Sudan war Effect: ಸುಡಾನ್ ಸಮರದಿಂದ ಪೆಪ್ಸಿ-ಕೋಕ್ ಪೂರೈಕೆಗೆ ಅಡಚಣೆ; ನಿತ್ಯೋಪಯೋಗಿ ಉತ್ಪನ್ನಗಳಲ್ಲೂ ಕೊರತೆ!

Sudan war Effect: ಸುಡಾನ್, ಗಮ್ ಅರೇಬಿಕಾ ಎಂಬ ಅಕೇಶಿಯಾ ಸಸ್ಯದಿಂದ ತಯಾರಿಸುವ ರಾಳದ ಅತಿದೊಡ್ಡ ಉತ್ಪಾದಕ ಮತ್ತು ಪೂರೈಕೆದಾರ ರಾಷ್ಟ್ರವಾಗಿದೆ. ಈ ಗಮ್ ಅರೇಬಿಕಾವನ್ನು ಸೋಡಾ, ಕ್ಯಾಂಡಿಗಳು ಹಾಗೂ ಸೌಂದರ್ಯ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಸ್ಕೈ ನ್ಯೂಸ್ ಪ್ರಕಾರ, ಜಗತ್ತಿನ 70% ಗಮ್ ಅರೇಬಿಕಾ ಸೂಡಾನ್‌ ನಿಂದ ಪೂರೈಕೆಯಾಗುತ್ತದೆ.

Written by - Girish Linganna | Edited by - Bhavishya Shetty | Last Updated : Apr 30, 2023, 08:52 AM IST
    • ಎಪ್ರಿಲ್ 15 ರಂದು ಸುಡಾನಿನ ರಾಜಧಾನಿಯಲ್ಲಿ ಇಬ್ಬರು ಜನರಲ್’ಗಳ ತಂಡಗಳ ಮಧ್ಯೆ ಕದನ ಆರಂಭವಾಯಿತು.
    • ಈ ಯುದ್ಧದ ಪರಿಣಾಮವಾಗಿ, ಕೋಕಾಕೋಲ ಹಾಗೂ ಪೆಪ್ಸಿ ಕೋ ಸಂಸ್ಥೆಗಳ ಪೂರೈಕೆಯಲ್ಲಿ ಅಪಾರ ವ್ಯತ್ಯಯ ಉಂಟಾಗಿದೆ.
    • ಜಗತ್ತಿನಲ್ಲಿ ಬಳಕೆಯಾಗುವ ಗಮ್ ಅರೇಬಿಕಾದ 70%ದಷ್ಟನ್ನು ಸುಡಾನ್ ಒಂದೇ ಪೂರೈಸುತ್ತದೆ.
Sudan war Effect: ಸುಡಾನ್ ಸಮರದಿಂದ ಪೆಪ್ಸಿ-ಕೋಕ್ ಪೂರೈಕೆಗೆ ಅಡಚಣೆ; ನಿತ್ಯೋಪಯೋಗಿ ಉತ್ಪನ್ನಗಳಲ್ಲೂ ಕೊರತೆ! title=
sudan

Sudan war Effect: ಈಗ ಸುಡಾನಿನಲ್ಲಿ ಇಬ್ಬರು ಜನರಲ್‌ ಗಳ ನೇತೃತ್ವದ ಪಡೆಗಳ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ, ಸುಡಾನಿನ ಜನತೆಯ ಪ್ರಾಣಕ್ಕೆ ಮತ್ತು ಜೀವನಕ್ಕೆ ತೊಂದರೆ ಉಂಟಾಗಿದೆ. ಆದರೆ ಈ ಯುದ್ಧದ ಪರಿಣಾಮವಾಗಿ, ಅಮೆರಿಕನ್ನರಿಗೆ ಕುಡಿಯುವ ಸೋಡಾದ ವ್ಯತ್ಯಯ ತಲೆದೋರಿದೆ.

ಇದನ್ನೂ ಓದಿ: Budh Shukra Yuti 2023: ಮಿಥುನ ರಾಶಿಯಲ್ಲಿ ಲಕ್ಷ್ಮಿ ನಾರಾಯಣ ಯೋಗ: ಈ ರಾಶಿಗಳಿಗೆ ಬಿಡುವಿಲ್ಲದೆ ಧನ-ಸಂಪತ್ತು ಪ್ರಾಪ್ತಿ; ಖುಲಾಯಿಸಿತು ಅದೃಷ್ಟ!

ಸುಡಾನ್, ಗಮ್ ಅರೇಬಿಕಾ ಎಂಬ ಅಕೇಶಿಯಾ ಸಸ್ಯದಿಂದ ತಯಾರಿಸುವ ರಾಳದ ಅತಿದೊಡ್ಡ ಉತ್ಪಾದಕ ಮತ್ತು ಪೂರೈಕೆದಾರ ರಾಷ್ಟ್ರವಾಗಿದೆ. ಈ ಗಮ್ ಅರೇಬಿಕಾವನ್ನು ಸೋಡಾ, ಕ್ಯಾಂಡಿಗಳು ಹಾಗೂ ಸೌಂದರ್ಯ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಸ್ಕೈ ನ್ಯೂಸ್ ಪ್ರಕಾರ, ಜಗತ್ತಿನ 70% ಗಮ್ ಅರೇಬಿಕಾ ಸೂಡಾನ್‌ ನಿಂದ ಪೂರೈಕೆಯಾಗುತ್ತದೆ.

ಪ್ರಸ್ತುತ ನಡೆಯುತ್ತಿರುವ ಈ ಕದನ ಪ್ರಮುಖ ಉತ್ಪನ್ನವಾದ ಗಮ್ ಅರೇಬಿಕಾದ ಉತ್ಪಾದನೆ, ಪೂರೈಕೆಗೆ ಅಡಚಣೆ ಉಂಟುಮಾಡಿದೆ. ಇದರ ಪರಿಣಾಮವಾಗಿ ಹತ್ತಾರು ನಿತ್ಯೋಪಯೋಗಿ ಉತ್ಪನ್ನಗಳ ಕೊರತೆ ಎದುರಾಗಬಹುದು.

ಪೆಪ್ಸಿಕೋ ಹಾಗೂ ಕೋಕಾ ಕೋಲಾದಂತಹ ಕಂಪನಿಗಳಿಗೆ ಅವುಗಳ ಉತ್ಪನ್ನಗಳನ್ನು ಗಮ್ ಅರೇಬಿಕಾ ಇಲ್ಲದೆ ತಯಾರಿಸಲು ಸಾಧ್ಯವೇ ಇಲ್ಲ ಎಂದು ಆ್ಯಗ್ರಿಗಮ್ ಎಂಬ ಜಾಗತಿಕ ಗಮ್ ಅರೇಬಿಕಾ ಪೂರೈಕೆದಾರ ಸಂಸ್ಥೆಯ ಮಾರುಕಟ್ಟೆ ನಿರ್ದೇಶಕ ಡಾನಿ ಹಡ್ಡಾಡ್ ಅಭಿಪ್ರಾಯ ಪಟ್ಟಿದ್ದಾರೆ.

ಏಪ್ರಿಲ್ 15ರಂದು ಇಬ್ಬರು ಜನರಲ್‌ ಗಳ ಸೇನೆಗಳ ಮಧ್ಯೆ ಸುಡಾನ್ ರಾಜಧಾನಿ ಖರ್ತೋಮ್ ನಲ್ಲಿ ಯುದ್ಧ ಆರಂಭವಾಯಿತು. ಸುಡಾನ್ ಸೇನಾ ಮುಖ್ಯಸ್ಥ ಅಬ್ದುಲ್ ಫತ್ತಾ ಅಲ್ ಬುರ್ಹಾನ್ ಹಾಗೂ ರಾಪಿಡ್ ಸಪೋರ್ಟ್ ಫೋರ್ಸ್ ಎಂಬ ಶಕ್ತಿಶಾಲಿ ಅರೆಸೇನಾಪಡೆಯ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮೊಹಮ್ಮದ್ ಹಮ್ದಾನ್ ಡಗಾಲೋ ಅವರ ಪಡೆಗಳು ಪೂರ್ಣ ಅಧಿಕಾರಕ್ಕಾಗಿ ಸೆಣಸಾಟ ನಡೆಸುತ್ತಿವೆ.

ನೂತನ ಸೇನಾ ಸ್ಥಾಪನೆಯ ಮಾತುಕತೆಗಳು ವಿಫಲವಾದ ಪರಿಣಾಮವಾಗಿ, ಇಬ್ಬರು ಜನರಲ್‌ಗಳ ನಡುವಿನ ಘರ್ಷಣೆ ತಾರಕಕ್ಕೇರಿದೆ. ಕದನ ವಿರಾಮದ ಕುರಿತ ಇತ್ತೀಚಿನ ಭರವಸೆಯ ಹೊರತಾಗಿಯೂ, ಶುಕ್ರವಾರವೂ ಖರ್ತೋಮ್‌’ನಲ್ಲಿ ಗುಂಡಿನ ಮೊರೆತ ಕೇಳಿಸುತ್ತಿತ್ತು.

ಸುಡಾನಿನ ಪರಿಸ್ಥಿತಿ ಮೊದಲೇ ಕಳವಳಕಾರಿಯಾಗಿದ್ದ ಕಾರಣದಿಂದ ಕೃಷಿ ರಬ್ಬರ್ ಮೇಲೆ ಅವಲಂಬಿತವಾಗಿರುವ ಕಂಪನಿಗಳು ಮೂರರಿಂದ ಆರು ತಿಂಗಳಿಗೆ ಬೇಕಾದಷ್ಟು ರಬ್ಬರ್ ಹೊಂದಿರುವ ಸಾಧ್ಯತೆಗಳಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ ಈಗ ನಡೆಯುತ್ತಿರುವ ಯುದ್ಧ ಸುಡಾನಿನ ರಾಜಧಾನಿ ಕೇಂದ್ರಿತವಾಗಿರುವುದರಿಂದ ಗಮ್ ಅರೇಬಿಕ್ ವ್ಯಾಪಾರ ಸಂಪೂರ್ಣವಾಗಿ ನಿಲುಗಡೆಗೆ ಬಂದಿದೆ.

ಇದನ್ನೂ ಓದಿ: ಮುಂದಿನ 72 ಗಂಟೆಗಳ ಕಾಲ ಈ ಪ್ರದೇಶಗಳಲ್ಲಿ ಆಲಿಕಲ್ಲು ಸಹಿತ ಮಳೆ! ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

ಗಮ್ ಅರೇಬಿಕ್ ಯುಎಸ್ಎ ಮುಖ್ಯಸ್ಥ ಮೊಹಮದ್ ಅಲ್‌ನೂರ್ ರಸ್ತೆ ತಡೆ ಮತ್ತು ಯುದ್ಧದ ಪರಿಣಾಮವಾಗಿ ಗಮ್ ಅರೇಬಿಕ್ ಪಡೆಯುವುದು ಕಷ್ಟಕರ ಎಂದಿದ್ದಾರೆ. ಮುಂಬೈ ಮೂಲದ ಗಮ್ ಆಮದುದಾರ ಸಂಸ್ಥೆ ವಿಜಯ್ ಬ್ರೋಸ್ ನಿರ್ದೇಶಕರಾದ ಜಿನೇಶ್ ದೋಶಿ ಅವರು ಈ ಯುದ್ಧದ ಪರಿಣಾಮವಾಗಿ ಗಮ್ ಪೂರೈಕೆದಾರರು ಒದ್ದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪರಿಸ್ಥಿತಿ ಯಾವಾಗ ಸುಧಾರಿಸಬಹುದು ಎನ್ನುವುದು ಮಾರಾಟಗಾರರಿಗಾಗಲಿ, ಖರೀದಿದಾರರಿಗಾಗಲಿ ತಿಳಿದಿಲ್ಲ ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News