Dandruff Problem​: ಡ್ಯಾಂಡ್ರಫ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುತ್ತೆ ಈ ಮನೆಮದ್ದು

Dandruff Problem​: ಕೂದಲಿಗೆ ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡಿದರೆ ತಲೆಹೊಟ್ಟು ಮುಂತಾದ ಕೂದಲಿನ ಸಮಸ್ಯೆ ದೂರವಾಗುತ್ತದೆ. ಆದರೆ ಕೆಲವು ವಸ್ತುಗಳನ್ನು ಬಾದಾಮಿ ಎಣ್ಣೆಯೊಂದಿಗೆ ಬೆರೆಸಿದರೆ, ಕೂದಲನ್ನು ಹೊಳೆಯುವಂತೆ ಮಾಡಬಹುದು. 

Written by - Chetana Devarmani | Last Updated : Feb 26, 2023, 09:50 AM IST
  • ತಲೆಹೊಟ್ಟು ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯಾ?
  • ಬಾದಾಮಿ ಎಣ್ಣೆ ಜೊತೆ ಇದನ್ನು ಬೆರೆಸಿ ಹಚ್ಚಿ
  • ಡ್ಯಾಂಡ್ರಫ್ ಕೆಲವೇ ದಿನದಲ್ಲಿ ಮಾಯವಾಗುತ್ತೆ
Dandruff Problem​: ಡ್ಯಾಂಡ್ರಫ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುತ್ತೆ ಈ ಮನೆಮದ್ದು  title=
Dandruff Problem

Dandruff Problem​: ಬಾದಾಮಿ ಎಣ್ಣೆ ಕೂದಲು ಮತ್ತು ಬೇರುಗಳಿಗೆ ತುಂಬಾ ಪ್ರಯೋಜನಕಾರಿ. ಇದು ವಿಟಮಿನ್ ಇ, ಪ್ರೊಟೀನ್ ಮತ್ತು ಫೋಲಿಕ್ ಆಮ್ಲವನ್ನು ಒಳಗೊಂಡಿರುತ್ತದೆ, ಇದು ಕೂದಲನ್ನು ಹೊಳೆಯುವಂತೆ ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೂದಲಿಗೆ ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡಿದರೆ ತಲೆಹೊಟ್ಟು ಮುಂತಾದ ಕೂದಲಿನ ಸಮಸ್ಯೆ ದೂರವಾಗುತ್ತದೆ. ಆದರೆ ಕೆಲವು ವಸ್ತುಗಳನ್ನು ಬಾದಾಮಿ ಎಣ್ಣೆಯೊಂದಿಗೆ ಬೆರೆಸಿದರೆ, ಕೂದಲನ್ನು ಹೊಳೆಯುವಂತೆ ಮಾಡಬಹುದು. 

ಬಾದಾಮಿ ಎಣ್ಣೆಯಲ್ಲಿ ಈ ಎರಡು ವಸ್ತುಗಳನ್ನು ಮಿಶ್ರಣ ಮಾಡಿ 

1. ನಿಂಬೆ ರಸ

ನೀವು ಬಾದಾಮಿ ಎಣ್ಣೆಗೆ ನಿಂಬೆ ರಸವನ್ನು ಬೆರೆಸಿ ಹಚ್ಚುವುದರಿಂದ ತಲೆಹೊಟ್ಟು ಸಮಸ್ಯೆಯನ್ನು ಹೋಗಲಾಡಿಸಬಹುದು. ಈ ಸಂದರ್ಭದಲ್ಲಿ, ನೀವು ಬೌಲ್‌ನಲ್ಲಿ ಕೆಲವು ಹನಿ ಬಾದಾಮಿ ಎಣ್ಣೆ ಮತ್ತು ಕೆಲವು ಹನಿ ನಿಂಬೆ ಹಣ್ಣಿನ ರಸವನ್ನು ಬೆರೆಸಿ ನಿಮ್ಮ ಕೂದಲಿಗೆ ಹಚ್ಚಬೇಕು. ಈಗ ನೀವು ಕೈಗಳಿಂದ ನಿಮ್ಮ ಕೂದಲನ್ನು ಮಸಾಜ್ ಮಾಡಬೇಕು. ಮಸಾಜ್ ಮಾಡಿದ, 1 ಗಂಟೆಯ ನಂತರ ನಿಮ್ಮ ಕೂದಲನ್ನು ಶಾಂಪೂವಿನಿಂದ ಸ್ವಚ್ಛಗೊಳಿಸಿ. ನೀವು ಕೂದಲಿಗೆ ಇದನ್ನು ಹಚ್ಚಿ ಇಡೀ ರಾತ್ರಿ ಬಿಟ್ಟು, ಮರುದಿನವೂ ಶಾಂಪೂ ಮಾಡಬಹುದು. ಈ ರೀತಿ ಮಾಡುವುದರಿಂದ ಕೂದಲಿನ ಬೆಳವಣಿಗೆ ಕೂಡ ವೇಗವಾಗಿ ಆಗಬಹುದು.
 
ಇದನ್ನೂ ಓದಿ : ಈ 4 ಆಹಾರಗಳನ್ನು ಎಂದಿಗೂ ಫ್ರಿಡ್ಜ್’ನಲ್ಲಿಡಬೇಡಿ: ರುಚಿ ಬದಲಾಗುವ ಜೊತೆಗೆ ವಿಷವಾಗಿ ಪರಿಣಮಿಸಬಹುದು!

2. ಜೇನುತುಪ್ಪ 

ಬಾದಾಮಿ ಎಣ್ಣೆ, ಜೇನುತುಪ್ಪ ಮತ್ತು ಬಾಳೆಹಣ್ಣು ಕೂಡ ತಲೆಹೊಟ್ಟು ಸಮಸ್ಯೆಯನ್ನು ಹೋಗಲಾಡಿಸಬಹುದು. ಒಂದು ಬೌಲ್ ನಲ್ಲಿ ಮೂರನ್ನೂ ಚೆನ್ನಾಗಿ ಮಿಕ್ಸ್ ಮಾಡಿ, ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ. ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿದ ನಂತರ ಅರ್ಧ ಗಂಟೆ ಅಥವಾ 1 ಗಂಟೆ ಬಿಟ್ಟು, ಬಳಿಕ ಸೌಮ್ಯವಾದ ಶಾಂಪೂ ಬಳಸಿ ನಿಮ್ಮ ಕೂದಲನ್ನು ಚೆನ್ನಾಗಿ ತೊಳೆಯಿರಿ. ಹೀಗೆ ಮಾಡುವುದರಿಂದ ಕೂದಲು ಸುಂದರವಾಗುವುದು ಮಾತ್ರವಲ್ಲದೆ ಕೂದಲಿನ ಹೊಳಪು ಕೂಡ ಹೆಚ್ಚಾಗುತ್ತದೆ.

ಇದನ್ನೂ ಓದಿ : ಬಿಳಿ ಕೂದಲು ಬೆಳೆಯದಂತೆ ತಡೆಯಲು ದೇಹಕ್ಕೆ ಅಗತ್ಯ ಈ ವಿಟಮಿನ್ !

ಗಮನಿಸಿ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News