actor Sharan : ಉತ್ತರ ಕರ್ನಾಟಕ ಮಂದಿಗೆ ಗೊತ್ತು ಜೋಳದ ರೊಟ್ಟಿಯ ಗತ್ತು. ರಾಗಿ ಮುದ್ದೆಯಂತೆ ಜೋಳದ ರೊಟ್ಟಿ ಊಟ ದೇಹ ಗಟ್ಟಿಗೊಳಿಸುವ ಅಂಶಗಳನ್ನು ಹೊಂದಿದೆ. ಮುಂಜಾನೆ ಎದ್ದು, ಅವ್ವ ಮಾಡಿದ ಬಿಸಿ ರೊಟ್ಟಿ, ಪಲ್ಯೆ ಜೊತೆ ಉಳ್ಳಾಗಡ್ಡಿ, ಮೆಣಸಿನಕಾಯಿ ಕಡಿದ್ರ ಯಾವ ರೋಗನೂ ಹತ್ತಿರ ಬರಲ್ಲ. ನಟ ಶರಣ್ ಬೆಂಗಳೂರಿನಲ್ಲಿ ವಾಸವಿದ್ರೂ ಹುಟ್ಟೂರಿನ ಊಟವನ್ನು ಎಂದೂ ಮರೆತಿಲ್ಲ ಅನಿಸುತ್ತದೆ. ಸದ್ಯ ಶರಣ್ ಜೋಳದ ರೊಟ್ಟಿ, ಬೇಳೆ ಪಲ್ಯೆಯ ಮಹಿಮೆಯನ್ನು ಜನರ ಮುಂದಿಟ್ಟಿದ್ದಾರೆ...
ಹೌದು.. ಉತ್ತರ ಕರ್ನಾಟಕದ ಮಂದಿಗೆ ಜೋಳದ ರೊಟ್ಟಿ ಅಂದ್ರೆ ಪಂಚಪ್ರಾಣ. ಬೆಳಿಗ್ಗೆ ಎದ್ದು, ಇಡ್ಲಿ ಗಿಡ್ಲಿ ಅಂತ ಎನಿಲ್ಲ, ಒಲಿ ಮುಂದ ಕುಂತ ಅವ್ವ ಮಾಡೋ ಬಿಸಿ ಬಿಸಿ ರೊಟ್ಟಿ ತಿಂದ್ರ ಮುಗಿತು ಎಂತಹ ಗಟ್ಟಿ ಕೆಲಸ ಇದ್ರು ಮುಗಿಸಿ ಮನಿಗ ಬರ್ತಾರ. ರೊಟ್ಟಿ ಮಹಿಮೆನೇ ಆಗಿದೆ. ಅದಕ್ಕೆ ಹಿಂದಿನ ಮಂದಿ ನೂರಾರು ವರ್ಷ ಯಾವುದೇ ರೋಗ ರುಜಿನ ಇಲ್ಲದೆ ಆರೋಗ್ಯವಂತರಾಗಿ ನೂರಾರು ವರ್ಷಗಳ ಕಾಲ ಗಟ್ಟಿಮುಟ್ಟಾಗಿ ಇರ್ತಿದ್ರು.
ಇದನ್ನೂ ಓದಿ: Ketika Sharma : ಎಂಥ ಸೌಂದರ್ಯ ಕಂಡೇ..! ಜಸ್ಟ್ ಅರಳಿದ ಕಮಲದಂತಿದೆ ಕೇತಿಕಾ ಸೌಂದರ್ಯ
ಇದೀಗ ನಟ ಶರಣ್ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಜೋಳದ ರೊಟ್ಟಿ, ಬೆಳೆ ಪಲ್ಯ, ಉಳ್ಳಾಗಡ್ಡಿ ತಿನ್ನುತ್ತಿರುವ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ʼದೈಹಿಕ ಹಾಗೂ ಮಾನಸಿಕ ಆರೋಗ್ಯದ ಮಾಯಾ ಮದ್ದು...ನಮ್ಮ ಮನೆಯಲ್ಲೇ ತಯಾರಿಸಿದ ಉತ್ತರ ಕರ್ನಾಟಕ ಶೈಲಿಯ ಊಟʼ ಅಂತ ಶೀರ್ಷಿಕೆ ಬರೆದುಕೊಂಡು ಜೋಳದ ರೊಟ್ಟಿಯ ಗಮ್ಮತ್ತನ್ನು ಯವ ಪಿಳೀಗೆಗೆ ತಿಳಿಸಿದ್ದಾರೆ. ಈ ಫೋಟೋ ನೋಡಿ ʼಜೋಳದ ರೊಟ್ಟಿ, ಚವಳಿಕಾಯಿ ಪಲ್ಲೆ, ಬ್ಯಾಳಿ ಪಲ್ಲೆ, ಮೆಂತಿ ಪಲ್ಲೆ, ಸೌತಿ ಕಾಯಿ, ಉಳ್ಳಾಗಡ್ಡಿ ಮಸ್ತ್ ಮೆನುʼ ಸರ್ ಅಂತ ಕೆಲವರು ಕಾಮೆಂಟ್ ಮಾಡಿದ್ರೆ ಇನ್ನು ಕೆಲವರು ಒಳ್ಳೆಯ ಸಲಹೆ ಸರ್ ಅಂತ ಧನ್ಯವಾದ ತಿಳಿಸಿದ್ದಾರೆ.
ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವ ಶರಣ್ ಅವರು ಉತ್ತಮ ಆಹಾರ ಪದ್ದತಿಯ ಜೊತೆ ವರ್ಕೌಟ್, ಯೋಗ ಕೂಡ ಮಾಡ್ತಾರೆ. ಇತ್ತೀಚಿಗೆ ಅವರು, ತಮ್ಮ ಜಮೀನಿನಲ್ಲಿ ಧ್ಯಾನ ಮಾಡುತ್ತಿರುವ ಫೋಟೋ ಒಂದನ್ನು ಹಂಚಿಕೊಂಡಿದ್ದರು. ಅಲ್ಲದೆ, ಜೀಮ್ನಲ್ಲಿ ವರ್ಕೌಟ್ ಮಾಡುತ್ತಿರುವು ಕೆಲವು ವಿಡಿಯೋಗಳನ್ನು ಹಂಚಿಕೊಂಡಿದ್ದರು. ದೇಹವನ್ನ ದಂಡಿಸುವ ಮೂಲಕ ಶರಣ್ ಇಂದಿಗೂ ಸಹ ಯಂಗ್ ಆಗಿ ಕಾಣಿಸುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.