Online Food Order: ನೀವು ಇರುವ ಜಾಗಕ್ಕೇ ಆಹಾರವನ್ನು ವಿತರಿಸುವ ಆನ್ಲೈನ್ ಫುಡ್ ಡೆಲಿವರಿ ಪ್ಲಾಟ್ಫಾರ್ಮ್ ಸ್ವಿಗ್ಗಿ ಇದೀಗ ಬಳಕೆದಾರರ ಪ್ರತಿ ಫುಡ್ ಆರ್ಡರ್ಗೆ 2 ರೂಪಾಯಿಗಳ "ಪ್ಲಾಟ್ಫಾರ್ಮ್ ಶುಲ್ಕ" ವಿಧಿಸಲು ನಿರ್ಧರಿಸಿದೆ. ವಿಶೇಷವೆಂದರೆ, ನೀವು ಒಂದೇ ಆರ್ಡರ್ ಮಾಡಿ ಅಥವಾ 10 ಆರ್ಡರ್ ಮಾಡಿರಿ ಶುಲ್ಕ ಮಾತ್ರ ಒಂದೇ ರೀತಿ ಆಗಿರಲಿದೆ. ಈ ಪ್ಲಾಟ್ಫಾರ್ಮ್ ಶುಲ್ಕವು ಫುಡ್ ಡೆಲಿವರಿಗೆ ಮಾತ್ರ ಅನ್ವಯಿಸುತ್ತದೆ. ಪ್ರಸ್ತುತ ಕ್ವಿಕ್-ಕಾಮರ್ಸ್ ಅಥವಾ ಇನ್ಸ್ಟಾಮಾರ್ಟ್ ವಿತರಣೆಗಳಿಗೆ ಅನ್ವಯಿಸುವುದಿಲ್ಲ ಎಂಬುದು ಗಮನಾರ್ಹ ಸಂಗತಿ ಆಗಿದೆ.
ಈ ಕುರಿತಂತೆ ಸುದ್ದಿ ಸಂಸ್ಥೆ ಐಎಎನ್ಎಸ್ ಗೆ ಮಾಹಿತಿ ನೀಡಿರುವ ಸ್ವಿಗ್ಗಿ ಕಂಪನಿ, ಮುಖ್ಯ ವೇದಿಕೆಯಲ್ಲಿ ಆನ್ಲೈನ್ನಲ್ಲಿ ಫುಡ್ ಆರ್ಡರ್ ಮಾಡುವ ಆರ್ಡರ್ಗಳಿಗೆ ಮಾತ್ರ ಹೆಚ್ಚುವರಿ ಶುಲ್ಕಗಳನ್ನು ವಿಧಿಸಲಾಗುತ್ತಿದೆ ಮತ್ತು ಕ್ವಿಕ್-ಕಾಮರ್ಸ್ ಅಥವಾ ಇನ್ಸ್ಟಾಮಾರ್ಟ್ ಬಳಕೆದಾರರಿಗೆ ಈ ನಿಯಮ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಅದರಲ್ಲೂ ಆರಂಭಿಕ ದಿನಗಳಲ್ಲಿ ಬೆಂಗಳೂರು ಮತ್ತು ಹೈದರಾಬಾದ್ನಲ್ಲಿರುವ ಗ್ರಾಹಕರಿಗೆ ಈ ನಿಯಮ ಅನ್ವಯವಾಗಲಿದ್ದು, ದೆಹಲಿ ಮತ್ತು ಮುಂಬೈನಂತಹ ನಗರಗಳಲ್ಲಿ "ಪ್ಲಾಟ್ಫಾರ್ಮ್ ಶುಲ್ಕ" ಸದ್ಯಕ್ಕೆ ಪರಿಣಾಮಕಾರಿ ಆಗಿರುವುದಿಲ್ಲ ಎಂದು ತಿಳಿದುಬಂದಿದೆ.
ಏನಿದು "ಪ್ಲಾಟ್ಫಾರ್ಮ್ ಶುಲ್ಕ"?
"ಪ್ಲಾಟ್ಫಾರ್ಮ್ ಶುಲ್ಕ" ವು ಫುಡ್ ಆರ್ಡರ್ಗಳ ಮೇಲೆ ವಿಧಿಸಲಾಗುವ ಅತ್ಯಲ್ಪ ಫ್ಲಾಟ್ ಶುಲ್ಕವಾಗಿದೆ. ಈ ಶುಲ್ಕವು ನಮ್ಮ ಪ್ಲಾಟ್ಫಾರ್ಮ್ ಅನ್ನು ನಿರ್ವಹಿಸಲು ಮತ್ತು ಸುಧಾರಿಸಲು ಮತ್ತು ತಡೆರಹಿತ ಅಪ್ಲಿಕೇಶನ್ ಅನುಭವವನ್ನು ನೀಡಲು ಅಪ್ಲಿಕೇಶನ್ ವೈಶಿಷ್ಟ್ಯಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ" ಎಂದು ಸ್ವಿಗ್ಗಿ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ- ಮೆಸೇಜ್ ಮರೆಯಾಗುವ ಭಯ ಇನ್ನಿಲ್ಲ WhatsApp ಪರಿಚಯಿಸಿದೆ ಹೊಸ ವೈಶಿಷ್ಟ್ಯ !
ಗಮನಾರ್ಹವಾಗಿ, ಫುಡ್ ಡೆಲಿವರಿ ಬಿಸಿನೆಸ್ ನಲ್ಲಿನ ಆದಾಯವನ್ನು ಸುಧಾರಿಸಲು ಮತ್ತು ಕಂಪನಿಯ ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜನಪ್ರಿಯ ಫುಡ್ ಡೆಲಿವರಿ ಕಂಪನಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ಜನಪ್ರಿಯ ಫುಡ್ ಡೆಲಿವರಿ ಪ್ಲಾಟ್ಫಾರ್ಮ್ ಸ್ವಿಗ್ಗಿಯ ಈ ಮಹತ್ವದ ನಿರ್ಧಾರದ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಕಂಪನಿಯ ಸಿಇಒ ಸಹ-ಸಂಸ್ಥಾಪಕ ಶ್ರೀಹರ್ಷ ಮೆಜೆಟಿ, ಪ್ಲಾಟ್ಫಾರ್ಮ್ ಶುಲ್ಕಗಳ ಪರಿಚಯದಿಂದಾಗಿ ಡೆಲಿವರಿ ವ್ಯವಹಾರದಲ್ಲಿನ ನಿಧಾನಗತಿಯು ಕಂಪನಿಯ ಬೆಳವಣಿಗೆಯ ದರದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.
ಈ ಕುರಿತಂತೆ ತಮ್ಮ ಉದ್ಯೋಗಿಗಳಿಗೆ ಮೇಲ್ನಲ್ಲಿ ತಿಳಿಸಿರುವ ಶ್ರೀಹರ್ಷ ಮೆಜೆಟಿ, , 'ನಮ್ಮ ಅಂದಾಜಿನ ಪ್ರಕಾರ, ಆಹಾರ ವಿತರಣೆಯ ಬೆಳವಣಿಗೆಯ ದರವು ನಿಧಾನಗೊಂಡಿದೆ. ನಮ್ಮ ನಗದು ಮೀಸಲುಗಳು ನಮಗೆ ಮೂಲಭೂತವಾಗಿ ಕಠಿಣ ಹವಾಮಾನ ಪರಿಸ್ಥಿತಿಗಳಿಗೆ ಉತ್ತಮ ಸ್ಥಾನವನ್ನು ನೀಡುತ್ತದೆ, ನಾವು ಇದನ್ನು ಊರುಗೋಲನ್ನಾಗಿ ಮಾಡಲು ಸಾಧ್ಯವಿಲ್ಲ. ಆದರೂ ನಮ್ಮ ದೀರ್ಘಾವಧಿಯ ಜೀವನವನ್ನು ಸುರಕ್ಷಿತವಾಗಿರಿಸಲು ಸಾಮರ್ಥ್ಯಗಳನ್ನು ಗುರುತಿಸುವುದನ್ನು ಮುಂದುವರಿಸಿ ಅದರ ಸದುಪಯೋಗ ಪಡಿಸಿಕೊಳ್ಳಬೇಕು' ಎಂದು ಕರೆ ನೀಡಿದ್ದಾರೆ.
ಇದನ್ನೂ ಓದಿ- Neeta Ambani ಬಳಿ ಇದೆ ವಿಶ್ವದ ಅತ್ಯಂತ ದುಬಾರಿ ಸ್ಮಾರ್ಟ್ ಫೋನ್! ಬೆಲೆ ಕೇಳಿದ್ರೆ ದಂಗಾಗುವಿರಿ
ಬಳಕೆದಾರರಿಗೆ ಇದು ಸಣ್ಣ ಮೊತ್ತದಂತೆ ಕಾಣಿಸಬಹುದು. ಆದರೆ ಇದರಿಂದ ಕಂಪನಿಗೆ ಸಾಕಷ್ಟು ಲಾಭವಾಗಲಿದೆ. ಹೈದರಾಬಾದ್ನ ಜನರು ಪವಿತ್ರ ರಂಜಾನ್ ತಿಂಗಳಲ್ಲಿ ಪ್ರಮುಖ ಆಹಾರ-ವಿತರಣಾ ವೇದಿಕೆ ಸ್ವಿಗ್ಗಿಯಲ್ಲಿ 10 ಲಕ್ಷ ಬಿರಿಯಾನಿಗಳು ಮತ್ತು 4 ಲಕ್ಷ ಪ್ಲೇಟ್ ಹಲೀಮ್ ಅನ್ನು ಆರ್ಡರ್ ಮಾಡಿದ್ದಾರೆ. ಕೊನೆಯದಾಗಿ ವರದಿ ಮಾಡಿದಂತೆ, ದಿನದಲ್ಲಿ 1.5-2 ಮಿಲಿಯನ್ ಆರ್ಡರ್ಗಳನ್ನು ಪ್ರಕ್ರಿಯೆಗೊಳಿಸಿರುವುದಾಗಿ ಸ್ವಿಗ್ಗಿ ಹೇಳಿಕೊಂಡಿದೆ.
ಮಾರ್ಚ್ನಲ್ಲಿ, ಆನ್ಲೈನ್ ಫುಡ್ ಡೆಲಿವರಿ ವೇದಿಕೆಯು ಕಳೆದ 12 ತಿಂಗಳುಗಳಲ್ಲಿ 33 ಮಿಲಿಯನ್ ಪ್ಲೇಟ್ ಇಡ್ಲಿಗಳನ್ನು ವಿತರಿಸಿದೆ ಎಂದು ಹೇಳಿದೆ. ಇದು ಗ್ರಾಹಕರಲ್ಲಿ ಈ ಖಾದ್ಯದ ಅಪಾರ ಜನಪ್ರಿಯತೆಯನ್ನು ಸೂಚಿಸುತ್ತದೆ. ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ಇಡ್ಲಿಗಳನ್ನು ಹೆಚ್ಚು ಆರ್ಡರ್ ಮಾಡಿದ ಮೊದಲ ಮೂರು ನಗರಗಳಾಗಿವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.