ನವದೆಹಲಿ: ಪಂಚಕುಲದಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ ಪತ್ರಕರ್ತ ರಾಮ್ ಚಂದರ್ ಛಠರ್ಪತಿ ಅವರನ್ನು ಕೊಲೆ ಮಾಡಿದ ಅಪರಾಧ ಮೇಲೆ ಡೇರಾ ಸಚಾ ಸೌದ ಮುಖ್ಯಸ್ಥ ಗುರ್ಮೆತ್ ರಾಮ್ ರಹೀಮ್ ಸಿಂಗ್ ಮತ್ತು ಇತರ ಮೂವರಿಗೆ ಜೀವಾವಧಿ ಶಿಕ್ಷೆಯನ್ನು ಘೋಷಿಸಿದೆ.
ನ್ಯಾಯಾಲಯದ ತೀರ್ಪಿನ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಪತ್ರಕರ್ತ ಛತ್ರಪತಿ ಪುತ್ರ" ಇದು ಸತ್ಯಕ್ಕೆ ಸಂಧ ಜಯ, ನಾವು ಮರಣ ದಂಡನೆ ಶಿಕ್ಷೆಗೆ ಆಗ್ರಹಿಸಿದ್ದೆವು, ಆದರೆ ಸದ್ಯದ ಶಿಕ್ಷೆ ಪ್ರಮಾಣಕ್ಕೆ ನಾವು ಸಂತೃಪ್ತರಾಗಿದ್ದೇವೆ" ಎಂದು ತಿಳಿಸಿದ್ದಾರೆ.
Journalist Ramchandra Chhatarpati murder case: Three other convicts Kuldeep Singh, Nirmal Singh and Krishan Lal, have also been awarded life imprisonment. The Court has also imposed a fine of Rs 50,000 each. https://t.co/rclAjUMaCs
— ANI (@ANI) January 17, 2019
ಈ ಪ್ರಕರಣದಲ್ಲಿ ನಿರ್ಮಲ್ ಸಿಂಗ್, ಕುಲ್ದೀಪ್ ಸಿಂಗ್ ಮತ್ತು ಕೃಷನ್ ಲಾಲ್ ಇತರ ಮೂವರು ಮೂವರು ಅಪರಾಧಿಗಳಾಗಿದ್ದಾರೆ. ಅವರಿಗೂ ಕೂಡ ಜೀವಾವಧಿ ಶಿಕ್ಷೆಯನ್ನು ವಿಧಿಸಿಲಾಗಿದೆ. ಅಲ್ಲದೆ ಪ್ರತಿಯೊಬ್ಬರಿಗೂ ಕೂಡ 50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.ವಿಚಾರಣೆ ವೇಳೆ ರಾಮ್ ರಹೀಮ್ ಸಿಂಗ್ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು.2002 ರಲ್ಲಿ ನಡೆದ ಪ್ರಕರಣದಲ್ಲಿ ಅವರನ್ನು ಪ್ರಮುಖ ರೂವಾರಿ ಎಂದು ಸಿಬಿಸಿ ವಿಶೇಷ ನ್ಯಾಯಾಲಯ ತೀರ್ಪು ನೀಡಿ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
ಸಿರ್ಸಾ ಮೂಲದ ಪಂಥದ ಮುಖ್ಯಸ್ಥ ಈಗಾಗಲೇ 2002 ರಲ್ಲಿ ಇಬ್ಬರು ಮಹಿಳಾ ಸಾಧ್ವಿಗಳನ್ನು ಅತ್ಯಾಚಾರ ಮಾಡಿದ್ದಕ್ಕೆ 20 ವರ್ಷಗಳ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಪೂರಾ ಸಚ್' ಪತ್ರಿಕೆಯ ರಾಮ್ ಚಂದರ್ ಛತ್ರಪತಿ ಎನ್ನುವ ಪತ್ರಕರ್ತರನ್ನು ಅಕ್ಟೋಬರ್ 2002 ರಲ್ಲಿ ಶೂಟ್ ಮಾಡಿ ಸಾಯಿಸಲಾಯಿತು. ಇದಾದ ನಂತರ ಅನಾಮಧೇಯ ಪತ್ರದ ಮೂಲಕ ಸಿರ್ಸಾದಲ್ಲಿನ ಡೇರಾ ಪ್ರಧಾನ ಕಚೇರಿಯಲ್ಲಿ ಸಾದ್ವಿಗಳನ್ನು ಲೈಂಗಿಕವಾಗಿ ಹೇಗೆ ಬಳಸಿಕೊಳ್ಳಲಾಯಿತು ಎಂದು ಅನಾಮಧೇಯ ಪತ್ರವೊಂದನ್ನು ಪ್ರಕಟಿಸಿದರು.