ಕಿವೀಸ್ ದಾಳಿಗೆ ತತ್ತರಿಸಿದ ಭಾರತಕ್ಕೆ ಹೀನಾಯ ಸೋಲು

ಭಾರತ ತಂಡವು ನಾಲ್ಕನೇ ಎಕದಿನ ಪಂದ್ಯದಲ್ಲಿ 92 ರನ್ ಗಳಿಗೆ ಆಲೌಟ್ ಆಗುವುದರ ಮೂಲಕ ಭಾರತ ತಂಡವು ಹೀನಾಯ ಸೋಲನ್ನು ಕಂಡಿದೆ. 

Last Updated : Jan 31, 2019, 03:24 PM IST
 ಕಿವೀಸ್ ದಾಳಿಗೆ ತತ್ತರಿಸಿದ ಭಾರತಕ್ಕೆ ಹೀನಾಯ ಸೋಲು  title=

ನವದೆಹಲಿ: ಭಾರತ ತಂಡವು ನಾಲ್ಕನೇ ಎಕದಿನ ಪಂದ್ಯದಲ್ಲಿ 92 ರನ್ ಗಳಿಗೆ ಆಲೌಟ್ ಆಗುವುದರ ಮೂಲಕ ಭಾರತ ತಂಡವು ಹೀನಾಯ ಸೋಲನ್ನು ಕಂಡಿದೆ. 

ಹ್ಯಾಮಿಲ್ಟನ್ ನಲ್ಲಿನ ಸೇಡ್ದಾನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಭಾರತ ತಂಡವು ನ್ಯೂಜಿಲೆಂಡ್ ದಾಳಿಗೆ ತತ್ತರಿಸಿ ಹೋಯಿತು.ಕೀವಿಸ್ ತಂಡದ ಪರ ಬೌಲ್ಟ್ ಭಾರತದ ಐದು ವಿಕೆಟ್ ಗಳನ್ನು ಕಬಳಿಸುವ ಮೂಲಕ ಮಾರಕವಾಗಿ ಪರಿಣಮಿಸಿದರು.ಅಚ್ಚರಿಯೆಂದರೆ ಭಾರತದ ಪರ ಚಹಾಲ್ 18 ರನ್ನ ಗಳಿಸಿದ್ದೆ ಅಧಿಕ ಮೊತ್ತವಾಗಿತ್ತು.

92 ರನ್ ಗಳ ಗುರಿಯನ್ನು ಬೆನ್ನತ್ತಿದ ನ್ಯೂಜಿಲೆಂಡ್ ತಂಡವು ಎರಡು ವಿಕೆಟ್ ನಷ್ಟಕ್ಕೆ 14.4 ಓವರ್ ಗಳಲ್ಲಿ ಗೆಲುವನ್ನು ಸಾಧಿಸಿತು.ನ್ಯೂಜಿಲೆಂಡ್ ತಂಡದ ಪರ ಹೆನ್ರಿ ನಿಕೊಲಸ್ 30, ರಾಸ್ ಟೇಲರ್ 37 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು. 

ಈಗಾಗಲೇ ಸರಣಿಯನ್ನು ವಶಪಡಿಸಿಕೊಂಡಿರುವ ಭಾರತ ತಂಡವು ನಾಲ್ಕನೇ ಪಂದ್ಯದಲ್ಲಿ ಹೀನಾಯ ಸೋಲನ್ನು ಕಂಡಿದೆ.92 ರನ್ ಗಳಿಗೆ ಆಲೌಟ್ ಆಗಿರುವುದು ಭಾರತದ ಏಳನೆಯ ಅತಿ ಕನಿಷ್ಠ ಮೊತ್ತವಾಗಿದೆ.ಭಾರತ 2000 ಇಸ್ವಿಯಲ್ಲಿ ಶ್ರೀಲಂಕಾ ತಂಡದ ವಿರುದ್ದ ಗಳಿಸಿರುವ 54 ರನ್ ಇದುವರೆಗಿನ ಭಾರತದ ಅತಿ ಕನಿಷ್ಠ ಮೊತ್ತವಾಗಿದೆ.

 

Trending News