Optical Illusion: ತಲೆ ಇದ್ದವರಿಗೆ ಮಾತ್ರ.. ಈ ಅಳಿಲುಗಳ ಗುಂಪಿನಲ್ಲಿ ಇಲಿಯೊಂದು ಅಡಗಿದೆ! ಜಸ್ಟ್ 11 ಸೆಕೆಂಡಲ್ಲಿ ಹುಡುಕಿ ನೋಡೋಣ

Optical Illusion IQ Test: ಆಪ್ಟಿಕಲ್ ಇಲ್ಯೂಷನ್ ಸಹಾಯದಿಂದ ಒಬ್ಬ ಸಾಮಾನ್ಯ ಮಾನವನ ಮೆದುಳು ಒಂದು ವಸ್ತುವನ್ನು ಯಾವೆಲ್ಲಾ ಕೋನದಿಂದ ವಿಭಿನ್ನ ಗ್ರಹಿಕೆಯ ಮೂಲಕ ವಿಷಯಗಳನ್ನು ಅಥವಾ ಚಿತ್ರಗಳನ್ನು ಅರಿತುಕೊಳ್ಳಬಲ್ಲದು ಎಂಬುದನ್ನು ತೋರಿಸುತ್ತದೆ. ನೀವು ವಿಷಯಗಳನ್ನು ಹೇಗೆ ಗ್ರಹಿಸುತ್ತೀರಿ ಮತ್ತು ನಿಮ್ಮ ಬುದ್ಧಿವಂತಿಕೆಯ ಮಟ್ಟ ಹೇಗಿದೆ ಎಂಬುದಕ್ಕೂ ಇದು ಉತ್ತರವನ್ನು ನೀಡುತ್ತದೆ.  

Written by - Bhavishya Shetty | Last Updated : May 6, 2023, 11:04 AM IST
    • ಎಲ್ಲವೂ ಸಮಾನ ಕಂಡರೂ ಸಹ ಯಾವುದೋ ಒಂದು ವಿಷಯದಲ್ಲಿ ಕೊರತೆ ಇರುತ್ತದೆ
    • ಜಾಣ್ಮೆಯಿಂದ ಅವುಗಳಿಗೆ ಪರಿಹಾರ ಕಂಡುಕೊಳ್ಳುವುದೆ ಆಪ್ಟಿಕಲ್ ಇಲ್ಯೂಷನ್ ಐಕ್ಯೂ ಟೆಸ್ಟ್
    • ವಿಷಯಗಳನ್ನು ಹೇಗೆ ಗ್ರಹಿಸುತ್ತೀರಿ ಮತ್ತು ನಿಮ್ಮ ಬುದ್ಧಿವಂತಿಕೆಯ ಮಟ್ಟ ಹೇಗಿದೆ ಎಂಬುದಕ್ಕೆ ಇದು ಉತ್ತರವನ್ನು ನೀಡುತ್ತದೆ
Optical Illusion: ತಲೆ ಇದ್ದವರಿಗೆ ಮಾತ್ರ.. ಈ ಅಳಿಲುಗಳ ಗುಂಪಿನಲ್ಲಿ ಇಲಿಯೊಂದು ಅಡಗಿದೆ! ಜಸ್ಟ್ 11 ಸೆಕೆಂಡಲ್ಲಿ ಹುಡುಕಿ ನೋಡೋಣ title=
Optical Illusion

Optical Illusion IQ Test: ಆಪ್ಟಿಕಲ್ ಇಲ್ಯುಷನ್ ಎಂದು ಮೆದುಳಿಗೆ ಕೆಲಸ ಕೊಡುವ ಮೂಲಕ ಮನರಂಜಿಸುವ ಒಂದು ವಿಷಯ ಎಂದು ಹೇಳಬಹುದು. ಆಕಾರ-ಬದಲಾಯಿಸುವ ವಸ್ತು, ರೇಖಾಚಿತ್ರ ಅಥವಾ ಸಾಮಾನ್ಯವಾಗಿ ನಮ್ಮ ಸುತ್ತಮುತ್ತ ಇರುವ ವಿಷಯಗಳಲ್ಲೇ ನಾವು ಇದನ್ನು ಕಾಣಬಹುದು. ಎಲ್ಲವೂ ಸಮಾನ ಕಂಡರೂ ಸಹ ಯಾವುದೋ ಒಂದು ವಿಷಯದಲ್ಲಿ ಕೊರತೆ ಇರುತ್ತದೆ ಅಥವಾ ವಿಭಿನ್ನತೆ ಇರುತ್ತದೆ, ಅದನ್ನು ಒಂದಿಷ್ಟು ನಿರ್ದಿಷ್ಟ ಸಮಯದಲ್ಲಿ ಪತ್ತೆ ಮಾಡುವುದು, ಜಾಣ್ಮೆಯಿಂದ ಅವುಗಳಿಗೆ ಪರಿಹಾರ ಕಂಡುಕೊಳ್ಳುವುದನ್ನು ಆಪ್ಟಿಕಲ್ ಇಲ್ಯೂಷನ್ ಐಕ್ಯೂ ಟೆಸ್ಟ್ ಎನ್ನುತ್ತಾರೆ.

ಇದರಲ್ಲಿ ಕಣ್ಣಿಗೆ ಕೆಲಸ, ಮೆದುಳಿಗೆ ಕೆಲಸ, ನಿಮ್ಮ ವಿಭಿನ್ನ ದೃಷ್ಟಿಕೋನ ಹೇಗಿದೆ, ಗ್ರಹಿಕೆಗಳು ಯಾವ ರೀತಿ ಇವೆ ಎಂಬೆಲ್ಲಾ ವಿಷಯಗಳು ತಿಳಿದುಬರುತ್ತವೆ.

ಇದನ್ನೂ ಓದಿ: ಡಿನ್ನರ್ ಡೇಟ್ ಮಧ್ಯೆ ರೊಮ್ಯಾಂಟಿಕ್ ಆದ Virat-Anushka! ಕ್ಯೂಟ್ ಕಪಲ್ ಫೋಟೋ ನೋಡಿ

ಇಂತಹ ಆಪ್ಟಿಕಲ್ ಇಲ್ಯೂಷನ್ ಸಹಾಯದಿಂದ ಒಬ್ಬ ಸಾಮಾನ್ಯ ಮಾನವನ ಮೆದುಳು ಒಂದು ವಸ್ತುವನ್ನು ಯಾವೆಲ್ಲಾ ಕೋನದಿಂದ ವಿಭಿನ್ನ ಗ್ರಹಿಕೆಯ ಮೂಲಕ ವಿಷಯಗಳನ್ನು ಅಥವಾ ಚಿತ್ರಗಳನ್ನು ಅರಿತುಕೊಳ್ಳಬಲ್ಲದು ಎಂಬುದನ್ನು ತೋರಿಸುತ್ತದೆ. ನೀವು ವಿಷಯಗಳನ್ನು ಹೇಗೆ ಗ್ರಹಿಸುತ್ತೀರಿ ಮತ್ತು ನಿಮ್ಮ ಬುದ್ಧಿವಂತಿಕೆಯ ಮಟ್ಟ ಹೇಗಿದೆ ಎಂಬುದಕ್ಕೂ ಇದು ಉತ್ತರವನ್ನು ನೀಡುತ್ತದೆ.  

ಇಂದು ನಾವು ಫೋಟೋವೊಂದನ್ನು ನಿಮಗೆ ತೋರಿಸಲಿದ್ದೇವೆ. ಇದರಲ್ಲಿ ಅನೇಕ ಅಳಿಲುಗಳಿವೆ. ಆದರೆ ಆ ಅಳಿಲಿನ ಗುಂಪಿನ ಮಧ್ಯೆ ಇಲಿಯೊಂದು ಸೇರಿಕೊಂಡಿದೆ. ಆ ಇಲಿಯನ್ನು ಜಸ್ಟ್ 11 ಸೆಕೆಂಡುಗಳಲ್ಲಿ ಪತ್ತೆ ಹಚ್ಚಬೇಕು.

ಮೇಲಿನ ಚಿತ್ರವು ಮೆದುಳಿಗೆ ಸವಾಲೆಸೆಯುವ, ವಯಸ್ಕರು ಮತ್ತು ಮಕ್ಕಳಿಗಾಗಿ ವಿನ್ಯಾಸಗೊಳಿಸಲಾದ ಟ್ರಿಕಿ ಪಝಲ್ ಆಗಿದೆ. ಈ ಆಪ್ಟಿಕಲ್ ಇಲ್ಯೂಷನ್ ನಲ್ಲಿ, ನೀವು ಅಳಿಲುಗಳ ಗುಂಪನ್ನು ನೋಡಬಹುದು. ಆದರೆ, ಅಳಿಲುಗಳು ತುಂಬಿರುವ ಈ ಹೊಲದೊಳಗೆ ಇಲಿಯೊಂದು ಅಡಗಿಕೊಂಡಿದೆ.

"ನೀವು ಗುಂಪಿಗೆ ಸೇರದ ಪ್ರಾಣಿಯನ್ನು ಗುರುತಿಸಬಹುದೇ?" ಎಂದು ಕೇಳುವ ಮೂಲಕ ಇಲಿಯನ್ನು ಗುರುತಿಸಲು ವೀಕ್ಷಕರಿಗೆ ಸವಾಲು ಹಾಕಲಾಗುತ್ತಿದೆ. ಈ ಆಪ್ಟಿಕಲ್ ಇಲ್ಯೂಷನ್ ತಂತ್ರದ ಭಾಗವೆಂದರೆ ಅಳಿಲುಗಳ ಗುಂಪಿನೊಳಗೆ ಅಡಗಿರುವ ಇಲಿಯನ್ನು ಗುರುತಿಸುವುದು. ಚಿತ್ರದೊಳಗೆ ಅಡಗಿರುವ ಇಲಿಯನ್ನು ಗುರುತಿಸಲು ಪ್ರಯತ್ನಿಸುತ್ತಿರುವ ಸಾವಿರಾರು ಜನರು ಮೊದಲಿಗೆ ತಮ್ಮ ತಲೆಯನ್ನು ಕೆರೆದುಕೊಂಡಿದ್ದಾರೆ.

ಈ ಚಿತ್ರದೊಳಗೆ ಇರುವ ಇಲಿಯನ್ನು 11 ಸೆಕೆಂಡುಗಳಲ್ಲಿ ಕಂಡುಹಿಡಿಯಲು ಪ್ರಯತ್ನಿಸಿ. ಈ ಮೂಲಕ ನಿಮ್ಮ ಐಕ್ಯೂ ಟೆಸ್ಟ್ ನ್ನು ನೀವೇ ನೋಡಿಕೊಳ್ಳಬಹುದು. ಈ ಆಪ್ಟಿಕಲ್ ಇಲ್ಯೂಷನ್ ಟೆಸ್ಟ್ ನ್ನು ಇದುವರೆಗೆ ಕಂಡ ತಕ್ಷಣ ಪೂರೈಸಿದ್ದು ಜಸ್ಟ್ 2 ಶೇಕಡ ಜನ.  

ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ಹತ್ತಿರದಿಂದ ನೋಡಿ. ಅಳಿಲುಗಳ ನಡುವೆ ಅಡಗಿರುವ ಇಲಿಯನ್ನು ಅನ್ನು ಗುರುತಿಸಲು ಪ್ರಯತ್ನಿಸಿ. ಇಲಿಯನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲವೇ? ಚಿಂತೆ ಬೇಡ. ನಿಮಗೆ ನಾವು ಉತ್ತರವನ್ನು ನೀಡಲಿದ್ದೇವೆ.  

ಫೋಟೋ ನೋಡಿ: 

ಬಹಳಷ್ಟು ಟ್ರಿಕಿಯಾಗಿ ಕಾಣುತ್ತಿರುವ ಈ ಚಿತ್ರವನ್ನು ಸರಿಯಾಗಿ ಗಮನಿಸಿ. ಚಿತ್ರದ ಮೇಲಿನ ಬಲಭಾಗವನ್ನು ನೋಡಿದರೆ ಅಲ್ಲಿ ಇಲಿಯನ್ನು ಗುರುತಿಸಲು ಸಾಧ್ಯವಾಗುತ್ತದೆ. ಇಲಿ ಮತ್ತು ಅಳಿಲುಗಳ ಬಣ್ಣ ಒಂದೇ ಆಗಿದೆ.

ಕೇವಲ 11 ಸೆಕೆಂಡುಗಳಲ್ಲಿ ಚಿತ್ರದೊಳಗೆ ಅಡಗಿರುವ ಮೌಸ್ ಅನ್ನು ಗುರುತಿಸಲು ನಿಮಗೆ ಸಾಧ್ಯವಾಗಿದ್ದರೆ, ಅದು ನಿಮ್ಮ ಅಸಾಧಾರಣ ಬುದ್ಧಿವಂತಿಕೆಯ ಸಂಕೇತವಾಗಿದೆ ಎಂದು ಹೇಳಬಹುದು. ಕಷ್ಟಕರವಾದ ಒಗಟುಗಳನ್ನು ಪರಿಹರಿಸುವ ಮೂಲಕ ನಿಮ್ಮ ಮೆದುಳಿಗೆ ನೀವು ಎಷ್ಟು ಹೆಚ್ಚು ವ್ಯಾಯಾಮ ಮಾಡುತ್ತೀರೋ ಅಷ್ಟು ಚುರುಕಾಗಿರುತ್ತೀರಿ ಎಂದು ಅಧ್ಯಯನಗಳು ಬಹಿರಂಗಪಡಿಸಿವೆ.

ಇದನ್ನೂ ಓದಿ: Twitter World Cup 2023: ತಾಂಜಾನಿಯಾದ ಸಿಂಬಾ ಸ್ಪೋರ್ಟ್ಸ್ ಕ್ಲಬ್ ಸೋಲಿಸಿ ಟ್ವಿಟರ್ ವರ್ಲ್ಡ್ ಕಪ್ 2023 ಗೆದ್ದ ಆರ್ಸಿಬಿ 

ಆಪ್ಟಿಕಲ್ ಇಲ್ಯೂಷನ್ ಟೆಸ್ಟ್ ನ್ನು ಪರಿಹರಿಸುವಲ್ಲಿ ನೀವು ಆನಂದ ಪಡುತ್ತೀರಿ ಎಂದಾದರೆ, ಗೂಗಲ್ ನಲ್ಲಿ ಅನೇಕ ಫೋಟೋಗಳನ್ನು ನೋಡಬಹುದು. ಇದು ನಿಮ್ಮ ಮೆದುಳನ್ನು ಸಖತ್ ಶಾರ್ಪ್ ಮಾಡುತ್ತದೆ. ಇಂತಹ ಮೆದುಳಿಗೆ ಮೇವು ನೀಡುವ ಕೆಲಸ ಮಾಡಿದರೆ ಆರೋಗ್ಯ ವೃದ್ಧಿಸುತ್ತದೆ ಎಂದು ಕೆಲ ಸಂಶೋಧನೆಗಳು ಹೇಳುತ್ತವೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News