ಅಯೋಧ್ಯೆ ವಿವಾದ: ಹೆಚ್ಚುವರಿ ಭೂಮಿಯನ್ನು ಹಿಂದಿರುಗಿಸಲು ಅನುಮತಿ ಕೋರಿ ಸುಪ್ರೀಂಗೆ ಕೇಂದ್ರದ ಅರ್ಜಿ

ರಾಮಜನ್ಮಭೂಮಿ -ಬಾಬ್ರಿ ಮಸೀದಿ ಭೂಮಿಯಲ್ಲಿ ಈ ಹಿಂದೆ ಸರ್ಕಾರವು ವಶಪಡಿಸಿಕೊಂಡಿದ್ದ ಭೂಮಿಯನ್ನು ಮೂಲ ಮಾಲಕರಿಗೆ ಹಿಂದಿರುಗಿಸಲು ಅನುಮತಿ ಕೋರಿ ಕೇಂದ್ರ ಸರ್ಕಾರ ಈಗ ಸುಪ್ರೀಮ್ ಮೊರೆ ಹೋಗಿದೆ.

Last Updated : Jan 29, 2019, 02:04 PM IST
ಅಯೋಧ್ಯೆ ವಿವಾದ: ಹೆಚ್ಚುವರಿ ಭೂಮಿಯನ್ನು ಹಿಂದಿರುಗಿಸಲು ಅನುಮತಿ ಕೋರಿ ಸುಪ್ರೀಂಗೆ ಕೇಂದ್ರದ ಅರ್ಜಿ title=

ನವದೆಹಲಿ: ರಾಮಜನ್ಮಭೂಮಿ -ಬಾಬ್ರಿ ಮಸೀದಿ ಭೂಮಿಯಲ್ಲಿ ಈ ಹಿಂದೆ ಸರ್ಕಾರವು ವಶಪಡಿಸಿಕೊಂಡಿದ್ದ ಭೂಮಿಯನ್ನು ಮೂಲ ಮಾಲಕರಿಗೆ ಹಿಂದಿರುಗಿಸಲು ಅನುಮತಿ ಕೋರಿ ಕೇಂದ್ರ ಸರ್ಕಾರ ಈಗ ಸುಪ್ರೀಮ್ ಮೊರೆ ಹೋಗಿದೆ.

ಈ ಹಿಂದೆ ಸರ್ಕಾರವು ಬಾಬ್ರಿ ಮಸೀದಿ ಧ್ವಂಸವಾದ ನಂತರ 67 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು, ಅದರಲ್ಲಿ ಕೇವಲ 2.7 ಎಕರೆ ಭೂಮಿ ಮಾತ್ರ ವಿವಾದದಲ್ಲಿದೆ. ಆದ್ದರಿಂದ ಉಳಿದ ಭೂಮಿಯನ್ನು ಮೂಲ ಮಾಲಕರಿಗೆ ಹಿಂದುರಿಗಿಸಬೇಕೆಂದು ಕೇಂದ್ರ ಸರ್ಕಾರ ಕೋರ್ಟ್ ಗೆ ಮನವಿ ಮಾಡಿಕೊಂಡಿದೆ.

ಈ ಹಿಂದೆ ಸುಪ್ರೀಂಕೋರ್ಟ್ ಸ್ವಾಧೀನ ಪಡಿಸಿಕೊಂಡಿರುವ 67 ಎಕರೆ ಭೂಮಿ ವಿಚಾರದಲ್ಲಿ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿತ್ತು. 2010ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಈಗ ಸುಪ್ರೀಂ ನಲ್ಲಿ ಒತ್ತು 14 ಅರ್ಜಿಗಳು ಸಲ್ಲಿಕೆಯಾಗಿವೆ. ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಇನ್ನು ಅಂತಿಮ ತೀರ್ಪು ನೀಡಬೇಕಾಗಿದೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವು ಮೊದಲು ರಾಮಮಂದಿರವನ್ನು ನಿರ್ಮಿಸುವುದಾಗಿ ಹೇಳಿತ್ತು, ಆದರೆ ಮಂದಿರ ನಿರ್ಮಾಣದಲ್ಲಿ ವಿಳಂಭವಾಗುತ್ತಿರುವ ಕಾರಣದಿಂದಾಗಿ ಜನರ ಕೆಂಗಣ್ಣಿಗೆ ಗುರಿಯಾಗಿದೆ.ಈ ಹಿನ್ನಲೆಯಲ್ಲಿ ಈಗ ಕೇಂದ್ರ ಸರ್ಕಾರದ ಮೇಲೆ ರಾಮ ಮಂದಿರ ನಿರ್ಮಾಣ ಒತ್ತಡ ದಿನೇ ದಿನೇ ಅಧಿಕಗೊಳ್ಳುತ್ತಿದೆ.

Trending News