Hair Fall : ಕೂದಲು ಉದುರುವುದಕ್ಕೆ ಬಳಸಿ ಈ ಹರ್ಬಲ್ ಎಣ್ಣೆ : ಬುಡ್ದಿದ ಗಟ್ಟಿಯಾಗುತ್ತವೆ!

Hair Care Tips : ಈ ಹರ್ಬಲ್ ಹೇರ್ ಆಯಿಲ್ ಅನ್ನು ಕೂದಲ ಆರೈಕೆಗೆ ತುಂಬಾ ಉಪಯುಕ್ತವಾಗಿದೆ, ಕೂದಲು ಉದುರುವಿಕೆಯನ್ನು ನಿಯಂತ್ರಿಸುವ ಮೂಲಕ ಕೂದಲನ್ನು ಸುಂದರವಾಗಿ, ದಟ್ಟವಾಗಿ ಮತ್ತು ಬಲವಾಗಿ ಮಾಡಲು ಸಹಾಯ ಮಾಡುತ್ತದೆ.

Written by - Channabasava A Kashinakunti | Last Updated : Mar 18, 2023, 06:08 PM IST
  • ಕೂದಲು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ
  • ಕೂದಲು ಉದುರುವುದು ಸಾಮಾನ್ಯ ಸಮಸ್ಯೆ
  • ಹೇರ್ ಆಯಿಲ್ ಕೂದಲ ಆರೈಕೆಗೆ ತುಂಬಾ ಉಪಯುಕ್ತವಾಗಿದೆ
Hair Fall : ಕೂದಲು ಉದುರುವುದಕ್ಕೆ ಬಳಸಿ ಈ ಹರ್ಬಲ್ ಎಣ್ಣೆ : ಬುಡ್ದಿದ ಗಟ್ಟಿಯಾಗುತ್ತವೆ! title=

How To Make Herbal Hair Oil : ಕೂದಲು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ಇಂದಿನ ಜೀವನಶೈಲಿ, ಆಹಾರ ಪದ್ಧತಿ ಮತ್ತು ಮಾಲಿನ್ಯದಿಂದಾಗಿ ಕೂದಲು ಉದುರುವುದು ಸಾಮಾನ್ಯ ಸಮಸ್ಯೆಯಾಗಿದೆ. ಇದರ ಜೊತೆಗೆ ಕೂದಲು ಸರಿಯಾಗಿ ಬೆಳೆಯದಿರುವುದು, ಸೀಳು ಕೂದಲು ಉಂಟಾಗುವುದು ಹೀಗೆ ಇನ್ನಿತರ ಸಮಸ್ಯೆಗಳು ಎದುರಾಗುತ್ತಿವೆ.

ಇದಕ್ಕಾಗಿ ಇಂದು ನಾವು ಹರ್ಬಲ್ ಹೇರ್ ಆಯಿಲ್ ಬಗ್ಗೆ ಮಾಹಿತಿ ತಂದಿದ್ದೇವೆ. ತೆಂಗಿನ ಎಣ್ಣೆ, ಕರಿಬೇವಿನ ಎಲೆಗಳು, ಮೆಂತ್ಯ ಬೀಜಗಳು, ಆಲಿವ್ ಬೀಜಗಳು ಮತ್ತು ದಾಸವಾಳದ ಹೂವುಗಳಿಂದ ತಯಾರಬಹುದಾದ ಈ ಹರ್ಬಲ್ ಹೇರ್ ಆಯಿಲ್ ಕೂದಲು ಉದುರುವಿಕೆಯ ಮೇಲೆ ಮಾಂತ್ರಿಕವಾಗಿ ಕೆಲಸ ಮಾಡುತ್ತದೆ. ಈ ಹರ್ಬಲ್ ಹೇರ್ ಆಯಿಲ್ ಅನ್ನು ಕೂದಲ ಆರೈಕೆಗೆ ತುಂಬಾ ಉಪಯುಕ್ತವಾಗಿದೆ, ಕೂದಲು ಉದುರುವಿಕೆಯನ್ನು ನಿಯಂತ್ರಿಸುವ ಮೂಲಕ ಕೂದಲನ್ನು ಸುಂದರವಾಗಿ, ದಟ್ಟವಾಗಿ ಮತ್ತು ಬಲವಾಗಿ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : Garlic Summer Benefits: ಬೇಸಿಗೆ ಕಾಲದ ಕಾಯಿಲೆಗಳಿಂದ ತಪ್ಪಿಸಿಕೊಳ್ಳಬೇಕೆ? ಬೆಳಗ್ಗೆ ಖಾಲಿ ಹೊಟ್ಟೆ ಬೆಳ್ಳುಳ್ಳಿ ತಿನ್ನಿ!

ಹರ್ಬಲ್ ಎಣ್ಣೆ ತಯಾರಿಸಲು ಅಗತ್ಯವಾದ ಪದಾರ್ಥಗಳು

- ಒಂದು ಕಬ್ಬಿಣದ ಬಾಣಲೆ
- ತೆಂಗಿನ ಎಣ್ಣೆ
- ಕರಿಬೇವಿನ ಎಲೆ
- ಮೆಂತೆ ಕಾಳು
- 1 ಟೀಚಮಚ ಆಲಿವ್ ಬೀಜಗಳು
- ದಾಸಿವಾಳ ಹೂ

ಹರ್ಬಲ್ ಹೇರ್ ಆಯಿಲ್ ಮಾಡುವುದು ಹೇಗೆ?

- ಹರ್ಬಲ್ ಹೇರ್ ಆಯಿಲ್ ಮಾಡಲು, ಮೊದಲನೆಯದಾಗಿ ಪ್ಯಾನ್ ತೆಗೆದುಕೊಳ್ಳಿ.
- ನಂತರ ನೀವು ಅದರಲ್ಲಿ ತೆಂಗಿನ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.
- ಇದರ ನಂತರ, ಬಿಸಿ ಎಣ್ಣೆಯಲ್ಲಿ ಕೆಲವು ಎಲೆಗಳನ್ನು ಹಾಕಿ ಮತ್ತು ಗ್ಯಾಸ್ ಆಫ್ ಮಾಡಿ.
- ನಂತರ ಅದಕ್ಕೆ ಮೆಂತ್ಯ ಕಾಳು ಮತ್ತು ಒಂದು ಚಿಕ್ಕ ಚಮಚ ಆಲಿವ್ ಬೀಜಗಳನ್ನು ಸೇರಿಸಿ.
- ಇದರ ನಂತರ ನೀವು ಅದರಲ್ಲಿ ಗುಲಾಬಿ ಹೂ ಹಾಕಿ ಮಿಕ್ಸ್ ಮಾಡಿ
- ನಂತರ ಅದನ್ನ ರಾತ್ರಿಯಿಡೀ ಹಾಗೆ ಬಿಡಿ.

ಹರ್ಬಲ್ ಎಣ್ಣೆಯಿಂದ ಮಸಾಜ್ ಮಾಡುವುದು ಹೇಗೆ?

- ಹರ್ಬಲ್ ಹೇರ್ ಆಯಿಲ್ ಅನ್ನು ಹಚ್ಚುವ ಮೊದಲು, ಎಣ್ಣೆಯನ್ನು ಬಟ್ಟಲಿನಲ್ಲಿ ಫಿಲ್ಟರ್ ಮಾಡಿ.
- ನಂತರ ನಿಮ್ಮ ಅಂಗೈಗೆ ಸ್ವಲ್ಪ ಎಣ್ಣೆಯನ್ನು ತೆಗೆದುಕೊಂಡು ಅದನ್ನು ನಿಮ್ಮ ಕೂದಲಿಗೆ ಹಚ್ಚಿ ಮಸಾಜ್ ಮಾಡಿ.
- ಇದರ ನಂತರ, ಕೂದಲಿನ ಮಧ್ಯದಲ್ಲಿ 3-4 ಬಾರಿ ಹನಿ ಎಣ್ಣೆ ಹಾಕಿ ಮಸಾಜ್ ಮಾಡಿ.
- ನಂತರ ನಿಮ್ಮ ನೆತ್ತಿಯ ಹಿಂಭಾಗದಿಂದ ಕೆಳಗಿನಿಂದ ಮೇಲಕ್ಕೆ ಮಸಾಜ್ ಮಾಡಿ.
- ಇದರ ನಂತರ, ನಿಮ್ಮ ಎರಡೂ ಹೆಬ್ಬೆರಳುಗಳಿಂದ ಕಿವಿಗಳನ್ನು ಮುಚ್ಚಿ.
- ನಂತರ ವೃತ್ತಾಕಾರದ ಚಲನೆಯಲ್ಲಿ ನಿಮ್ಮ ಬೆರಳುಗಳಿಂದ ಮಸಾಜ್ ಮಾಡಿ.

ಇದನ್ನೂ ಓದಿ : Eating raw Onion : ಪ್ರತಿದಿನ ಹಸಿ ಈರುಳ್ಳಿ ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆಯೇ ಗೊತ್ತಾ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News