ಬೆಂಗಳೂರು : ಕೂದಲಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಒಮ್ಮೆ ಕಾಣಿಸಿಕೊಂಡರೆ ಅವುಗಳನ್ನು ಸರಿಪಡಿಸುವುದು ಕಷ್ಟ. ಇಂತಹ ಸಮಸ್ಯೆಗಳಲ್ಲಿ ಸಣ್ಣ ವಯಸ್ಸಿನಲ್ಲಿ ಕೂದಲು ಬಿಳಿಯಾಗುವುದು ಕೂಡಾ ಒಂದು. ಆದರೆ ಕೆಲವು ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಇದನ್ನು ನಿಯಂತ್ರಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕೂದಲು ಬಿಳಿಯಾಗುವುದನ್ನು ತಪ್ಪಿಸಲು ಕಪ್ಪು ಎಳ್ಳಿನ ಎಣ್ಣೆಯಿಂದ ಕೂದಲನ್ನು ಮಸಾಜ್ ಮಾಡುವುದು ಉತ್ತಮ ಆಯ್ಕೆಯಾಗಿದೆ. ಇದು ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ತಡೆಯುತ್ತದೆ. ಇದರೊಂದಿಗೆ ಕಪ್ಪು ಎಳ್ಳೆಣ್ಣೆಯಲ್ಲಿ ಕೆಲವು ಅಂಶಗಳು ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಕಪ್ಪು ಎಳ್ಳಿನ ಎಣ್ಣೆಯನ್ನು ಮಸಾಜ್ ಮಾಡುವುದರಿಂದ ಸ್ವಲ್ಪ ಮಟ್ಟಿಗೆ ಬೂದು ಕೂದಲು ಮತ್ತೆ ಕಪ್ಪಾಗುತ್ತದೆ .
ಬಿಳಿ ಕೂದಲನ್ನು ಮರೆಮಾಚಲು ಅನೇಕ ಜನರು ಗೋರಂಟಿಯನ್ನು ಕೂದಲಿಗೆ ಹಚ್ಚುತ್ತಾರೆ, ಇದರಿಂದಾಗಿ ಬಿಳಿ ಕೂದಲು ಸ್ವಲ್ಪ ಸಮಯದವರೆಗೆ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಆದರೆ ಗೋರಂಟಿ ಎಣ್ಣೆ ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ. ಗೋರಂಟಿ ಎಲೆಗಳನ್ನು ಪುಡಿಮಾಡಿ ತೆಂಗಿನ ಎಣ್ಣೆಯಲ್ಲಿ ಚೆನ್ನಾಗಿ ಬಿಸಿ ಮಾಡಿ ನಂತರ ಎಣ್ಣೆಯನ್ನು ಫಿಲ್ಟರ್ ಮಾಡಿ ಬಳಸಬಹುದು.
ಕರಿಬೇವಿನ ಎಲೆಗಳ ಬಳಕೆಯಿಂದ ಬಿಳಿ ಕೂದಲು ಮತ್ತೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಅಲ್ಲದೆ, ಇದನ್ನು ನಿಯಮಿತವಾಗಿ ಬಳಸುವವರಲ್ಲಿ, ಕೂದಲು ಅಕಾಲಿಕವಾಗಿ ಬಿಳಿಯಾಗುವ ಅಪಾಯವು ತುಂಬಾ ಕಡಿಮೆ. ಕರಿಬೇವಿನ ಎಲೆಗಳನ್ನು ತೆಂಗಿನೆಣ್ಣೆ ಅಥವಾ ಸಾಸಿವೆ ಎಣ್ಣೆಯಲ್ಲಿ ಚೆನ್ನಾಗಿ ಬಿಸಿ ಮಾಡಿ ನಂತರ ತಣ್ಣಗಾಗಿಸಿ ಬಳಸಿ.
ಬಾದಾಮಿ ಎಣ್ಣೆ ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ. ಬಾದಾಮಿ ಎಣ್ಣೆಯು ಕೂದಲಿಗೆ ಬೇರುಗಳಿಂದ ಪೋಷಣೆಯನ್ನು ನೀಡುತ್ತದೆ. ಇದರಿಂದಾಗಿ ಕೂದಲು ಅಕಾಲಿಕವಾಗಿ ಬಿಳಿಯಾಗುವುದು ಸೇರಿದಂತೆ ಅನೇಕ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ನೆಲ್ಲಿಕಾಯಿ ಎಣ್ಣೆಯನ್ನು ಬಿಳಿ ಕೂದಲನ್ನು ಪುನಃ ಕಪ್ಪಾಗಿಸಲು ಬಳಸಲಾಗುತ್ತದೆ. ಒಣ ಆಮ್ಲಾವನ್ನು ಕೆಲವು ತುಂಡುಗಳಾಗಿ ಮಾಡಿ ತೆಂಗಿನ ಎಣ್ಣೆಯಲ್ಲಿ ಸ್ವಲ್ಪ ಸಮಯದವರೆಗೆ ಬಿಸಿ ಮಾಡಿ. ನಂತರ, ತೈಲವನ್ನು ಫಿಲ್ಟರ್ ಮಾಡಿ ಕೂದಲಿಗೆ ಹಚ್ಚಿ.