ನವದೆಹಲಿ: ಇತ್ತೀಚಿಗೆ ಪುಲ್ವಾಮಾ ಉಗ್ರರ ದಾಳಿಯಲ್ಲಿ ಮೃತಪಟ್ಟ ಬಿಹಾರದ ಇಬ್ಬರು ಹುತಾತ್ಮ ಸೈನಿಕರಲ್ಲಿ ಒಂದು ಕುಟುಂಬವನ್ನು ದತ್ತು ತಗೆದುಕೊಳ್ಳುವ ನಿರ್ಧಾರವನ್ನು ಶೆಖ್ಪುರಾದ ಜಿಲ್ಲಾಧಿಕಾರಿ ಇನಾಯತ್ ಖಾನ್ ತೆಗೆದುಕೊಂಡಿದ್ದಾರೆ.
ಉಗ್ರರ ದಾಳಿಗೆ ಮೃತಪಟ್ಟ 40 ಸೈನಿಕರಲ್ಲಿ ಬಿಹಾರದ ಸಂಜಯ್ ಕುಮಾರ್ ಸಿನ್ಹಾ ಮತ್ತು ರತನ್ ಕುಮಾರ್ ಠಾಕೂರ್ ಕೂಡ ಹುತಾತ್ಮರಾಗಿದ್ದರು.ಈಗ ವ್ಯಯಕ್ತಿಕವಾಗಿ ಈ ಇಬ್ಬರಲ್ಲಿ ಒಂದು ಕುಟುಂಬವನ್ನು ದತ್ತು ತಗೆದುಕೊಳ್ಳುವುದಕ್ಕೆ ನಿರ್ಧರಿಸಿದ್ದಾರೆ.
Inayat Khan, DM Sheikhpura, Bihar: Also, as an individual, I would like to adopt one of the families of the two martyrs (Constable Sanjay Kumar Sinha from Patna & Ratan Kumar Thakur from Bhagalpur). #PulwamaTerrorAttack (16.02.2019) https://t.co/eoAOc5HZKm
— ANI (@ANI) February 18, 2019
ಅಲ್ಲದೆ ಸಾರ್ವಜನಿಕವಾಗಿ ಎರಡು ಕುಟುಂಬಗಳಿಗೂ ಸಹ ಹಣವನ್ನು ಸಂಗ್ರಹಿಸಲಾಗುತ್ತದೆ.ಮಾರ್ಚ್ 10ರ ಒಳಗಾಗಿ ಎಷ್ಟು ಹಣವು ಸಂಗ್ರಹವಾಗಿರುತ್ತದೆಯೂ ಅಷ್ಟು ಹಣವನ್ನು ಸೈನಿಕರ ಕುಟುಂಬಕ್ಕೆ ನೀಡಲಾಗುವುದು ಎಂದು ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದರು.
ಈಗಾಗಲೇ ಮೃತಪಟ್ಟ ಸೈನಿಕರಿಗೆ ಹಲವು ರೀತಿಯಲ್ಲಿ ಸಹಾಯ ಹಸ್ತವನ್ನು ಚಾಚಲು ಮುಂದೆ ಬಂದಿದ್ದಾರೆ.ಇನ್ನು ಸೈನಿಕರ ಕುಟುಂಬಗಳಿಗೆ ನೆರವಾಗಲು Bharat Ke Veer website ಮತ್ತು National Defence Fund ಮೂಲಕವೂ ನೀವು ಧನ ಸಹಾಯವನ್ನು ನೀಡಬಹುದು.