Sachin Tendulkar: ಸಚಿನ್ ತೆಂಡೂಲ್ಕರ್ ಪ್ರತಿ ನಿಮಿಷಕ್ಕೆ ಎಷ್ಟು ಹಣ ಗಳಿಸುತ್ತಾರೆ ಗೊತ್ತಾ?

Sachin Tendulkar Income: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದೇಶದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರು. 2013 ರಲ್ಲಿ ನಿವೃತ್ತರಾದರು. ಆದರೂ ದೇಶದಲ್ಲಿ ಹೆಚ್ಚು ಗಳಿಸುವ ಆಟಗಾರರಲ್ಲಿ ಸಚಿನ್‌ ಇಂದಿಗೂ ಒಬ್ಬರಾಗಿದ್ದಾರೆ. 48 ವರ್ಷ ವಯಸ್ಸಿನ ಭಾರತೀಯ ಲೆಜೆಂಡರಿ ಕ್ರಿಕೆಟಿಗ ಅನೇಕ ಬ್ರ್ಯಾಂಡ್‌ಗಳ ಅಂಬಾಸಿಡರ್‌ ಆಗಿದ್ದಾರೆ. 

Written by - Chetana Devarmani | Last Updated : Apr 25, 2023, 02:23 PM IST
  • ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್
  • ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರು
  • ಪ್ರತಿ ನಿಮಿಷಕ್ಕೆ ಎಷ್ಟು ಹಣ ಗಳಿಸುತ್ತಾರೆ ಗೊತ್ತಾ?
Sachin Tendulkar: ಸಚಿನ್ ತೆಂಡೂಲ್ಕರ್ ಪ್ರತಿ ನಿಮಿಷಕ್ಕೆ ಎಷ್ಟು ಹಣ ಗಳಿಸುತ್ತಾರೆ ಗೊತ್ತಾ? title=
Sachin Tendulkar

Sachin Tendulkar Income: ತೆಂಡೂಲ್ಕರ್ ಅವರ ನಿವ್ವಳ ಮೌಲ್ಯವು ಪ್ರಸ್ತುತ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗಿಂತ ಹೆಚ್ಚಾಗಿದೆ. Instagram ನಲ್ಲಿ 120 ದಶಲಕ್ಷಕ್ಕೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ಸಚಿನ್‌, ಸೋಷಿಯಲ್‌ ಮೀಡಿಯಾದಿಂದಲೂ ಹಣ ಗಳಿಸುತ್ತಾರೆ. ಹಲವಾರು ಬ್ರಾಂಡ್‌ಗಳೊಂದಿಗೆ ಟೈ ಅಪ್‌ ಆಗಿದ್ದಾರೆ, ಅಲ್ಲದೇ ತಮ್ಮದೇ ಆದ ಫ್ಯಾಶನ್ ಬ್ರ್ಯಾಂಡ್ Wrogn ಹೊಂದಿದ್ದಾರೆ. 

ಕ್ರಿಕೆಟ್ ಮಾತ್ರವಲ್ಲ ಆದಾಯದಲ್ಲೂ ಸಚಿನ್​ ಅನೇಕ ದಾಖಲೆ ಬರೆದಿದ್ದಾರೆ. ಸಚಿನ್ ತೆಂಡೂಲ್ಕರ್  ಕ್ರಿಕೆಟ್‌ನಿಂದ ನಿವೃತ್ತರಾಗಿ 10 ವರ್ಷಗಳ ನಂತರವೂ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗರಲ್ಲಿ ಒಬ್ಬರು. ತೆಂಡೂಲ್ಕರ್ ಅವರ ನಿವ್ವಳ ಮೌಲ್ಯ 1,350 ಕೋಟಿ ರೂಪಾಯಿ. ಸಚಿನ್​ ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರು ಎಂಬುದು ಗಮನಾರ್ಹವಾಗಿದೆ. 

2019 ರಲ್ಲಿ ಸಚಿನ್ ತೆಂಡೂಲ್ಕರ್ ಅವರ ಬ್ರ್ಯಾಂಡ್ ಮೌಲ್ಯವು ಸುಮಾರು 15.8 ಪ್ರತಿಶತದಷ್ಟು ಹೆಚ್ಚಾಗಿತ್ತು. ಈ ಮೂಲಕ 2019 ರ ಡಫ್ ಮತ್ತು ಫೆಲ್ಪ್ಸ್ ಪಟ್ಟಿಯಲ್ಲಿ ಸೇರ್ಪಡೆಗೊಂಡ ಏಕೈಕ ನಿವೃತ್ತ ಸೆಲೆಬ್ರಿಟಿ ಸಚಿನ್‌ ಆಗಿದ್ದರು. 2020 ರಲ್ಲಿ ಅವರ ನಿವ್ವಳ ಮೌಲ್ಯ 834 ಕೋಟಿ ರೂಪಾಯಿ. ಇದು 2021ರಲ್ಲಿ 1,080 ಕೋಟಿಗೆ ಏರಿತು. ಈಗ 1,350 ಕೋಟಿ ರೂ.ಗೆ ತಲುಪಿರುವುದು ದಾಖಲೆಯಾಗಿದೆ. 

ಇದನ್ನೂ ಓದಿ: ಕುಸ್ತಿ ಸಂಘದ ಚುನಾವಣೆ ಮೇಲೆ ನಿಷೇಧ, ಕುಸ್ತಿಪಟುಗಳ ಮುಷ್ಕರದ ಹಿನ್ನೆಲೆ ಮಹತ್ವದ ನಿರ್ಧಾರ ಕೈಗೊಂಡ ಕ್ರೀಡಾ ಇಲಾಖೆ

ಅಡಿಡಾಸ್, ಬಿಎಂಡಬ್ಲ್ಯು ಇಂಡಿಯಾ, ಕೋಕಾ ಕೋಲಾ, ಜಿಲೆಟ್, ತೋಷಿಬಾ ಸೇರಿದಂತೆ ಹಲವು ಜಾಹೀರಾತುಗಳನ್ನು ಸಚಿನ್‌ ತೆಂಡೂಲ್ಕರ್‌ ಮಾಡುತ್ತಾರೆ. ಈ ಕಂಪನಿಗಳ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿದ್ದಾರೆ. ಈ ಮೂಲಕವೇ ವಾರ್ಷಿಕ 20-22 ಕೋಟಿ ರೂಪಾಯಿ ಗಳಿಸುತ್ತಾರೆ. 2016 ರಲ್ಲಿ ಬಟ್ಟೆ ಉದ್ಯಮಕ್ಕೂ ಸಚಿನ್‌ ಕಾಲಿಟ್ಟರು. ಟ್ರೂ ಬ್ಲೂ ಬ್ರ್ಯಾಂಡ್‌ ಮೂಲಕ ಬಟ್ಟೆ ವ್ಯಾಪಾರ ಮಾಡುತ್ತಾರೆ. ಅರವಿಂದ್ ಫ್ಯಾಶನ್ ಬ್ರಾಂಡ್ಸ್ ಲಿಮಿಟೆಡ್‌ನ ಜಂಟಿ ಉದ್ಯಮವಾಗಿದೆ. 2019 ರಲ್ಲಿ ಟ್ರೂ ಬ್ಲೂ ಅನ್ನು ಯುಎಸ್ ಮತ್ತು ಇಂಗ್ಲೆಂಡ್‌ನಲ್ಲಿ ಕೂಡ ವಿಸ್ತರಿಸಲಾಯಿತು. 

ಇಷ್ಟೇ ಅಲ್ಲ ಆಹಾರ ಉದ್ಯಮದಲ್ಲೂ ಸಚಿನ್‌ ಭಾಗಿಯಾಗಿದ್ದಾರೆ. ಮುಂಬೈ ಮತ್ತು ಬೆಂಗಳೂರಿನಲ್ಲಿ ರೆಸ್ಟೋರೆಂಟ್‌ಗಳನ್ನು ಹೊಂದಿದ್ದಾರೆ. ಇದಲ್ಲದೇ SRT ಕಂಪನಿ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಸಹ ಹೊಂದಿದ್ದಾರೆ. ಸ್ಮಾರ್ಟ್ರಾನ್ ಇಂಡಿಯಾ, ಸ್ಪಿನ್ನಿ, ಎಸ್ ಡ್ರೈವ್ ಮತ್ತು ಸ್ಯಾಚ್‌ನಂತಹ ಕಂಪನಿಗಳಲ್ಲಿ ಮತ್ತು ಮನರಂಜನೆ ಮತ್ತು ತಂತ್ರಜ್ಞಾನ ಕಂಪನಿ ಜೆಟ್ಸಿಂಥೆಸಿಸ್‌ನಲ್ಲಿಯೂ ಸಚಿನ್‌ ತೆಂಡೂಲ್ಕರ್‌ ಹೂಡಿಕೆಯಿದೆ.  

ಇದನ್ನೂ ಓದಿ: WTC Finalಗೆ ಟೀಂ ಇಂಡಿಯಾ ಘೋಷಣೆಯಾಗುತ್ತಿದ್ದಂತೆ ಅಂತ್ಯವಾಯ್ತು ಈ ಆಟಗಾರನ ಟೆಸ್ಟ್ ವೃತ್ತಿಜೀವನ!

ಸಚಿನ್ ತೆಂಡೂಲ್ಕರ್ ಬಾಂದ್ರಾದ ಐಷಾರಾಮಿ ಬಂಗಲೆಯ ಅಂದಾಜು ವೆಚ್ಚ 100 ಕೋಟಿ ರೂಪಾಯಿ. 2000 ರಲ್ಲಿ 39 ಕೋಟಿಗೆ ಸಚಿನ್‌ ಇದನ್ನು ಖರೀದಿ ಮಾಡಿದ್ದರು. ಭಾರತ ಮಾತ್ರವಲ್ಲ, ಇಂಗ್ಲೆಂಡ್‌ನ ಲಂಡನ್‌ನಲ್ಲಿ  ಸಚಿನ್ ತೆಂಡೂಲ್ಕರ್ ಸ್ವಂತ ಮನೆಯಿದೆ. ಅಷ್ಟೇ ಅಲ್ಲ ಐಷಾರಾಮಿ ಕಾರುಗಳನ್ನು ಇಷ್ಟಪಡುವ ಸಚಿನ್‌ 20 ಕೋಟಿಗೂ ಹೆಚ್ಚು ಮೌಲ್ಯದ 10 ಕಾರುಗಳ ಒಡೆಯರಾಗಿದ್ದಾರೆ. ಇಷ್ಟೊಂದು ರಿಚ್‌ ಆಗಿರುವ ಸಚಿನ್‌ ಪ್ರತಿ ನಿಮಿಷಕ್ಕೆ ಲಕ್ಷಾಂತರ ರೂಪಾಯಿ ಹಣ ದುಡಿಯುತ್ತಾರೆ. ಅಂದರೆ ಪ್ರತಿ ತಿಂಗಳು ಕೋಟಿಗಟ್ಟಲೆ ಹಣವನ್ನು ಸಚಿನ್‌ ಗಳಿಸುತ್ತಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News