ಉತ್ತರ ಕನ್ನಡ: ಸ್ವಚ್ ಭಾರತ್ ಅಭಿಯಾನ ಎಂಬುವುದು ಇಂದು ಮೊನ್ನೆಯ ವಿಷಯವಲ್ಲ . ಗಾಂಧೀಜಿ ಕಾಲದಿಂದ ಮೋದಿಜಿವರೆಗೂ ಈ ಅಭಿಯಾನವನ್ನು ಆರಂಭಿಸಿದವರೇ ಹೆಚ್ಚು.! ಆದರೆ ಅದನ್ನು ಪಾಲಿಸುವವರ ಮಾತ್ರ ಬೆರಳೆಣಿಕೆ ಅಷ್ಟು.
ಆದರೆ ಇಲ್ಲೊಬ್ಬ ಮಹಿಳೆ ಬಸ್ ಸ್ಟ್ಯಾಂಡ್ ನಲ್ಲಿ ಪ್ರಯಾಣಿಕರು ಹಾಕಿದ ಕಸವನ್ನು ತಾನೇ ತೆಗೆದು ಪ್ರತಿನಿತ್ಯ ಕಸದ ಬುಟ್ಟಿಗೆ ಹಾಕುತ್ತಾರೆ. ಹಾಗಂದ ಮಾತ್ರಕ್ಕೆ ಈಕೆ ಪೌರ ಕಾರ್ಮಿಕ ಮಹಿಳೆಯಲ್ಲ.
ಇದನ್ನೂ ಓದಿ: ಹೊಗೆನಕಲ್ನಲ್ಲಿ ಹಗಲು ದರೋಡೆ: ₹750 ಬೋಟಿಂಗ್ ಗೆ ₹3500 ಶುಲ್ಕ- ಪ್ರವಾಸಿಗರ ಆಕ್ರೋಶ
ಹಣ್ಣಿನ ವ್ಯಾಪರ ಮಹಿಳೆ ಆದರೆ ತನ್ನ ಕಾರ್ಯದ ನಡುವೆಯೂ ಸ್ವಚ್ಛತೆ ಬಗ್ಗೆ ಗಮನ ಕೊಡುವುದು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ಸದ್ಯ ಈ ವಿಡೀಯೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಠಾಣೆಗೆ ಬಂದ ಮಹಿಳೆ ಮೈಕೈ ಮುಟ್ಟಿ PSI ಅನುಚಿತ ವರ್ತನೆ ಆರೋಪ: ಟ್ವಿಟರ್‌ನಲ್ಲಿ ಮಹಿಳೆ ದೂರು
ಹೌದು ಸ್ವಚ್ಛತೆ ನಡೆಯ ಬಗ್ಗೆ ಮಾದರಿಯಾಗಿರುವ ದೃಶ್ಯ ಅಂಕೋಲಾ ಬಸ್ ನಿಲ್ದಾಣದಲ್ಲಿ ಕಂಡು ಬಂದಿದೆ. ಈಕೆ ಮೂಲತಃ ಹಣ್ಣಿನ ವ್ಯಾಪಾರಿ ಮಹಿಳೆ. ಪ್ರಚಾರಕ್ಕಾಗಿ ಪೊರ್ಕೆ ಹಿಡಿಯುವ ರಾಜಕೀಯ ನಾಯಕರು, ಕಸದ ಬುಟ್ಟಿ ಸಮೀಪವೇ ಇದ್ದರೂ ಕ್ಯಾರೆ ಎನ್ನದೆ ಅಲ್ಲಲ್ಲಿ ಬಿಸಾಕುವ ಯುವಕರು, ಕಸ ತೆಗೆಯುವ ವರ್ಗವೇ ಬೇರೆ ಇದೆ ಎಂಬ ಮನಸ್ಥಿತಿ ಉಳ್ಳವರು, ಹೀಗೆ ಹಲವರು ಸ್ವಚ್ಛತೆ ಬಗ್ಗೆ ನಿರ್ಲಕ್ಷ ವಹಿಸುವವರ ಮಧ್ಯೆ ಈ ಮಹಿಳೆ ಎಲ್ಲರಿಗೂ ಮಾದರಿಯಾಗಿದ್ದಾರೆ.
ಸ್ವಚ್ಛತೆ ಬಗ್ಗೆ ಪ್ರತಿಯೊಬ್ಬರು ಗಮನ ಕೊಟ್ಟರೇ ಬಹುಷಃ ಸ್ವಚ್ಛ ದೇಶಗಳ ಪಟ್ಟಿಯಲ್ಲಿ ಭಾರತವೂ ಬರಬಹದು. ಈ ವಿಡೀಯೊವನ್ನು ಹಂಚಿಕೊಂಡಿರುವ ಆನಂದ ಮಹಿಂದ್ರ ದೃಶ್ಯದ ಮಹಿಯೆಗೆ ಶ್ಲಾಘಿಸಿದ್ದಾರೆ.
These are the real, quiet heroes making Bharat Swachh. I really would like her to know that her efforts have not gone unnoticed & are appreciated. How do you suggest we can do that? @adarshahgd can you find someone who lives in that area & can contact her? https://t.co/2SzlTE9LZy
— anand mahindra (@anandmahindra) April 11, 2023
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.