ಬೆಂಗಳೂರು : ಹಿಂದೂ ಹೊಸ ವರ್ಷ ವಿಕ್ರಮ್ ಸಂವತ್ 2080 ಮಾರ್ಚ್ 22 ರಿಂದ ಪ್ರಾರಂಭವಾಗುತ್ತದೆ. ಹೊಸ ವರ್ಷದ ರಾಜ ಬುಧ ಮತ್ತು ಮಂತ್ರಿ ಶುಕ್ರ. 30 ವರ್ಷಗಳ ನಂತರ, ಹಿಂದೂ ಹೊಸ ವರ್ಷದ ಆರಂಭದಲ್ಲಿ ಅತ್ಯಂತ ಮಂಗಳಕರ ಮತ್ತು ಅಪರೂಪದ ಯೋಗ ರೂಪುಗೊಳ್ಳುತ್ತಿದೆ. ಇದು ಮೂರು ರಾಶಿಯವರ ಭವಿಷ್ಯವನ್ನು ಬೆಳಗಲಿದೆ. ಹೊಸ ವರ್ಷ ಅಂದರೆ ಯುಗಾದಿ ದಿನದಿಂದ ಈ ರಾಶಿಯವರ ಪ್ರಗತಿಯ ಹಾದಿ ತೆರೆದುಕೊಳ್ಳುವುದು. ಬಹುಕಾಲದಿಂದ ಈಡೇರದೆ ಉಳಿದಿರುವ ಆಸೆ ಆಕಾಂಕ್ಷೆಗಳೆಲ್ಲಾ ಈ ಬಾರಿ ಕೈಗೂಡುವುದು.
ಯುಗಾದಿಯೊಂದಿಗೆ ಬದಲಾಗುವುದು ಈ ರಾಶಿಯವರ ಅದೃಷ್ಟ :
ಹಿಂದೂ ಹೊಸ ವರ್ಷ ಅಂದರೆ ಯುಗಾದಿ ಬಹಳ ಮುಖ್ಯವಾದ ದಿನವಾಗಿದೆ. ಏಕೆಂದರೆ ಈ ದಿನದಂದು ಬ್ರಹ್ಮನು ವಿಶ್ವವನ್ನು ಸೃಷ್ಟಿಸಿದನಂತೆ. ಅಲ್ಲದೆ ಶ್ರೀರಾಮನ ಪಟ್ಟಾಭಿಷೇಕ ನಡೆದದ್ದು ಕೂಡಾ ಇದೇ ದಿನವಂತೆ. ಇದು ಚೈತ್ರ ನವರಾತ್ರಿಯ ಮೊದಲ ದಿನ ಕೂಡಾ ಹೌದು. ಈ ಮಹತ್ವದ ದಿನವು ಯಾವ ರಾಶಿಯವರ ಜೀವನದಲ್ಲಿ ಸಂತೋಷವನ್ನು ತರುತ್ತದೆ ನೋಡೋಣ.
ಇದನ್ನೂ ಓದಿ : Gold Luck: ಈ ರಾಶಿಯವರು ಚಿನ್ನ ಧರಿಸಿದರೆ ತುಂಬಿ ತುಳುಕುವುದು ಅದೃಷ್ಟ; ರಾತ್ರೋರಾತ್ರಿ ಶ್ರೀಮಂತಿಕೆ ಒಲಿದು ಬರುವುದು!
ವೃಷಭ ರಾಶಿ : ಈ ಹೊಸ ವರ್ಷವು ವೃಷಭ ರಾಶಿಯವರಿಗೆ ಶುಭಕರವಾಗಿರುತ್ತದೆ. ಉದ್ಯೋಗದಲ್ಲಿ ದೊಡ್ಡ ಸ್ಥಾನವನ್ನು ಪಡೆಯುವ ಅವಕಾಶವಿದೆ. ಆದಾಯದಲ್ಲಿ ಬಲವಾದ ಹೆಚ್ಚಳವಾಗುವುದು. ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ಇಲ್ಲಿಯವರೆಗೆ ನಿಂತು ಹೋಗಿದ್ದ ಕೆಲಸ ಈಗ ಪೂರ್ಣಗೊಳ್ಳಲಿವೆ.
ಸಿಂಹ ರಾಶಿ : ಈ ಹೊಸ ವರ್ಷವು ಸಿಂಹ ರಾಶಿಯವರ ವೃತ್ತಿ ಕ್ಷೇತ್ರದಲ್ಲಿ ಶುಭ ಫಲಿತಾಂಶಗಳನ್ನು ನೀಡಲಿದೆ. ನಿಮ್ಮ ಮನಸ್ಸಿನ ಇಚ್ಚೆಯಂತೆ ಕೆಲಸವನ್ನು ನೀವು ಪಡೆಯಬಹುದು. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ.
ತುಲಾ ರಾಶಿ: ಈ ಹಿಂದೂ ಹೊಸ ವರ್ಷವು ತುಲಾ ರಾಶಿಯವರಿಗೆ ಅನೇಕ ವಿಷಯಗಳಲ್ಲಿ ಮಂಗಳಕರವಾಗಿರಲಿದೆ. ನಿಮ್ಮ ಆಯ್ಕೆಯ ಕೆಲಸ ಪಡೆಯುವುದು ಈ ಬಾರಿ ಸಾಧ್ಯವಾಗುತ್ತದೆ. ದೊಡ್ಡ ಸ್ಥಾನ, ಗೌರವ ಮತ್ತು ಹಣವನ್ನು ಪಡೆಯುತ್ತೀರಿ. ಆರ್ಥಿಕಪರಿಸ್ಥಿತಿ ನಿರೀಕ್ಷೆಗೂ ಮೀರಿ ಉತ್ತಮವಾಗಿರಲಿದೆ.
ಇದನ್ನೂ ಓದಿ : Gold Purchase Vastu Tips: ಈ ದಿನ ಅಪ್ಪಿ ತಪ್ಪಿಯೂ ಚಿನ್ನ ಖರೀದಿಸಬೇಡಿ!
ಈ ರಾಶಿಯವರು ಜಾಗರೂಕರಾಗಿರಿ :
ಮತ್ತೊಂದೆಡೆ, ಈ ವರ್ಷ ಕುಂಭ ಮೀನ, ಕಟಕ, ಮಿಥುನ ಮತ್ತು ವೃಶ್ಚಿಕ ರಾಶಿಯವರಿಗೆ ಅಷ್ಟೇನೂ ಉತ್ತಮವಾಗಿರುವುದಿಲ್ಲ. ಈ ರಾಶಿಯವರ ಜಾತಕದಲ್ಲಿ ಶನಿ ಸಾಡೇಸಾತಿ, ಶನಿ ಧೈಯ್ಯಾ ನಡೆಯುತ್ತಿರುವುದರಿಂದ ಕೆಲವು ತೊಂದರೆಗಳು ಎದುರಾಗಬಹುದು.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.