ವಿಯಾನ್ ಜಾಗತಿಕ ಶೃಂಗಸಭೆಗೆ ಚಾಲನೆ ನೀಡಿದ ಶೇಖ್ ನಹಾಯನ್ ಮಬಾರಕ್ ಅಲ್ ನಹಾಯನ್

  ಇಂದು ಯುಎಇ ನ ಕ್ಯಾಬಿನೆಟ್ ಸಚಿವ ಶೇಖ್ ನಹಾಯನ್ ಮುಬಾರಕ್ ಅಲ ನಹಾಯನ್ ದುಬೈನಲ್ಲಿ ನಡೆಯುತ್ತಿರುವ ವಿಯಾನ್ ಜಾಗತಿಕ ಶೃಂಗಸಭೆಗೆ ಚಾಲನೆ ನೀಡಿದರು.

Last Updated : Feb 20, 2019, 01:39 PM IST
ವಿಯಾನ್ ಜಾಗತಿಕ ಶೃಂಗಸಭೆಗೆ ಚಾಲನೆ ನೀಡಿದ ಶೇಖ್ ನಹಾಯನ್ ಮಬಾರಕ್ ಅಲ್ ನಹಾಯನ್  title=
Photo courtesy:WION

ದುಬೈ:  ಇಂದು ಯುಎಇ ನ ಕ್ಯಾಬಿನೆಟ್ ಸಚಿವ ಶೇಖ್ ನಹಾಯನ್ ಮುಬಾರಕ್ ಅಲ ನಹಾಯನ್ ದುಬೈನಲ್ಲಿ ನಡೆಯುತ್ತಿರುವ ವಿಯಾನ್ ಜಾಗತಿಕ ಶೃಂಗಸಭೆಗೆ ಚಾಲನೆ ನೀಡಿದರು.

ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಶೇಖ್ ನಹಯನ್ ಮಬಾರಕ್ ಅಲ್ ನಹಾಯನ್ ಯುಎಇ ದೇಶವು ಭಾರತದ ಜೊತೆ ಉತ್ತಮ ವ್ಯಾಪಾರ ಸಂಬಂಧವನ್ನು ಹೊಂದಿದೆ ಮತ್ತು ಪ್ರಾದೇಶಿಕ ಮತ್ತು ಜಾಗತಿಕ ಭದ್ರತೆಯಲ್ಲಿ ಅದು ಪ್ರಮುಖ ಪಾತ್ರ ವಹಿಸಿದೆ ಎಂದರು.

"ನಮ್ಮ ಆರ್ಥಿಕತೆಯು ಜಾಗತಿಕ ಆರ್ಥಿಕತೆಯ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಾಗುತ್ತಿದ್ದು, ಆಫ್ರಿಕಾ, ಏಷ್ಯಾ ಮತ್ತು ದಕ್ಷಿಣ ಯುರೋಪ್ನಂತಹ ಮಾರುಕಟ್ಟೆಗಳಿಗೆ ಹತ್ತೀರದಲ್ಲಿದೆ. ನಮ್ಮ ದೇಶವು ಉನ್ನತ ಮಟ್ಟದ ಸುರಕ್ಷತೆ ಮತ್ತು ಭದ್ರತೆ ಮತ್ತು ಉನ್ನತ ಗುಣಮಟ್ಟದ ಜೀವನವನ್ನು ಹೊಂದಿದೆ. ಸಶಕ್ತ ಹಾಗೂ ಸುಸ್ಥಿರ ಆರ್ಥಿಕತೆಯನ್ನು ಹೊಂದಲು ಕಠಿಣ ಶ್ರಮ, ಸ್ಪರ್ಧಾತ್ಮಕತೆ ಸೃಜನಶೀಲತೆಯ ಅಗತ್ಯತೆ ಇದೆ ಎಂದರು. ಅಲ್ಲದೆ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆಗೆ ವ್ಯಾಪಾರ ಮತ್ತು ಇತರ ನೀತಿಗಳಲ್ಲಿ ರಚನಾತ್ಮಕ ಬದಲಾವಣೆಗಳ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟರು.

"ಈ ಸವಾಲುಗಳನ್ನು ಎದುರಿಸಲು ಮತ್ತು ಏಕೀಕರಣ ಮತ್ತು ಸಹಕಾರವನ್ನು ಸಾಧಿಸಲು ಚಿಂತನಶೀಲ ವಿಶ್ಲೇಷಣೆ ಮತ್ತು ಸೃಜನಾತ್ಮಕ ವಿಧಾನದ ಅಗತ್ಯ" ಎಂದು ಶೇಖ್ ನಹಾಯನ್ ಮುಬಾರಕ್ ಅಲ ನಹಾಯನ್ ಅವರು ಶೃಂಗಸಭೆಗೆ ಚಾಲನೆ ನೀಡಿ ಹೇಳಿದರು.

Trending News