ಕಿಡ್ನಿ ಸಮಸ್ಯೆಯಿಂದ ಪಾರು ಮಾಡುತ್ತದೆ ನಿಂಬೆಯ ಈ ಮೂರು ರೀತಿಯ ಪಾನೀಯಗಳು

ಅನೇಕ ಬಾರಿ ಕಿಡ್ನಿಯ ಸಮಸ್ಯೆಗಳು ತಲೆದೋರುತ್ತವೆ. ನಿಂಬೆ ಹಣ್ಣಿನ ಪಾನೀಯವನ್ನು ಮೂರು ರೀತಿಯಲ್ಲಿ ಸೇವಿಸಬಹುದು. ಕಿಡ್ನಿ ಶುಚಿಗೊಳಿಸುವ ಈ ಪಾನೀಯವನ್ನು ಯಾವಾಗ ಮತ್ತು ಹೇಗೆ ಕುಡಿಯಬೇಕು ನೋಡೋಣ. 

Written by - Ranjitha R K | Last Updated : Feb 16, 2023, 03:32 PM IST
  • ಅನೇಕ ಬಾರಿ ಕಿಡ್ನಿಯ ಸಮಸ್ಯೆಗಳು ತಲೆದೋರುತ್ತವೆ.
  • ನಿಂಬೆ ಹಣ್ಣಿನ ಪಾನೀಯವನ್ನು ಮೂರು ರೀತಿಯಲ್ಲಿ ಸೇವಿಸಬಹುದು
  • ನಿಂಬೆ ಮೂತ್ರಪಿಂಡಗಳಿಗೆ ಪ್ರಯೋಜನಕಾರಿಯಾಗಿದೆ
ಕಿಡ್ನಿ ಸಮಸ್ಯೆಯಿಂದ ಪಾರು ಮಾಡುತ್ತದೆ ನಿಂಬೆಯ ಈ ಮೂರು ರೀತಿಯ ಪಾನೀಯಗಳು  title=

ಬೆಂಗಳೂರು : ಮೂತ್ರಪಿಂಡವು ರಕ್ತವನ್ನು ಸ್ವಚ್ಛಗೊಳಿಸಲು ಮತ್ತು ದೇಹದಿಂದ ವಿಷವನ್ನು ತೆಗೆದುಹಾಕುವ ಕೆಲಸ ಮಾಡುತ್ತದೆ. ಆದರೆ ಅನೇಕ ಬಾರಿ ಕಿಡ್ನಿಯ ಸಮಸ್ಯೆಗಳು ತಲೆದೋರುತ್ತವೆ. ಮೂತ್ರಪಿಂಡಡ ಸಮಸ್ಯೆ ಎದುರಿಸುವ ಅನೇಕ ಮಂದಿ ನಮ್ಮ ನಡುವೆ ಇದ್ದಾರೆ. ಪ್ರತಿದಿನ ನಿಂಬೆ ಹಣ್ಣಿನ ಪಾನೀಯವನ್ನು ಮೂರು ರೀತಿಯಲ್ಲಿ ಸೇವಿಸುವುದರಿಂದ  ಕಿಡ್ನಿಯನ್ನು ಸ್ವಚ್ಚಗೊಳಿಸುವುದು ಸಾಧ್ಯವಾಗುತ್ತದೆ. ಕಿಡ್ನಿ ಶುಚಿಗೊಳಿಸುವ ಈ ಪಾನೀಯವನ್ನು ಯಾವಾಗ ಮತ್ತು ಹೇಗೆ ಕುಡಿಯಬೇಕು ನೋಡೋಣ. 

ದೇಹದಲ್ಲಿ ಮೂತ್ರಪಿಂಡದ ಪ್ರಾಮುಖ್ಯತೆ ಏನು? 
ಮೂತ್ರಪಿಂಡದ ಮುಖ್ಯ ಕಾರ್ಯವೆಂದರೆ ಮೂತ್ರದ ಮೂಲಕ ದೇಹದಿಂದ ಕೊಳಕು ಮತ್ತು ದ್ರವವನ್ನು ತೆಗೆದುಹಾಕುವುದು. ಇದಲ್ಲದೆ, ಮೂತ್ರಪಿಂಡವು ಮಾನವ ದೇಹದಲ್ಲಿನ ಉಪ್ಪು, ಪೊಟ್ಯಾಸಿಯಮ್ ಮತ್ತು ಆಮ್ಲದ ಪ್ರಮಾಣವನ್ನು ನಿಯಂತ್ರಿಸುತ್ತದೆ.  ನಮ್ಮ ದೇಹದ ಇತರ ಭಾಗಗಳು ಕಾರ್ಯನಿರ್ವಹಿಸಲು ಅಗತ್ಯವಾದ ಹಾರ್ಮೋನುಗಳು ಕೂಡಾ ಮೂತ್ರಪಿಂಡದಿಂದ ಬಿಡುಗಡೆಯಾಗುತ್ತವೆ.

ಇದನ್ನೂ ಓದಿ : High cholesterol: ಈ 6 ಅಭ್ಯಾಸಗಳಿಂದ ನಿಮ್ಮ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆ, ಎಚ್ಚರಿಕೆ!

ನಿಂಬೆ ಮೂತ್ರಪಿಂಡಗಳಿಗೆ ಪ್ರಯೋಜನಕಾರಿಯಾಗಿದೆ :
ಹಾರ್ವರ್ಡ್ ವರದಿಯ ಪ್ರಕಾರ, ಪ್ರತಿದಿನ 2 ನಿಂಬೆ ರಸವನ್ನು ಕುಡಿಯುವುದರಿಂದ ಮೂತ್ರದ ಸಿಟ್ರೇಟ್ ಹೆಚ್ಚಾಗುತ್ತದೆ ಮತ್ತು ಮೂತ್ರಪಿಂಡದಿಂದ ವಿಷವನ್ನು ತೆಗೆದುಹಾಕಳು ಸಹಾಯ ಮಾಡುತ್ತದೆ. ದಿನಕ್ಕೆ 2 ರಿಂದ 2.5 ಲೀಟರ್ ಮೂತ್ರ ವಿಸರ್ಜಿಸುವ ಜನರಿಗೆ ಕಿಡ್ನಿ ಸ್ಟೋನ್ ಆಗುವ ಅಪಾಯ ಕಡಿಮೆ. 

ಕಿಡ್ನಿಗಾಗಿ ನಿಂಬೆ ಪಾನೀಯಗಳು :
1.  ಪುದಿನಾ ಜೊತೆ ನಿಂಬೆ
ಒಂದು ಲೋಟ ನೀರಿಗೆ ನಿಂಬೆ ರಸ, ಪುದೀನ ಎಲೆಗಳು ಮತ್ತು ಸ್ವಲ್ಪ ಸಕ್ಕರೆ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಇದನ್ನೂ ಸೇವಿಸಿ.  ಮೂತ್ರಪಿಂಡದ ಆರೋಗ್ಯಕ್ಕೆ ಇದು ಬೆಸ್ಟ್ ಪಾನೀಯ.  ಕಿಡ್ನಿ ಆರೋಗ್ಯಕ್ವನ್ನು ಕಾಪಾಡಲು ಇದು ಸಹಾಯ ಮಾಡುತ್ತದೆ. 

2. ಮಸಾಲಾ ಲೆಮನ್ ಸೋಡಾ
ಒಂದು ಲೋಟದಲ್ಲಿ ನಿಂಬೆ ರಸ, ಜೀರಿಗೆ-ಕೊತ್ತಂಬರಿ ಪುಡಿ, ಚಾಟ್ ಮಸಾಲ ಮತ್ತು ಸೋಡಾ ಮಿಶ್ರಣ ಮಾಡಿ ಸೇವಿಸಿ. ಈ ರೀತಿಯಾಗಿ ನಿಮ್ಮ ಮೂತ್ರಪಿಂಡಕ್ಕೆ ಅಗತ್ಯವಿರುವ ಆರೋಗ್ಯಕರ ಪಾನೀಯವನ್ನು ಸುಲಭವಾಗಿ ತಯಾರಿಸಿಕೊಳ್ಳಬಹುದು. 

ಇದನ್ನೂ ಓದಿ : Rice water: ಅನ್ನದ ಗಂಜಿಯ ಆರೋಗ್ಯ ಗುಟ್ಟು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತೆ!

3. ಎಳ ನೀರಿನೊಂದಿಗೆ  ನಿಂಬೆ :
ಮೂತ್ರಪಿಂಡದ ಆರೋಗ್ಯಕ್ಕಾಗಿ ಎಳನೀರನ್ನು ಸೇವಿಸಬಹುದು. ಅದರಲ್ಲೂ ಏಳನೀರಿನೊಂದಿಗೆ ನಿಂಬೆ ರಸ ಬೆರೆಸಿದರೆ ಅದು ಉತ್ತಮ ರಿಸಲ್ಟ್  ನೀಡುತ್ತದೆ.   ಇದನ್ನೂ ನಿತ್ಯವೂ ಸೇವಿಸಬಹುದು. 

ಮೇಲೆ ತಿಳಿಸಿದ ಪಾನೀಯವನ್ನು  ಬೆಳಿಗ್ಗೆ ಮತ್ತು ಮಧ್ಯಾಹ್ನ ಕುಡಿಯಬಹುದು. 

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News