ಶೀಘ್ರದಲ್ಲಿಯೇ ಗಜಲಕ್ಷ್ಮಿ ರಾಜಯೋಗ ನಿರ್ಮಾಣ, 4 ರಾಶಿಗಳ ಜನರ ಮೇಲೆ ಲಕ್ಷ್ಮಿ-ಕುಬೇರಿಂದ ಅಪಾರ ಧನವೃಷ್ಠಿ!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರು ಮತ್ತು ಚಂದ್ರನ ಮೈತ್ರಿ ಗಜಲಕ್ಷ್ಮಿ ಯೋಗವನ್ನು ರೂಪಿಸಲಿದೆ. ಗಜಲಕ್ಷ್ಮಿ ಯೋಗವನ್ನು ಅತ್ಯಂತ ಮಂಗಳಕರ ರಾಜಯೋಗ ಎಂದು ಪರಿಗಣಿಸಲಾಗುತ್ತದೆ. ಏಪ್ರಿಲ್ 22, 2023 ರಂದು ರೂಪುಗೊಳ್ಳುತ್ತಿರುವ ಈ ಯೋಗವು ಕೆಲ ರಾಶಿಗಳ ಜನರ ಅದೃಷ್ಟವನ್ನು ಬೆಳಗಲಿದೆ.
 

2023 ರಲ್ಲಿ, ಅನೇಕ ಪ್ರಮುಖ ಗ್ರಹಗಳು ತಮ್ಮ ಸ್ಥಾನವನ್ನು ಪರಿವರ್ತಿಸುತ್ತವೆ. ಜನವರಿಯಲ್ಲಿ 30 ವರ್ಷಗಳ ನಂತರ, ಶನಿಯು ತನ್ನ ಸ್ವರಾಶಿಯಾಗಿರುವ ಕುಂಭ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಇದೀಗ ಏಪ್ರಿಲ್ 22, 2023 ರಂದು, 12 ವರ್ಷಗಳ ನಂತರ, ಗುರು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ. ಗುರುಗ್ರಹದ ಸಂಚಾರ ತುಂಬಾ ವಿಶೇಷವಾಗಿರಲಿದೆ. ಮೇಷ ರಾಶಿಯಲ್ಲಿ ಗುರುವಿನ ಸಂಚಾರವು ಇತರ ಗ್ರಹಗಳ ಜೊತೆಯಲ್ಲಿ ಅನೇಕ ಶುಭ ಯೋಗಗಳನ್ನು ಸೃಷ್ಟಿಸುತ್ತದೆ. ಗುರುವು ಮೇಷ ರಾಶಿಗೆ ಸಾಗಿದಾಗ, ಚಂದ್ರನು ಈಗಾಗಲೇ ಮೇಷ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಈ ರೀತಿಯಾಗಿ ಏಪ್ರಿಲ್ 22 ರಂದು ಗುರು ಸಂಕ್ರಮಣವು ಗುರು ಮತ್ತು ಚಂದ್ರನ ಸಂಯೋಗವನ್ನು ರೂಪಿಸಲಿದೆ, ಇದು ಗಜಲಕ್ಷ್ಮಿ ಯೋಗವನ್ನು ಸೃಷ್ಟಿಸಲಿದೆ. ಚಂದ್ರ ಮತ್ತು ಗುರುವಿನ ಈ ಸಂಯೋಜನೆಯಿಂದ ರೂಪುಗೊಂಡ ಗಜಲಕ್ಷ್ಮಿ ಯೋಗವು 4 ರಾಶಿಯ ಜನರಿಗೆ ತುಂಬಾ ಶುಭ ಫಲಿತಾಂಶಗಳನ್ನು ನೀಡಲಿದೆ. ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-ಬುಧನ ಅಸ್ತ ಅವಧಿ ಈ 4 ರಾಶಿಗಳ ಜನರ ಪಾಲಿಗೆ ಭಾರಿ ಧನವೃದ್ಧಿಯ ಯೋಗ ತರಲಿದೆ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಮೇಷ ರಾಶಿ: ಗುರು ಮತ್ತು ಚಂದ್ರರ ಸಂಯೋಗದಿಂದ ರೂಪುಗೊಂಡ ಗಜಲಕ್ಷ್ಮಿ ಯೋಗವು ಮೇಷ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ನೀಡಲಿದೆ. ಉದ್ಯೋಗದ ಹುಡುಕಾಟದಲ್ಲಿ ಇರುವ ಜನರು ಇದರಿಂದ ತುಂಬಾ ಯಶಸ್ವಿಯಾಗುತ್ತಾರೆ. ಕಾರ್ಯ ಕ್ಷೇತ್ರದಲ್ಲಿ ನಿಮ್ಮ ಕೆಲಸಕ್ಕೆ ತುಂಬಾ ಪ್ರಶಂಸೆ ವ್ಯಕ್ತವಾಗಲಿದೆ.  ಈ ಯೋಗವು ವಿದ್ಯಾರ್ಥಿಗಳಿಗೂ ಯಶಸ್ವಿಯಾಗುತ್ತದೆ. ಪ್ರೇಮ ಸಂಬಂಧಗಳು ಮಧುರವಾಗಿರುತ್ತವೆ. ಅವಿವಾಹಿತರಿಗೆ ವಿವಾಹವಾಗಲಿದೆ.  

2 /4

ಮಿಥುನ ರಾಶಿ: ಗಜಲಕ್ಷ್ಮಿ ಯೋಗದಿಂದ ಮಿಥುನ ರಾಶಿಯವರಿಗೆ ವೇತನ ಹೆಚ್ಚಾಗಲಿದೆ. ಇವರಿಗೆ ಸಾಕಷ್ಟು ಪ್ರಚಾರ ಕೂಡ ಸಿಗಲಿದೆ. ವ್ಯಾಪಾರದಲ್ಲಿ ಉತ್ತಮ ಲಾಭವನ್ನು ನೀವು ಕಾಣಬಹುದು. ಬ್ಯಾಂಕಿಂಗ್, ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಜನರಿಗೆ ಇದು ಹೆಚ್ಚಿನ ಪ್ರಯೋಜನಗಳನ್ನು ನೀಡಲಿದೆ. ಘನತೆ-ಗೌರವ ಹೆಚ್ಚಾಗಲಿದೆ.  

3 /4

ಧನು ರಾಶಿ: ಗಜಲಕ್ಷ್ಮಿ ಯೋಗವು ಧನು ರಾಶಿಯವರಿಗೆ ದಿಢೀರ್ ಧನಲಾಭವನ್ನು ನೀಡಲಿದೆ. ನೌಕರಿ ಮಾಡುವವರು ಇದರಿಂದ ಸಾಕಷ್ಟು ಪ್ರಗತಿ ಹೊಂದಲಿದ್ದಾರೆ. ವ್ಯಾಪಾರಸ್ಥರಿಗೆ ಇದರಿಂದ ವಿಶೇಷ ಲಾಭ ಸಿಗಲಿದೆ. ದೊಡ್ಡ ಒಪ್ಪಂದವನ್ನು ನೀವು ಅಂತಿಮಗೊಳಿಸಬಹುದು. ಪ್ರೇಮ ಸಂಬಂಧಗಳು ಉತ್ತಮವಾಗಿರುತ್ತವೆ. ಅಧ್ಯಯನದಲ್ಲಿ ಆಸಕ್ತಿ ಇರಲಿದೆ.  

4 /4

ಕುಂಭ ರಾಶಿ: ಗುರು ಮತ್ತು ಚಂದ್ರರ ಸಂಯೋಗದಿಂದ ಉಂಟಾಗುವ ಗಜಲಕ್ಷ್ಮಿ ಯೋಗವು ಕುಂಭ ರಾಶಿಯವರಿಗೆ ಲಾಭವನ್ನು ನೀಡಲಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ನೀವು ಪಡೆಯುವ ಸಾಧ್ಯತೆಗಳಿವೆ. ಪ್ರಮುಖ ವ್ಯಕ್ತಿಯೊಂದಿಗೆ ಸಂಪರ್ಕವಿರುತ್ತದೆ, ಇದು ನಿಮ್ಮ ವೃತ್ತಿಜೀವನದಲ್ಲಿ ನಿಮಗೆ ದೊಡ್ಡ ಪ್ರಯೋಜನವನ್ನು ನೀಡಲಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)