ಮಹಾನ್ ಚೇತನದೊಂದಿಗಿನ ಕಾಲಘಟ್ಟದಲ್ಲಿ ನಾವು‌ ಸಮಯ ಸವೆಸಿದ್ದೆ ನಮ್ಮ ಪುಣ್ಯ- ಎಸ್.ಎಂ. ಕೃಷ್ಣ

ಸರ್ವಜನಾಂಗದ ಹೇಳಿಗೆಗೆ ಅಹರ್ನಿಶಿ ದುಡಿದ ಮಹಾನ್ ಚೇತನ, ಬಸವಣ್ಣ ನವರ‌‌ ಆದರ್ಶಗಳನ್ನು ‌ಜಗತ್ತಿಗೆ ಪಸರಿಸಿ ಚಿರನಿದ್ರೆಗೆ ಜಾರಿದೆ.  

Last Updated : Jan 22, 2019, 07:39 AM IST
ಮಹಾನ್ ಚೇತನದೊಂದಿಗಿನ ಕಾಲಘಟ್ಟದಲ್ಲಿ ನಾವು‌ ಸಮಯ ಸವೆಸಿದ್ದೆ ನಮ್ಮ ಪುಣ್ಯ- ಎಸ್.ಎಂ. ಕೃಷ್ಣ title=

ಬೆಂಗಳೂರು: ಶ್ರೀ ಸಾಮಾನ್ಯರ ಪಾಲಿನ ದಾರಿ ದೀಪ, ಜಗತ್ತಿನ ಶ್ರೇಷ್ಠ ಸಂತ, ತ್ರಿವಿಧ ದಾಸೋಹಿ, ನಮ್ಮೆಲ್ಲರ ಆದರ್ಶಿನೀಯ ಜಗದ್ಗುರು ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ!!ಶಿವಕುಮಾರ ಮಹಾಸ್ವಾಮಿಗಳ ಶಿವ್ಯೆಕ್ಯರಾದ ಸುದ್ದಿ ತಿಳಿದು ಆಘಾತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಹೇಳಿದ್ದಾರೆ.

ಕಳೆದ 80 ವರ್ಷಗಳ ಕಾಲ ಸಿದ್ದಗಂಗೆ ಕ್ಷೇತ್ರವನ್ನು ಕೇಂದ್ರವಾಗಿಸಿಕೊಂಡು ಲಕ್ಷಾಂತರ ಭಕ್ತರ ಆರಾಧ್ಯದೈವಾಗಿ ಬಡ ಮಕ್ಕಳ‌ ಆಶ್ರಯದಾತರಾಗಿ ವಿದ್ಯಾದಾನ, ಅನ್ನಧಾನ, ಜ್ಞಾನದಾನದ ಮೂಲಕ ವಿಶ್ವಕ್ಕೆ ಮಾದರಿಯಾಗಿ ಬದುಕಿ ನಮ್ಮ ಅಗಲಿದ ಶ್ರೀ ಗಳ ಅಸಂಖ್ಯಾತ ‌ಭಕ್ತರ ದುಃಖದಲ್ಲಿ ನಾನು ‌ಕೂಡ ಭಾಗಿ ಎಂದಿದ್ದಾರೆ.

ಕಳೆದ ತಿಂಗಳು ಚೆನ್ನೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಅವರನ್ನು ಕಂಡು ಆರೋಗ್ಯ ‌ವಿಚಾರಿಸಿ ಆಶೀರ್ವಾದ ‌ಪಡೆದಿದ್ದೆ. ಶ್ರೀ ಗಳೊಂದಿಗೆ ನಿಕಟ ಭಾಂದವ್ಯ ಹೊಂದಿದ ನನಗೆ ಅವರ ಅಗಲಿಕೆ ಅಪಾರ ‌ನೋವನ್ನುಂಟು ಮಾಡಿದೆ.

ಸರ್ವಜನಾಂಗದ ಹೇಳಿಗೆಗೆ ಅಹರ್ನಿಶಿ ದುಡಿದ ಮಹಾನ್ ಚೇತನ, ಬಸವಣ್ಣ ನವರ‌‌ ಆದರ್ಶಗಳನ್ನು ‌ಜಗತ್ತಿಗೆ ಪಸರಿಸಿ ಚಿರನಿದ್ರೆಗೆ ಜಾರಿದೆ. ಶ್ರೀ ಗಳ ಬದುಕು ತೆರೆದ ಪುಸ್ತಕ ಜಾತಿ ಮತ ಬೆದ ಮಾಡದೆ ಸರ್ವರಲ್ಲು ಸಹಬಾಳ್ವೆ ಮೂಡಿಸಿ‌ ಶಾಂತಿ ಸಹಬಾಳ್ವೆ ಯನ್ನು ಬೋಧಿಸಿದ ಮಹಾನ್ ಸಂತ ಪೂಜ್ಯ ಸ್ವಾಮೀಜಿಗಳು.

ಇಂತಹ ಮಹಾನ್ ಚೇತನದೊಂದಿಗಿನ ಕಾಲಘಟ್ಟದಲ್ಲಿ ನಾವು‌ ಸಮಯ ಸವೆಸಿದ್ದೆ ನಮ್ಮ ಪುಣ್ಯ, ಶ್ರೀ ಗಳ‌ ಸೇವೆಯನ್ನು ಪರಿಗಣಿಸಿ ಭಕ್ತ ವೃಂದದ ಒತ್ತಾಸೆಯಾಗಿ ಪೂಜ್ಯರಿಗೆ ಭಾರತರತ್ನ ಪ್ರಶಸ್ತಿ ಕರುಣಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದೆ ಎಂದು ಎಸ್.ಎಂ. ಕೃಷ್ಣ ಹೇಳಿದರು.

ತನ್ನ ಸೇವೆಯ ಮೂಲಕ ಶ್ಯೆಕ್ಷಣಿಕ, ಆಧ್ಯಾತ್ಮಿಕ ಹಾಗೂ ಸಮಾಜಿಕ ಕ್ಷೇತ್ರದಲ್ಲಿ ಕ್ರಾಂತಿ‌ ಎಬ್ಬಿಸಿದ ಶ್ರೀ ಗಳ‌ ಅಗಲಿಕೆಯ ನೋವನ್ನು ಭರಿಸಲು ಅವರ ಅಸಂಖ್ಯಾತ ಭಕ್ತರಿಗೆ ಕರಿಣಿಸುವಂತೆ ಭಗವಂತನಲ್ಲಿ ‌ಪ್ರಾರ್ಥಿಸುತ್ತೇನೆ, ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ!! ಶಿವಕುಮಾರ ಮಹಾಸ್ವಾಮಿಗಳ ಆತ್ಮಕ್ಕೆ ‌ಶಾಂತಿ ಕೋರಿದ್ದಾರೆ.
 

Trending News