ಕುಂಬಮೇಳಕ್ಕೆ ಆಗಮಿಸಿದ ಪಾಕ್ ಸಂಸದ, ಪುಲ್ವಾಮಾ ದಾಳಿ ಬಗ್ಗೆ ಹೇಳಿದ್ದೇನು?

ಉತ್ತರಪ್ರದೇಶದ ಪ್ರಯಾಗ್​​ರಾಜ್​​​​ಗೆ ಆಗಮಿಸಿದ ಪಾಕಿಸ್ತಾನ ಸಂಸದ ರಮೇಶ್ ಕುಮಾರ್ ವಾಕ್ವಾನಿ.

Last Updated : Feb 23, 2019, 03:46 PM IST
ಕುಂಬಮೇಳಕ್ಕೆ ಆಗಮಿಸಿದ ಪಾಕ್ ಸಂಸದ, ಪುಲ್ವಾಮಾ ದಾಳಿ ಬಗ್ಗೆ ಹೇಳಿದ್ದೇನು? title=
Pic Courtesy: ANI

ಪ್ರಯಾಗ್​​ರಾಜ್: ಪುಲ್ವಾಮ ಉಗ್ರರ ದಾಳಿಯ ಬೆನ್ನಲ್ಲೇ ಉತ್ತರಪ್ರದೇಶದ ಪ್ರಯಾಗ್​​ರಾಜ್​​​​ಗೆ ಆಗಮಿಸಿದ ಪಾಕಿಸ್ತಾನ ಸಂಸದ ರಮೇಶ್ ಕುಮಾರ್ ವಾಕ್ವಾನಿ ಭಾರತ ಮತ್ತು ಪಾಕಿಸ್ತಾನ ಸ್ನೇಹಹಸ್ತ ಚಾಚುವ ದಿಸೆಯಲ್ಲಿ ಚಿಂತಿಸಬೇಕು ಎಂದು ಹೇಳಿದ್ದಾರೆ.

ಭಾರತೀಯ ಸಂಸ್ಕೃತಿ ಸಂಬಂಧಗಳ ಸಮಿತಿ ಆಹ್ವಾನದ ಮೇರೆಗೆ ಭಾರತಕ್ಕೆ ಆಗಮಿಸಿದ ತೆಹ್ರಿಕ್ ಇನ್ಸಾಫ್ ಪಕ್ಷದ ಸಂಸದ ರಮೇಶ್ ಕುಮಾರ್ ವಾಕ್ವಾನಿ, "ಕುಂಭ ಅದ್ಭುತ, ಇಲ್ಲಿ ಬಂದು ನಮ್ಮ ಹಿಂದುತ್ವ ಎಷ್ಟು ದೊಡ್ಡದಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕು" ಎಂದು ಭಾರತವನ್ನು ಪ್ರಶಂಸಿಸಿದ್ದಾರೆ.  ಪ್ರಸಿದ್ಧ ಕುಂಬಮೇಳವನ್ನು ಹೊಗಳಿ, ಶಾಂತಿ ಮಾತುಕತೆಯ ಪ್ರಸ್ತಾಪವನ್ನು ಇರಿಸಿದ್ದಾರೆ.

ಹಲವು ಬಾರಿ ಕುಂಬಮೇಳಕ್ಕೆ ಬಂದಿದ್ದೇನೆ. ಆದರೆ, ಪ್ರಥಮ ಬಾರಿಗೆ ಸರ್ಕಾರದ ಆಹ್ವಾನ ಮೇರೆಗೆ ಬಂದಿರುವುದಾಗಿ ತಿಳಿಸಿದ ರಮೇಶ್ ಕುಮಾರ್ ವಾಕ್ವಾನಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​​ರನ್ನು ಭೇಟಿ ಮಾಡಿ ಶಾಂತಿ ಮಾತುಕತೆಗೆ ಮನವಿ ಮಾಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು. 

ಪುಲ್ವಾಮಾ ಭಯೋತ್ಪಾದನಾ ದಾಳಿ ಬಳಿಕ ಉಭಯ ದೇಶಗಳಲ್ಲಿ ಒತ್ತಡದ ಪರಿಸ್ಥಿತಿ ನಿರ್ಮಾಣವಾಗಿದೆ. "ಭಾರತ ಮತ್ತು ಪಾಕಿಸ್ತಾನದಲ್ಲಿ ಶಾಂತಿ ಮರುಸ್ಥಾಪಿಸಲು ನಾವು ಬಯಸುತ್ತೇವೆ"  ಎಂದು ರಮೇಶ್ ಕುಮಾರ್ ಹೇಳಿದರು.
 

Trending News