ಬೆಂಗಳೂರು-ಮೈಸೂರು ನಡುವಿನ ರೈಲು ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೌಲಭ್ಯ

ಇನ್ನು ಮುಂದೆ ಮೈಸೂರು-ಬೆಂಗಳೂರು ಮಾರ್ಗದ ಎಲ್ಲಾ 17 ರೈಲು ನಿಲ್ದಾಣಗಳಲ್ಲೂ ಉಚಿತ ವೈ-ಫೈ ಸೌಲಭ್ಯ ದೊರೆಯಲಿದೆ ಎಂದು  ರೈಲ್ವೆ ವಿಭಾಗೀಯ ವ್ಯವಸ್ಥಾಪಕರು ತಿಳಿಸಿದ್ದಾರೆ.

Last Updated : Mar 6, 2019, 12:46 PM IST
ಬೆಂಗಳೂರು-ಮೈಸೂರು ನಡುವಿನ ರೈಲು ನಿಲ್ದಾಣಗಳಲ್ಲಿ ಉಚಿತ ವೈ-ಫೈ ಸೌಲಭ್ಯ title=

ಮೈಸೂರು: ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ರೈಲಿನಲ್ಲಿ ಉಚಿತ ವೈ-ಫೈ ಸೌಲಭ್ಯ ಕಲ್ಪಿಸಲಾಗಿದ್ದು, ಇನ್ನು ಮುಂದೆ ಮೈಸೂರು-ಬೆಂಗಳೂರು ಮಾರ್ಗದ ಎಲ್ಲಾ 17 ರೈಲು ನಿಲ್ದಾಣಗಳಲ್ಲೂ ಉಚಿತ ವೈ-ಫೈ ಸೌಲಭ್ಯ ದೊರೆಯಲಿದೆ ಎಂದು  ರೈಲ್ವೆ ವಿಭಾಗೀಯ ವ್ಯವಸ್ಥಾಪಕರು ತಿಳಿಸಿದ್ದಾರೆ.

ಬೆಂಗಳೂರು-ಮೈಸೂರು ರೈಲು ಮಾರ್ಗದಲ್ಲಿ ಬರುವ ಬೆಂಗಳೂರು ನಗರ ನಿಲ್ದಾಣ, ಕೆಂಗೇರಿ,ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ, ಮೈಸೂರು, ನಾಯಂಡಹಳ್ಳಿ, ಹೆಜ್ಜಾಲ,ಶೆಟ್ಟಿಹಳ್ಳಿ, ಹನಕೆರೆ, ಯಲಿಯೂರು, ಬ್ಯಾಡರಹಳ್ಳಿ,ಪಾಂಡವಪುರ, ನಾಗನಹಳ್ಳಿ ಸೇರಿ ಈ ಮಾರ್ಗದ ಎಲ್ಲಾ 17 ನಿಲ್ದಾಣಗಳಲ್ಲೂ ಉಚಿತ ವೈ-ಫೈ ಸೌಲಭ್ಯವನ್ನು ರೈಲ್ವೆ ಮಂತ್ರಾಲಯದ ರೈಲ್‌ಟೆಲ್‌ ಕಾರ್ಪೋರೆಷನ್‌ ಆಫ್ ಇಂಡಿಯಾ ಲಿ. ಒದಗಿಸಲಿದೆ ಎಂದು ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಆರ್.ಎಸ್.ಸಕ್ಸೇನಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜನವರಿಯಲ್ಲಿ ಈ ಮಾರ್ಗದ ಎಲ್ಲಾ ನಿಲ್ದಾಣಗಳಲ್ಲೂ ಉಚಿತ ವೈ-ಫೈ ಸೌಲಭ್ಯ ಕಲ್ಪಿಸಿದ್ದರಿಂದ 3,16,157 ಬಳಕೆದಾರರು 1,09,757 ಟಿಬಿ ಡೇಟಾ ಬಳಸಿದ್ದಾರೆ ಎಂದು ಆರ್‌.ಎಸ್‌.ಸಕ್ಸೇನಾ ಮಾಹಿತಿ ನೀಡಿದ್ದಾರೆ.
 

Trending News