ಕೌಂಟಿಂಗ್‌ ಆರಂಭ: ಪಕ್ಷೇತರ ಅಭ್ಯರ್ಥಿಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್..!

Karnataka Election Result 2023 Update: ಬಿಜೆಪಿಯಿಂದ ಆಪರೇಷನ್‌ಗೆ ಪ್ರಿಪರೇಷನ್‌ ಜೋರಾಗಿದ್ದು, ಪಕ್ಷೇತರವಾಗಿ ಗೆಲ್ಲುವ ಅಭ್ಯರ್ಥಿಗಳ ಮೇಲೆ  ಮೇಲೆ ಕೇಸರಿ ಕಣ್ಣಿಟ್ಟಿದೆ. ಅತಂತ್ರ ರಿಸಲ್ಟ್‌ ಬಂದ್ರೆ ರೆಸಾರ್ಟ್‌ ರಾಜಕೀಯ+ಆಪರೇಷನ್ ಗೂ ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. ರೆಸಾರ್ಟ್‌ ರಾಜಕೀಯಕ್ಕೂ ರೂಟ್‌ ಮ್ಯಾಪ್‌ ರೂಪಿಸಿರುವ ಬಿಜೆಪಿ ನಾಯಕರು ಈಗಾಗಲೇ ರೆಸಾರ್ಟ್ ಬುಕ್ ಮಾಡುತ್ತಿದ್ದಾರೆ ಎಂದೂ ಕೂಡ ಹೇಳಲಾಗುತ್ತಿದೆ. 

Written by - Yashaswini V | Last Updated : May 13, 2023, 08:08 AM IST
  • ಅತಂತ್ರ ರಿಸಲ್ಟ್‌ ಬಂದ್ರೆ ರೆಸಾರ್ಟ್‌ ರಾಜಕೀಯ+ಆಪರೇಷನ್ ಗೂ ಬಿಜೆಪಿ ಸಿದ್ಧತೆ
  • ಪಕ್ಷೇತರ ಅಭ್ಯರ್ಥಿಗಳಿಗೆ ಕಾಂಗ್ರೆಸ್ ನಾಯಕರ ಗಾಳ
  • ಪಕ್ಷೇತರ ಅಭ್ಯರ್ಥಿಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್..!
ಕೌಂಟಿಂಗ್‌ ಆರಂಭ:  ಪಕ್ಷೇತರ ಅಭ್ಯರ್ಥಿಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್..! title=

Latest Update Karnataka Assembly Election Election Result 2023: ಕರ್ನಾಟಕ ವಿಧಾನಸಭಾ ಚುನಾವಣೆಯ ಬಹು ನಿರೀಕ್ಷಿತ ಫಲಿತಾಂಶ ಇಂದು ಹೊರಬೀಳಲಿದೆ. ರಾಜ್ಯದೆಲ್ಲೆಡೆ ಒಟ್ಟು 36 ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಮಧ್ಯಾಹ್ನದ ವೇಳೆಗೆ  ಸ್ಪಷ್ಟ ಚಿತ್ರಣ ಹೊರಬೀಳುವ ಸಾಧ್ಯತೆ ಇದೆ. ಇನ್ನೊಂದೆಡೆ ಒಂದೊಮ್ಮೆ ಅತಂತ್ರ ಫಲಿತಾಂಶ ಬಂದರೆ ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಬಿಜೆಪಿ ಕಾಂಗ್ರೆಸ್ ಪಕ್ಷಗಳು ಯೋಜನೆ ರೂಪಿಸುತ್ತಿವೆ. 

ಬಿಜೆಪಿಯಿಂದ ಆಪರೇಷನ್‌ಗೆ ಪ್ರಿಪರೇಷನ್‌ ಜೋರಾಗಿದ್ದು, ಪಕ್ಷೇತರವಾಗಿ ಗೆಲ್ಲುವ ಅಭ್ಯರ್ಥಿಗಳ ಮೇಲೆ  ಮೇಲೆ ಕೇಸರಿ ಕಣ್ಣಿಟ್ಟಿದೆ. ಅತಂತ್ರ ರಿಸಲ್ಟ್‌ ಬಂದ್ರೆ ರೆಸಾರ್ಟ್‌ ರಾಜಕೀಯ+ಆಪರೇಷನ್ ಗೂ ಬಿಜೆಪಿ ಸಿದ್ಧತೆ ಮಾಡಿಕೊಂಡಿದೆ. ರೆಸಾರ್ಟ್‌ ರಾಜಕೀಯಕ್ಕೂ ರೂಟ್‌ ಮ್ಯಾಪ್‌ ರೂಪಿಸಿರುವ ಬಿಜೆಪಿ ನಾಯಕರು ಈಗಾಗಲೇ ರೆಸಾರ್ಟ್ ಬುಕ್ ಮಾಡುತ್ತಿದ್ದಾರೆ ಎಂದೂ ಕೂಡ ಹೇಳಲಾಗುತ್ತಿದೆ. 

ಪಕ್ಷೇತರ ಅಭ್ಯರ್ಥಿಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್..!
ಇನ್ನೊಂದೆಡೆ ಮ್ಯಾಜಿಕ್ ನಂಬರ್ ದಾಟಲು ಕಷ್ಟವಾದರೆ, ಬಹುಮತ ಬಾರದಿದ್ದರೆ ಬೆಂಬಲಿಸುವಂತೆ ಫೋನ್  ಕರೆ ಮೂಲಕ ಪಕ್ಷೇತರ ಅಭ್ಯರ್ಥಿಗಳಿಗೆ ಕಾಂಗ್ರೆಸ್ ನಾಯಕರು  ಗಾಳ ಹಾಕಿದ್ದಾರೆ. ಒಟ್ಟಿನಲ್ಲಿ ಈ ಬಾರಿಯ ಚುನಾವಣೆಯಲ್ಲೂ ಕೂಡ ಪಕ್ಷೇತರ ಅಭ್ಯರ್ಥಿಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್..!

ಇದನ್ನೂ ಓದಿ- ಸಾಂಸ್ಕೃತಿಕ ನಗರಿ ಮೈಸೂರಿನ ಒಟ್ಟು 11 ವಿಧಾನಸಭಾ ಕ್ಷೇತ್ರಗಳಲ್ಲಿ ಯಾವ ಪಕ್ಷಕ್ಕೆ ಹೆಚ್ಚು ಸ್ಥಾನ!

2023ರ ಚುನಾವಣೆಯಲ್ಲಿ ಯಾವ ಪಕ್ಷದಿಂದ ಏನು ಭರವಸೆ ನೀಡಲಾಗಿತ್ತು!
2023ರ ʻಕಾಂಗ್ರೆಸ್ʼ ಪ್ರಣಾಳಿಕೆ ಪ್ರಮುಖಾಂಶಗಳು (Highlights of 2023 ``Congress'' Manifesto): 
1.ಬಿಪಿಎಲ್‌ ಕುಟುಂಬಕ್ಕೆ ಪ್ರತಿ ತಿಂಗಳು 10 ಕೆ.ಜಿ ಅಕ್ಕಿ
2.ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ.
3.ಗುತ್ತಿಗೆ ಆಧಾರದ ಕೆಲಸಗಾರರನ್ನ ಖಾಯಂ ಮಾಡುವುದು
4.ಆರೋಗ್ಯ & ಕುಟುಂಬ ಕಲ್ಯಾಣದಲ್ಲಿ ಕೆಲಸ ಮಾಡುವ ನೌಕರರ ಉದ್ಯೋಗ ಖಾಯಂ
5.ಗೃಹಜ್ಯೋತಿ ಯೋಜನೆಯಡಿಯಲ್ಲಿ 200 ಯೂನಿಟಿ ವಿದ್ಯುತ್‌ ಉಚಿತ
6.ಮಹಿಳೆಯರಿಗೆ ಸರ್ಕಾರಿ ಬಸ್‌ ನಲ್ಲಿ ಉಚಿತವಾಗಿ ಪ್ರಯಾಣ
7.ಆಶಾ ಕಾರ್ಯಕರ್ತೆಯರ ಗೌರವಧನ 8000 ರೂ.ಗೆ ಹೆಚ್ಚಳ
8.ನಿರುದ್ಯೋಗ ಯುವಕರಿಗೆ 3 ಸಾವಿರ ರೂ. ಸಹಾಯಧನ
9.ಕೋಮುಗಳ ನಡುವೆ ದ್ವೇಷ ಬಿತ್ತುವ ಬಜರಂಗದಳ, ಪಿಎಫ್‌ ಐ ಸಂಘಟನೆಗಳ ನಿಷೇಧ 
10.ನೀರಾವರಿಗಾಗಿ 5 ವರ್ಷದಲ್ಲಿ 1.50 ಲಕ್ಷ ಕೋಟಿ ರೂ. ಮೀಸಲು
11.ಬಿಸಿಯೂಟ ನೌಕರರ ಗೌರಧನ 6 ಸಾವಿರ ರೂ.ಗೆ ಹೆಚ್ಚಳ
12.ರಾತ್ರಿಪಾಳಿಯ ಪೊಲೀಸ್‌ ಸಿಬ್ಬಂದಿ 5000 ರೂ. ವಿಶೇಷ ಭತ್ಯೆ

===========
2023ರ ಬಿಜೆಪಿ ಪ್ರಣಾಳಿಕೆ ಪ್ರಮುಖಾಂಶಗಳು (Highlights of BJP Manifesto 2023): 
1. ಬಿಪಿಎಲ್‌ ಕುಟುಂಬಗಳಿಗೆ 3 ಸಿಲಿಂಡರ್ ಉಚಿತ
2. ಮಹಾನಗರ ಪಾಲಿಕೆಯ ವಾರ್ಡ್‌ ಗಳಲ್ಲಿ ‘ಅಟಲ್ ಆಹಾರ ಕೇಂದ್ರ’ 
3. ಬಿಪಿಎಲ್ ಕುಟುಂಬಗಳಿಗೆ ನಿತ್ಯ ಅರ್ಧ ಲೀಟರ್ ನಂದಿನಿ ಹಾಲು, ಸಿರಿಧಾನ್ಯ
4. ಕರ್ನಾಟಕದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿ
5. 10 ಲಕ್ಷ ವಸತಿ ನಿವೇಶನಗಳನ್ನು ಕಂದಾಯ ಇಲಾಖೆ ಮೂಲಕ ಹಂಚಿಕೆ 
6. ‘ಒನಕೆ ಓಬವ್ವ 'ಸಾಮಾಜಿಕ ನ್ಯಾಯ ನಿಧಿ’ ಯೋಜನೆಯನ್ನು ಪ್ರಾರಂಭ
7. ಹಿರಿಯ ನಾಗರಿಕರಿಗೆ ಪ್ರತಿ ವರ್ಷ ಉಚಿತವಾಗಿ ಸಂಪೂರ್ಣ ಆರೋಗ್ಯ ತಪಾಸಣೆ
8. ಗ್ರಾಮ ಪಂಚಾಯಿತಿಗಳಲ್ಲಿ ಕಿರು ಶಿಥಲೀಕರಣ ಸೌಲಭ್ಯ, ಕೃಷಿ ಸಂಸ್ಕರಣಾ ಘಟಕ 

=============

ಇದನ್ನೂ ಓದಿ- ಮಂಡ್ಯದ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಯಾರಿಗೆ ಎಷ್ಟು ಸ್ಥಾನ! ಜೆ‌ಡಿ‌ಎಸ್ ಭದ್ರಕೋಟೆಯಲ್ಲಿ ಅರಳುವುದೇ ಕಮಲ, ಇಲ್ಲ ಕಾಂಗ್ರೆಸ್ ಕೈ ಹಿಡಿಯಲಿದ್ದಾರಾ ಜನ!

2023ರ ಜೆಡಿಎಸ್ ಪ್ರಣಾಳಿಕೆ ಪ್ರಮುಖಾಂಶಗಳು  (Highlights of JDS Manifesto 2023): 
1.ಗರ್ಭಿಣಿ ತಾಯಂದಿಯರಿಗೆ  6 ತಿಂಗಳು 6,000 ರೂ. ಭತ್ಯೆ
2.ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸಾಲಮನ್ನಾ
3.ವಿಧವಾ ವೇತನ 900 ರೂ.ನಿಂದ 2,500 ರೂ.ಗಳಿಗೆ ಹೆಚ್ಚಳ
4.ವರ್ಷಕ್ಕೆ 5 ಅಡುಗೆ ಅನಿಲ ಸಿಲಿಂಡರ್ ಉಚಿತ
5.ಅಂಗನವಾಡಿ ಕಾರ್ಯಕರ್ತೆಯರಿಗೆ5000ವರೆಗೆ ವೇತನ
6.ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ ಪ್ರತಿ ಎಕರೆಗೆ 10,000 ರೂ. ಸಹಾಯ ಧನ
7.ರೈತ ಯುವಕರನ್ನು ಮದುವೆ ಆಗುವ ಯುವತಿಯರಿಗೆ 2 ಲಕ್ಷ ರೂ. ಪ್ರೋತ್ಸಾಹ ಧನ
8.ಪ್ರತಿ ಕೃಷಿ ಕಾರ್ಮಿಕ ಕುಟುಂಬಕ್ಕೆ ಮಾಸಿಕ 2000 ರೂ. ಸಹಾಯಧನ
9.ಪ್ರತಿ ಆಟೋ ಚಾಲಕನಿಗೆ ಪ್ರತಿ ತಿಂಗಳು 2 ಸಾವಿರ ರೂ. ಮಾಸಾಶನ
10.ಹೈಸ್ಕೂಲ್‌ ಸ್ಟೂಡೆಂಟ್ಸ್‌ಗೆ ಸೈಕಲ್‌, ಪದವಿ ವಿದ್ಯಾರ್ಥಿನಿಯರಿಗೆ ಸ್ಕೂಟರ್‌ ವಿತರಣೆ
11.ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮೆಡಿಕಲ್‌, ಇಂಜಿನಿಯರಿಂಗ್‌ಗೆ ಉಚಿತ ಪ್ರವೇಶ
12.ಕೃಷಿ ಪಂಪಸೆಟ್‌ಗೆ 24/7 ಉಚಿತ ಗುಣಮಟ್ಟದ ವಿದ್ಯುತ್‌ ಪೂರೈಕೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News