ನವದೆಹಲಿ: ಜನಪ್ರಿಯ ಮೆಸೆಂಜರ್ ವಾಟ್ಸಪ್ ನ್ನು ರಾಜಕೀಯ ಪಕ್ಷಗಳು ಇನ್ಮುಂದೆ ದುರುಪಯೋಗಪಡಿಸಿಕೊಳ್ಳುವ ಹಾಗಿಲ್ಲ ಎಂದು ಎಚ್ಚರಿಕೆ ನೀಡಿದೆ.ಒಂದು ವೇಳೆ ಈ ದುರ್ಬಳಕೆ ಮಾಡಿಕೊಂಡಿದ್ದೆ, ಆದಲ್ಲಿ ಅಂತಹ ಖಾತೆಗಳನ್ನು ನಿಷೇಧ ಮಾಡುವ ಚಿಂತನೆಯನ್ನು ವಾಟ್ಸಪ್ ನಡೆಸಿದೆ.
ಈಗ ವಾಟ್ಸಪ್ ಕಮುನಿಕೆಶನ್ ಹೆಡ್ ಕಾರ್ಲ್ ವೂಗ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ " ನಾವು ಈಗಾಗಲೇ ಹಲವು ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ವಾಟ್ಸಪ್ ನ್ನು ದುರುಪಯೋಗ ಪಡಿಸಿಕೊಂಡಿರುವುದನ್ನು ನೋಡಿದ್ದೇವೆ ಒಂದು ಇದು ಮುಂದು ವರೆದಲ್ಲಿ ನಾವು ಅಂತಹ ಖಾತೆಗಳನ್ನು ಬ್ಯಾನ್ ಮಾಡಲಿದ್ದೇವೆ ಎಂದು ಅವರು ತಿಳಿಸಿದರು.
ಚುನಾವಣೆಯಲ್ಲಿ ಈ ಸೇವೆ ದುರುಪಯೋಗವಾಗುವುದನ್ನು ನೋಡಿದ್ದೇವೆ, ಆದ್ದರಿಂದ ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿದರು. ಮುಂದಿನ ಕೆಲವು ತಿಂಗಳಲ್ಲಿ ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳಿವೆ ಬೇರೆ ಅನ್ಯಮಾರ್ಗದ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ಪ್ರಭಾವ ಬೀರುವ ಪ್ರಯತ್ನ ಮಾಡಿದ್ದೆ ಆದಲ್ಲಿ ಅಂತಹ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಗಳ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ.