ನವದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮಾ ಉಗ್ರರ ದಾಳಿಯಾಗಿ ಒಂದು ವಾರವೂ ಸಹಿತ ಕಳೆದಿಲ್ಲ, ಈಗ ಬಾರಾಮುಲ್ಲಾ ಜಿಲ್ಲೆಯಲ್ಲಿ ಸೈನ್ಯದಲ್ಲಿನ 111 ಹುದ್ದೆಗಳ ಭರ್ತಿಗಾಗಿ 2.500ಕ್ಕೂ ಅಧಿಕ ಕಾಶ್ಮೀರಿ ಯುವಕರು ಅರ್ಜಿ ಸಲ್ಲಿಸಿದ್ದಾರೆ.
ಇದೇ ವೇಳೆ ಭರ್ತಿ ವೇಳೆ ಅಲ್ಲಿದ್ದ ವ್ಯಕ್ತಿ ಹೇಳುವಂತೆ " ಸೈನ್ಯವನ್ನು ಸೇರುವುದರ ಮೂಲಕ ನಾವು ದೇಶ ಸೇವೆಯನ್ನು ಸಹ ಮಾಡಬಹುದು ಮತ್ತು ನಮ್ಮ ಕುಟುಂಬಗಳನ್ನು ನಾವು ಸಾಕಬಹುದು ಏಕಂದರೆ ಇಲ್ಲಿ ಅಷ್ಟು ಉದ್ಯೋಗದ ಅವಕಾಶಗಳು ಇಲ್ಲವೆಂದು ಹೇಳಿದ.
Jammu & Kashmir: Several Kashmiri youth take part in an army recruitment drive for 111 vacancies in Baramulla. Bilal Ahmad, army aspirant says, "We will get the chance to sustain our families and serve our nation, what else can one want?" pic.twitter.com/bmtMdYfvsk
— ANI (@ANI) February 19, 2019
ಶ್ರೀನಗರದಿಂದ 75 ಕಿಲೋ ಮೀಟರ್ ದೂರದಲ್ಲಿರುವ ಉತ್ತರ ಕಾಶ್ಮೀರದ ಬಾರಾಮುಲ್ಲಾದಲ್ಲಿ ಈಗ ಸೇನಾ ಭರ್ತಿ ನಡೆಯುತ್ತಿದೆ. ಇದೇ ವೇಳೆ ಇನ್ನೊಬ್ಬ ಅಭ್ಯರ್ಥಿ ಹೇಳುವಂತೆ" ನಾವು ಕಾಶ್ಮೀರ ಬಿಟ್ಟು ಹೊರ ಹೋಗುವಂತಿಲ್ಲ, ಇದು ನಿಜಕ್ಕೂ ನಮಗೆ ಒಳ್ಳೆಯ ಅವಕಾಶ.ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇನಾ ಭರ್ತಿ ಮಾಡಿಕೊಳ್ಳುತ್ತಾರೆಂದು ಆಶಿಸುತ್ತೇವೆ. ಕಾಶ್ಮೀರಿ ಯುವಕರನ್ನು ಅವರು ಹುದ್ದೆಗೆ ಭರ್ತಿ ಮಾಡಿಕೊಂಡಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಅವರು ನೇರವಾಗಿ ಜನರ ಜೊತೆ ಮಾಡಬಹುದು. ಅಲ್ಲದೆ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಬಹುದು" ಎಂದನು.
2016 ರ ಆರ್ಥಿಕ ಸಮೀಕ್ಷೆ ಪ್ರಕಾರ ಜಮ್ಮು ಮತ್ತು ಕಾಶ್ಮೀರದ ನಿರುದ್ಯೋಗ ದರವು ರಾಷ್ಟ್ರೀಯ ಸರಾಸರಿಗಿಂತ ಅಧಿಕ, 18-29 ವರ್ಷ ವಯಸ್ಸಿನವರಲ್ಲಿ ಶೇ 24.6.ರಷ್ಟು ಜನರು ನಿರುದ್ಯೋಗಿಗಳಾಗಿದ್ದಾರೆ.