ನವದೆಹಲಿ: ದೆಹಲಿಯ ವಿಜ್ಞಾನ್ ಭವನದಲ್ಲಿಂದು ನಡೆದ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಪ್ರತಿದಿನ ಜನಸಾಮಾನ್ಯರು ಬಳಸುವ 33 ವಸ್ತುಗಳ ಮೇಲಿನ ಜಿಎಸ್ಟಿ ದರವನ್ನು ಇಳಿಕೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಭೆ ಬಳಿಕ ಮಾತನಾಡಿದ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
7 ವಸ್ತುಗಳ ಮೇಲಿನ ಜಿಎಸ್ಟಿ ದರವನ್ನು 28 ರಿಂದ 18 ಪ್ರತಿಶತದಷ್ಟು ಇಳಿಸಲು ನಿರ್ಧರಿಸಲಾಗಿದೆ. ಉಳಿದ ವಸ್ತುಗಳ ಮೇಲಿನ ಜಿಎಸ್ಟಿ ದರವನ್ನು ಶೇ. 18 ರಿಂದ ಶೇ. 12ಕ್ಕೆ ಇಳಿಸಲಾಗಿದೆ ಎಂದು ತಿಳಿಸಿದರು. ಈಗ ಕೇವಲ 28 ವಸ್ತುಗಳ ಮೇಲೆ ಮಾತ್ರ ಶೇ.28 ಜಿಎಸ್ಟಿ ದರ ವಿಧಿಸಲಾಗುತ್ತದೆ. ಜನವರಿ 1, 2019 ರಿಂದ ಈ ದರಗಳು ಜಾರಿಯಾಗಲಿವೆ ಎಂದು ವಿತ್ತ ಸಚಿವರು ತಿಳಿಸಿದರು.
#WATCH FM Arun Jaitley briefs the media post GST Council meeting https://t.co/RMrPxZmi4R
— ANI (@ANI) December 22, 2018
ಈ ಎಲ್ಲಾ ವಸ್ತುಗಳು ಅಗ್ಗ:
- ಸಿಮೆಂಟ್, ವಾಹನ ಭಾಗಗಳು, ಟೈರ್, ಎಸಿ ಮತ್ತು ಟಿವಿಗಳ ಮೇಲೆ 18 ಪ್ರತಿಶತ ಜಿಎಸ್ಟಿ
- ಧಾರ್ಮಿಕ ಯಾತ್ರೆಗಳಿಗೆ ಹೋಗುವ ವಿಮಾನಗಳ ಮೇಲಿನ ಜಿಎಸ್ಟಿ ದರ ಇಳಿಕೆ.
- 100 ರೂ. ವರೆಗಿನ ಸಿನಿಮಾ ಟಿಕೆಟ್ ಅಗ್ಗ. ರೂ 100 ರವರೆಗೆ ಟಿಕೆಟ್ 12% ಜಿಎಸ್ಟಿ
- 100 ರೂ.ಗಿಂತ ಅಧಿಕ ಮೊತ್ತದ ಸಿನಿಮಾ ಟಿಕೆಟ್ ಗೆ 18% ಜಿಎಸ್ಟಿ ವಿಧಿಸಲಾಗುವುದು.
ಇಂದು ನಡೆದ ಜಿಎಸ್ಟಿ ಕೌನ್ಸಿಲ್ ಸಭೆಯ ಬಳಿಕ ಮಾತನಾಡಿದ ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ, ಐಶಾರಾಮಿ ವಸ್ತುಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಉತ್ಪನ್ನಗಳ ಮೇಲಿನ ಜಿಎಸ್ಟಿ ದರವನ್ನು 18% ಅಥವಾ ಅದಕ್ಕಿಂತ ಕಡಿಮೆ ಮಾಡಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ. ಇದಕ್ಕೆ ಸರ್ಕಾರದ ಸಹಮತವೂ ಇದೇ. ಹಾಗಾಗಿ 34 ಉತ್ಪನ್ನಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಉತ್ಪನ್ನಗಳ ಮೇಲಿನ ಜಿಎಸ್ಟಿ ದರವನ್ನು 18 ಅಥವಾ ಅದಕ್ಕಿಂತ ಕಡಿಮೆ ದರದಲ್ಲಿ ಇರಿಸಲಾಗಿದೆ ಎಂದು ಹೇಳಿದರು.