ನವದೆಹಲಿ: ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ನ್ನು ವ್ಯಂಗವಾಡಿರುವ ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ ಈ ಮಧ್ಯಂತರ ಬಜೆಟ್ ನ ಭರವಸೆಗಳೆಲ್ಲ ಚುನಾವಣೆಗೂ ಮುನ್ನ ಜನರನ್ನು ಮೂರ್ಖರನ್ನಾಗಿ ಮಾಡುವಂತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Budget 2019-20: It is a testimony to the BJP’s fear and desperation about what that verdict of the people might be that it has sought to use what is an interim budget to make promises that are not for it to make. https://t.co/IUgMxJpcBi
— Sitaram Yechury (@SitaramYechury) February 1, 2019
The acting Finance Minister made tall claims during his speech about the record of the Modi government and promises of a rosy future for all Indians – which was a cruel joke played on the suffering people of our country. https://t.co/tw3kLDVGKq
— Sitaram Yechury (@SitaramYechury) February 1, 2019
ಮಧ್ಯಂತರ ಬಜೆಟ್ ಕುರಿತಾಗಿ ಸರಣಿ ಟ್ವೀಟ್ ಮಾಡಿರುವ ಸೀತಾರಾಮ್ ಯೆಚೂರಿ " ಜನರ ತೀರ್ಪು ಏನಾಗಬಹುದು ಎನ್ನುವ ಭಯ ಮತ್ತು ಹತಾಶೆ ಬಿಜೆಪಿಗೆ ಇರುವುದರಿಂದ ಅದು ಈಡೇರಿಸಲು ಅಸಾಧ್ಯವಾದ ಎಲ್ಲ ಭರವಸೆಗಳನ್ನು ಮಧ್ಯಂತರ ಬಜೆಟ್ ಮೂಲಕ ಮಾಡಿದೆ" ಎಂದು ಟ್ವೀಟ್ ಮಾಡಿದ್ದಾರೆ.
Promises made today are not worth the paper they are written on. Modi govt came to power in 2014 promising 10 crore new jobs, 100 new smart cities, doubling of farmers income & 15 lakh in each bank account. This is another attempt to fool people before Polls but it won’t succeed.
— Sitaram Yechury (@SitaramYechury) February 1, 2019
ಇನ್ನು ಮುಂದುವರೆದು "ಹಂಗಾಮಿ ಹಣಕಾಸು ಸಚಿವರು ತಮ್ಮ ಭಾಷಣದಲ್ಲಿ ಮೋದಿ ಸರ್ಕಾರದ ದಾಖಲೆಗಳ ಕುರಿತಾಗಿ ಮತ್ತು ಎಲ್ಲ ಭಾರತೀಯರಿಗೆ ಉತ್ತಮ ಭವಿಷ್ಯಕ್ಕಾಗಿ ನೀಡಿರುವ ಎಲ್ಲ ಭರವಸೆಗಳು ಸಂಕಷ್ಟದಲ್ಲಿರುವ ದೇಶದ ಜನರ ಮೇಲೆ ಮಾಡಿರುವ ಜೋಕ್ ಗಳು ಎಂದು ಅವರು ವ್ಯಂಗವಾಡಿದ್ದಾರೆ.