣ್ಣಿಡಲಾಗುತ್ತದೆ.  ಕ್ರಾಫ್ಟನ್ ಕೆಲವು ಷರತ್ತುಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಸರ್ಕಾರದ ನಿಯಮಗಳನ್ನು ಅನುಸರಿಸದಿದ್ದರೆ, ಈ ಗೇಮ್ ಮೇಲೆ ಮತ್ತೆ ನಿಷೇಧವನ್ನು ವಿಧಿಸಬಹುದು.

ಇದನ್ನೂ ಓದಿ : iPhone 14 Discount Offer: ಅತ್ಯಂತ ಕಡಿಮೆ ಬೆಲೆಗೆ ಐಫೋನ್ 14 ಖರೀದಿಸಿರಿ!

4. ಬಣ್ಣವನ್ನು ಬದಲಾಯಿಸುವ ಮೂಲಕ ರಕ್ತದಂತಹ ಹಿಂಸಾತ್ಮಕ ಗ್ರಾಫಿಕ್ಸ್ ಅನ್ನು ತೋರಿಸುವುದಿಲ್ಲ ಎಂದು ಡೆವಲಪರ್ ಭರವಸೆ ನೀಡಿದ್ದಾರೆ. ಮೊದಲು, ಗೇಮರ್ ಗಳಿಗಾಗಿ ರಕ್ತದ ಬಣ್ಣವನ್ನು ಬದಲಾಯಿಸುವ ಆಯ್ಕೆಯನ್ನು ಹೊಂದಿತ್ತು.  ಆದರೆ ಇನ್ನು ಮುಂದೆ ಅದು ಡೀಫಾಲ್ಟ್ ಸೆಟ್ಟಿಂಗ್ ಆಗಿರುತ್ತದೆ.

5. ಭಾರತ ಸರ್ಕಾರ ಅಥವಾ ಕ್ರಾಫ್ಟನ್ ಇನ್ನೂ ಆಟದ ಮರಳುವಿಕೆಯ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

ಇದನ್ನೂ ಓದಿ : ವಿಶ್ವ ದೂರಸಂಪರ್ಕ ದಿನದ ಕುರಿತು ತಿಳಿದಿರಬೇಕಾದ ವಿಚಾರಗಳಿವು

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News