Mehbooba Mufti: ಭಾರತೀಯ ಮಾಧ್ಯಮ ಹಾಗೂ ನ್ಯಾಯ ವ್ಯವಸ್ಥೆಯ ಮೇಲೆ ಪ್ರಶ್ನೆ ಎತ್ತಿದ ಮೆಹಬೂಬಾ ಮುಫ್ತಿ ಹೇಳಿದ್ದೇನು?

Mehbooba Mufti: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸಲಾಗಿದೆ. ಇಮ್ರಾನ್ ಬಂಧನದ ಬಳಿಕ ಕಳೆದ ಹಲವು ಗಂಟೆಗಳಿಂದ ಪಾಕಿಸ್ತಾನದಲ್ಲಿ ಭಾರಿ ಕೋಲಾಹಲವೇ ಸೃಷ್ಟಿಯಾಗಿದೆ.   

Written by - Nitin Tabib | Last Updated : May 10, 2023, 02:57 PM IST
  • ಇಮ್ರಾನ್ ಖಾನ್ ಅವರನ್ನು ನಿನ್ನೆಯಷ್ಟೇ ಬಂಧನಕ್ಕೊಳಪಡಿಸಲಾಗಿದೆ.
  • ಇಂದು ಮಧ್ಯಾಹ್ನ 3 ಗಂಟೆಗೆ ಇಮ್ರಾನ್ ಖಾನ್ ಅವರನ್ನು ಎನ್‌ಎಬಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
  • ಆದರೆ, ಇಮ್ರಾನ್ ಖಾನ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ಯುವುದಿಲ್ಲ ಎಂದು ಇಸ್ಲಾಮಾಬಾದ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
Mehbooba Mufti: ಭಾರತೀಯ ಮಾಧ್ಯಮ ಹಾಗೂ ನ್ಯಾಯ ವ್ಯವಸ್ಥೆಯ ಮೇಲೆ ಪ್ರಶ್ನೆ ಎತ್ತಿದ ಮೆಹಬೂಬಾ ಮುಫ್ತಿ ಹೇಳಿದ್ದೇನು?  title=
ಮೆಹಬೂಬಾ ಮುಫ್ತಿ ಹೇಳಿಕೆ!

Mufti Statement: ಕಳೆದ ಕೆಲವು ಗಂಟೆಗಳಿಂದ ಪಾಕಿಸ್ತಾನದಲ್ಲಿ ಪ್ರಕ್ಷುಬ್ಧತೆಯ ವಾತಾವರಣ ಸೃಷ್ಟಿಯಾಗಿದೆ. ದೇಶದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಬಂಧಿಸಲಾಗಿದೆ. ಈ ಮಧ್ಯೆ ಈ ಕುರಿತು ಇದೀಗ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಹೇಳಿಕೆಯೂ ಮುನ್ನೆಲೆಗೆ ಬಂದಿದೆ. ಟ್ವೀಟ್ ಮಾಡುವ ಮೂಲಕ ಅವರು ಭಾರತೀಯ ಮಾಧ್ಯಮ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲೆ ಪ್ರಶ್ನೆ ಎತ್ತಿದ್ದಾರೆ. ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಹದಗೆಟ್ಟಿದೆ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದ ಭರವಸೆಯ ಆಶಾ ಕಿರಣಗಳೆಂದರೆ ಸ್ವತಂತ್ರ ನ್ಯಾಯಾಂಗ ಮತ್ತು ಮಾಧ್ಯಮ, ಅದು ಭಾರತದ ಮಾಧ್ಯಮ ಮತ್ತು ನ್ಯಾಯಾಂಗಕ್ಕೆ ಸಂಪೂರ್ಣವಾಗಿ ವಿಪರೀತವಾಗಿದೆ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ. ರಾಜಕೀಯ ಪ್ರತಿನಿಧಿಗಳನ್ನು ಕ್ಷುಲ್ಲಕ ಆಧಾರದ ಮೇಲೆ ಬಂಧಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. 

ಇದನ್ನೂ ಓದಿ-Dangerous Dates 2023: ವರ್ಷ 2023ರ ಈ 6 ದಿನಾಂಕಗಳು ಮನುಷ್ಯರ ಪಾಲಿಗೆ ಖತರ್ನಾಕ್ ಸಾಬೀತಾಗಲಿವೆ, ಬೆಚ್ಚಿಬೀಳಿಸುವ ಭವಿಷ್ಯವಾಣಿ!

ಫಾರೂಕ್ ಅಬ್ದುಲ್ಲಾ ಹೇಳಿದ್ದೇನು?
ಇನ್ನೊಂದೆಡೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ,  ಭಾರತಕ್ಕೆ ಸ್ಥಿರ ಪಾಕಿಸ್ತಾನ ಬಹಳ ಮುಖ್ಯ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಅಸ್ಥಿರವಾದ ಪಾಕಿಸ್ತಾನವು ತನ್ನ ಎಲ್ಲಾ ನೆರೆಹೊರೆಯವರಿಗೂ ಅಪಾಯಕಾರಿಯಾಗಿದೆ. ಅಲ್ಲಿ ಪ್ರಜಾಪ್ರಭುತ್ವ ಮರು ಸ್ಥಾಪನೆಯಾಗಬೇಕು ಎಂಬುದು ತಮ್ಮ ಅಭಿಮತ ಎಂದು ಫಾರೂಕ್ ಹೇಳಿದ್ದಾರೆ. ದುರದೃಷ್ಟವಶಾತ್, ತನ್ನ ಸ್ವಾತಂತ್ರ್ಯದ ನಂತರ ಪಾಕಿಸ್ತಾನ ಯಾವಾಗಲು ಒಂದು ಕಪಟ ಇತಿಹಾಸವನ್ನು ಹೊಂದಿದೆ. ಅದರ ಮೊದಲ ಪ್ರಧಾನಿ ಕೂಡ ಹತ್ಯೆಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Good News! ಜಾಗತಿಕ ಆರೋಗ್ಯ ತುರ್ತುಸ್ಥಿತಿಯ ವರ್ಗದಿಂದ ಹೊರಹೋದ ಕೋವಿಡ್ - 19, ಡಬ್ಲ್ಯೂಎಚ್ಓ ಘೋಷಣೆ

ಇಂದು ನ್ಯಾಯಾಲಯದಲ್ಲಿ ಇಮ್ರಾನ್ ವಿಚಾರಣೆ
ಇಮ್ರಾನ್ ಖಾನ್ ಅವರನ್ನು ನಿನ್ನೆಯಷ್ಟೇ ಬಂಧನಕ್ಕೊಳಪಡಿಸಲಾಗಿದೆ. ಇಂದು ಮಧ್ಯಾಹ್ನ 3 ಗಂಟೆಗೆ ಇಮ್ರಾನ್ ಖಾನ್ ಅವರನ್ನು ಎನ್‌ಎಬಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಆದರೆ, ಇಮ್ರಾನ್ ಖಾನ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ಯುವುದಿಲ್ಲ ಎಂದು ಇಸ್ಲಾಮಾಬಾದ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಅವರನ್ನು ನ್ಯಾಯಾಲಯಕ್ಕೆ ಕರೆದೊಯ್ಯುವ ಬದಲು ಪಿಟಿಐ ಮುಖ್ಯಸ್ಥರನ್ನು ಅವರನ್ನು ಇರಿಸಲಾಗಿರುವ ಸ್ಥಳದಿಂದಲೇ ನಿಗದಿತ ವಿಚಾರಣೆ ನಡೆಸಲಾಗುವುದು. ದೇಶಾದ್ಯಂತ ಹದಗೆಡುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News