ನವದೆಹಲಿ: ಇತ್ತೀಚೆಗೆ ನೂತನ ಸಿಬಿಐ ನಿರ್ದೇಶಕರಾಗಿ ನೇಮಕಗೊಂಡಿದ್ದ 1983-ಬ್ಯಾಚ್ ಐಪಿಎಸ್ ಅಧಿಕಾರಿ ರಿಷಿ ಕುಮಾರ್ ಶುಕ್ಲಾ ಸೋಮವಾರದಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಇಂದು ಕೇಂದ್ರ ತನಿಖಾ ಸಂಸ್ಥೆಯ ಮುಖ್ಯಸ್ಥರಾಗಿ ಬೆಳಗ್ಗೆ 10 ಗಂಟೆ ಸಿಬಿಐ ಕಚೇರಿಗೆ ಆಗಮಿಸಿ ಅಧಿಕಾರ ಸ್ವೀಕರಿಸಿದರು.ಇದಕ್ಕೂ ಮೊದಲು ಅವರು ಆಫೀಸ್ ಗೆ ಅಧಿಕೃತ ವಾಹನ ಸಿಯಾಜ್ ಕಾರಿನಲ್ಲಿ ಆಗಮಿಸಿದರು.ಮಾಜಿ ಮಧ್ಯಪ್ರದೇಶದ ಪೋಲಿಸ್ ಮುಖ್ಯಸ್ಥರಾಗಿದ್ದ ಶುಕ್ಲಾ ಅವರನ್ನು ಶನಿವಾರದಂದು ಸಿಬಿಐ ನಿರ್ದೇಶಕರನ್ನಾಗಿ ನೇಮಕ ಮಾಡಿತ್ತು.
Delhi: Rishi Kumar Shukla takes charge as the Director of Central Bureau of Investigation (CBI). pic.twitter.com/9cM1gQK2kE
— ANI (@ANI) February 4, 2019
ಅಲೋಕ್ ಕುಮಾರ ಅವರನ್ನು ಪದಚ್ಯುತಿಗೊಳಿಸಿದ ನಂತರ ರಿಷಿ ಕುಮಾರ್ ಶುಕ್ಲಾ ಅವರನ್ನು ನೇಮಕ ಮಾಡಿತ್ತು.ಈ ಹುದ್ದೆಗೆ ಜಾವೀದ್ ಅಹ್ಮದ್ ,ರಜನಿ ಕಾಂತ್ ಮಿಶ್ರಾ ಎಸ್,ಎಸ್ ದೆಸ್ವಾಲ್ ಅವರು ಕೂಡ ಸ್ಪರ್ಧಿಗಳಾಗಿದ್ದರು.