IND vs AUS: ಇಂದೋರ್ ಟೆಸ್ಟ್’ನಿಂದ ಆಸೀಸ್ ನಾಯಕ ಕಮಿನ್ಸ್ ಔಟ್: ಆದ್ರೆ ವಿಶ್ವದ ಈ ಮಾರಕ ಬೌಲರ್ ಪಾದಾರ್ಪಣೆ!

IND vs AUS: ಪ್ಯಾಟ್ ಕಮ್ಮಿನ್ಸ್ ತವರಿಗೆ ಮರಳಿರುವ ಕಾರಣ, ಇಂದೋರ್ ಟೆಸ್ಟ್‌ನಲ್ಲಿ ಅವರ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಯುವ ಬೌಲರ್‌ಗೆ ಪದಾರ್ಪಣೆ ಮಾಡುವ ಅವಕಾಶ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ. ಸದ್ಯ ವೇಗಿ ಮಿಚೆಲ್ ಸ್ಟಾರ್ಕ್ ಬೆರಳಿನ ಗಾಯದಿಂದ ಚೇತರಿಸಿಕೊಂಡಿದ್ದು, ಇಂದೋರ್ ಟೆಸ್ಟ್‌’ನಲ್ಲಿ ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ಅವರ ಸ್ಥಾನವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Written by - Bhavishya Shetty | Last Updated : Feb 24, 2023, 07:25 PM IST
    • ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿಯ ಮೂರನೇ ಟೆಸ್ಟ್ ಪಂದ್ಯ
    • ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದ್ದು, ನಾಯಕ ಪ್ಯಾಟ್ ಕಮಿನ್ಸ್ ತವರಿಗೆ ಮರಳಿದ್ದಾರೆ.
    • ಅವರ ಸ್ಥಾನಕ್ಕೆ ಸ್ಟೀವ್ ಸ್ಮಿತ್‌ಗೆ ನಾಯಕತ್ವದ ಜವಾಬ್ದಾರಿ ನೀಡಲಾಗುವುದು.
IND vs AUS: ಇಂದೋರ್ ಟೆಸ್ಟ್’ನಿಂದ ಆಸೀಸ್ ನಾಯಕ ಕಮಿನ್ಸ್ ಔಟ್: ಆದ್ರೆ ವಿಶ್ವದ ಈ ಮಾರಕ ಬೌಲರ್ ಪಾದಾರ್ಪಣೆ!  title=
Pat Cummins

IND vs AUS: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿಯ ಮೂರನೇ ಟೆಸ್ಟ್ ಪಂದ್ಯ ಮಾರ್ಚ್ 1 ರಿಂದ ಇಂದೋರ್‌ನಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದ್ದು, ನಾಯಕ ಪ್ಯಾಟ್ ಕಮಿನ್ಸ್ ತವರಿಗೆ ಮರಳಿದ್ದಾರೆ. ಇದೀಗ ಇಂದೋರ್‌ನಲ್ಲಿ ನಡೆಯಲಿರುವ ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಭಾಗವಾಗುವುದಿಲ್ಲ ಎಂಬ ಅಪ್‌ಡೇಟ್ ಬಂದಿದೆ. ಅವರ ಸ್ಥಾನಕ್ಕೆ ಸ್ಟೀವ್ ಸ್ಮಿತ್‌ಗೆ ನಾಯಕತ್ವದ ಜವಾಬ್ದಾರಿ ನೀಡಲಾಗುವುದು.

ಇದನ್ನೂ ಓದಿ: Kichcha Sudeep: ಕಿಚ್ಚ ಸುದೀಪ್ ಧರಿಸುವ ಈ ವಾಚ್ ಬೆಲೆ ಎಷ್ಟು ಕೋಟಿ ಗೊತ್ತಾ? ತಲೆ ಸುತ್ತೋದು ಖಂಡಿತ!

ಪ್ಯಾಟ್ ಕಮ್ಮಿನ್ಸ್ ತವರಿಗೆ ಮರಳಿರುವ ಕಾರಣ, ಇಂದೋರ್ ಟೆಸ್ಟ್‌ನಲ್ಲಿ ಅವರ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಯುವ ಬೌಲರ್‌ಗೆ ಪದಾರ್ಪಣೆ ಮಾಡುವ ಅವಕಾಶ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ. ಸದ್ಯ ವೇಗಿ ಮಿಚೆಲ್ ಸ್ಟಾರ್ಕ್ ಬೆರಳಿನ ಗಾಯದಿಂದ ಚೇತರಿಸಿಕೊಂಡಿದ್ದು, ಇಂದೋರ್ ಟೆಸ್ಟ್‌’ನಲ್ಲಿ ಕಮ್ಮಿನ್ಸ್ ಅನುಪಸ್ಥಿತಿಯಲ್ಲಿ ಅವರ ಸ್ಥಾನವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಎರಡನೇ ವೇಗಿಯಾಗಿ ಆಸ್ಟ್ರೇಲಿಯಾ 2 ಆಯ್ಕೆಗಳನ್ನು ಹೊಂದಿದೆ. ಮೊದಲನೇ ಆಯ್ಕೆ ಸ್ಕಾಟ್ ಬೋಲ್ಯಾಂಡ್ ಮತ್ತು ಎರಡನೇ ಆಯ್ಕೆ ಲ್ಯಾನ್ಸ್ ಮೋರಿಸ್. ನಾಗ್ಪುರದಲ್ಲಿ ಆಡಿದ ಸರಣಿಯ ಮೊದಲ ಟೆಸ್ಟ್ ಪಂದ್ಯದ ಭಾಗವಾಗಿ ಬೋಲ್ಯಾಂಡ್ ಕೂಡ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಲ್ಯಾನ್ಸ್ ಮಾರಿಸ್ ಗೆ ಪದಾರ್ಪಣೆ ಮಾಡುವ ಅವಕಾಶ ಸಿಗುವ ಸಾಧ್ಯತೆ ಇದೆ.

24 ವರ್ಷದ ಲ್ಯಾನ್ಸ್ ಮಾರಿಸ್ ಅವರನ್ನು ಇಂದೋರ್ ಟೆಸ್ಟ್‌ ನ ಪ್ಲೇಯಿಂಗ್-ಇಲೆವೆನ್‌ಗೆ ಸೇರಿಸಿದರೆ, ನಂತರ ಅವರು ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡುವ ಅವಕಾಶವನ್ನು ಪಡೆಯುತ್ತಾರೆ. ಮೋರಿಸ್ ದೇಶೀಯ ಸರ್ಕ್ಯೂಟ್‌ನಲ್ಲಿ ಮಾರಣಾಂತಿಕ ಬೌಲರ್‌ಗಳಲ್ಲಿ ಒಬ್ಬರು ಎಂದುದ ಗುರುತಿಸಲ್ಪಟ್ಟಿದ್ದಾರೆ. 150 ಕಿ.ಮೀ ವೇಗದಲ್ಲಿ ನಿರಂತರವಾಗಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.

ಭಾರತೀಯ ಬ್ಯಾಟ್ಸ್‌ಮನ್‌ಗಳಿಗೂ ತಮ್ಮ ಬೌಲರ್‌ಗಳನ್ನು ಹೇಗೆ ಎದುರಿಸಬೇಕೆಂದು ಸರಿಯಾಗಿ ತಿಳಿದಿಲ್ಲ ಎಂಬುದು ಅವರ ವಿಶೇಷತೆಗಳಲ್ಲಿ ಒಂದಾಗಿದೆ. ಇದನ್ನು ನೋಡಿದರೆ ಈ ವೇಗದ ಬೌಲರ್‌ಗೆ ಟೆಸ್ಟ್‌ಗೆ ಪದಾರ್ಪಣೆ ಮಾಡುವ ಅವಕಾಶ ಸಿಗಲಿದೆಯಂತೆ.

ಇದನ್ನೂ ಓದಿ: T20 World Cup 2023: ವನಿತಾ ವಿಶ್ವಕಪ್ ಕನಸಿಗೆ ಭಗ್ನ: ಆಸೀಸ್ ವಿರುದ್ಧ ಸೋಲುಂಡ ಟೀಂ ಇಂಡಿಯಾ

ಪಶ್ಚಿಮ ಆಸ್ಟ್ರೇಲಿಯಾವನ್ನು ಪ್ರತಿನಿಧಿಸುತ್ತಿರುವ ಲ್ಯಾನ್ಸ್ ಮೋರಿಸ್ ಅವರ ಮುಂದೆ ಬ್ಯಾಟಿಂಗ್ ಮಾಡುವುದು ಸುಲಭದ ಮಾತಲ್ಲ. ಅವರು ತಮ್ಮ ವೇಗದ ಚೆಂಡುಗಳಿಂದ ಆಸ್ಟ್ರೇಲಿಯಾದ ದೇಶೀಯ ಸರ್ಕ್ಯೂಟ್‌ನಲ್ಲಿ ಅನೇಕ ಬ್ಯಾಟ್ಸ್‌ಮನ್‌ಗಳ ಹೆಲ್ಮೆಟ್‌ಗಳನ್ನು ಮುರಿದಿದ್ದಾರೆ. ಅವರ ಎಸೆತಗಳಿಂದ ಹಲವು ಆಟಗಾರರು ಗಾಯಗೊಂಡಿದ್ದಾರೆ. ಇತ್ತೀಚೆಗೆ, ಅವರು ಶೆಫೀಲ್ಡ್ ಶೀಲ್ಡ್ನಲ್ಲಿ ತೀಕ್ಷ್ಣವಾದ ಬೌಲಿಂಗ್ ಮಾಡಿದ್ದು, 5 ಪಂದ್ಯಗಳಲ್ಲಿ 18.40 ರ ಸರಾಸರಿಯಲ್ಲಿ 27 ವಿಕೆಟ್ ಗಳನ್ನು ಪಡೆದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News