ಶ್ರೀನಗರ: ಕಳೆದ ಗುರುವಾರ ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿ ನಡೆಸಿದ ಜೈಶ್ ಭಯೋತ್ಪಾದಕ ಸಂಘಟನೆಯ ಮಾಸ್ಟರ್ ಮೈಂಡ್ ಉಗ್ರರನ್ನು ಭಾರತೀಯ ಸೇನೆ ಸೋಮವಾರ ಹೊಡೆದುರುಳಿಸಿದೆ.
ಬರೋಬ್ಬರಿ 40 ಸಿಆರ್ಪಿಎಫ್ ಯೋಧರ ಹತ್ಯೆಗೈದಿದ್ದ ದಾಳಿಯ ಮಾಸ್ಟರ್ ಮೈಂಡ್ ರಷೀದ್ ಘಾಜಿ ಹಾಗೂ ಕಮರನ್ ಎಂಬ ಇಬ್ಬರು ಉಗ್ರರನ್ನು ಇಂದು ಬೆಳಿಗ್ಗೆ ನಡೆಸಿದ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಎನ್ಕೌಂಟರ್ ಮಾಡಿದೆ ಎನ್ನಲಾಗಿದೆ.
ಜಮ್ಮು-ಕಾಶ್ಮೀರದ ಪಿಂಗ್ಲನ್ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆಂಬ ಖಚಿತ ಮಾಹಿತಿ ಆಧರಿಸಿ ಭದ್ರತಾ ಪಡೆ ಮಧ್ಯರಾತ್ರಿಯಿಂದ ಶೋಧ ಕಾರ್ಯ ನಡೆಸಿತ್ತು. ಉಗ್ರರು ಕಟ್ಟಡದೊಳಗೆ ಇದ್ದರೆಂಬ ಮಾಹಿತಿ ಪಡೆದ ಸೇನೆ, ಇಡೀ ಕಟ್ಟಡವನ್ನೇ ಬ್ಲಾಸ್ಟ್ ಮಾಡಿದೆ. ಸದ್ಯ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಲಾಗಿರುವ ಉಗ್ರರ ಮೃತದೇಹವನ್ನ ಸೇನೆ ವಶಕ್ಕೆ ಪಡೆದುಕೊಂಡಿದೆ. ಸತ್ತಿರುವ ಉಗ್ರರ ಗುರುತು ಪತ್ತೆ ಹಚ್ಚಿದ ಬಳಿಕ ಸೇನೆ ಸ್ಪಷ್ಟ ಮಾಹಿತಿ ನೀಡಲಿದೆ.
#UPDATE on Pinglana, Pulwama encounter: One AK-47 & one pistol recovered. Identification of bodies of the two terrorists killed during encounter, yet to be confirmed. Search operation continues. #JammuAndKashmir pic.twitter.com/CGYfIctxNL
— ANI (@ANI) February 18, 2019
ಸದ್ಯ ಕಾರ್ಯಾಚರಣೆ ಪ್ರಗತಿಯನ್ನು ಈ ಸ್ಥಳದಲ್ಲಿ ಸುತ್ತಮುತ್ತ ಕರ್ಫ್ಯೂ ಜಾರಿ ಮಾಡಲಾಗಿದೆ. ಇಂದು ಉಗ್ರರು ಮತ್ತು ಭಾರತೀಯ ಸೇನೆ ನಡುವೆ ನಡೆದ ಈ ಗುಂಡಿನ ಚಕಮಕಿಯಲ್ಲಿ ಭಾರತ ಸೇನೆಯ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಅಲ್ಲದೆ, ಜೈಶ್ ಉಗ್ರ ಸಂಘಟನೆಯ ಇಬ್ಬರು ಕಮಾಂಡರ್ಗಳು ಹತ್ಯೆಯಾಗಿದ್ದಾರೆ.
#WATCH Police in #Pulwama appeals to locals to leave the site of Pulwama encounter. Four 55 Rashtriya Rifles personnel have lost their lives & one injured and two terrorists neutralised in the ongoing operation. (Visuals deferred by unspecified time) #JammuAndKashmir pic.twitter.com/q2X13OitXX
— ANI (@ANI) February 18, 2019