Shani Ast 2023: ಶನಿ ಅಸ್ತ ಕಾಲದಲ್ಲಿ ಈ ತಪ್ಪುಗಳು ತಪ್ಪಿಸಿ, ದಂಡ ಸಹನೆಗೂ ಮೀರಿರುತ್ತದೆ!

Shani Ast 2023: ಶನಿಯು ಒಬ್ಬ ವ್ಯಕ್ತಿಗೆ ಅವನ ಕಾರ್ಯಗಳಿಗೆ ಅನುಗುಣವಾಗಿ ಫಲಿತಾಂಶಗಳನ್ನು ನೀಡುತ್ತಾನೆ. ತಪ್ಪು ಮಾಡಿದರೆ ಕೆಟ್ಟ ಫಲಿತಾಂಶ ಸಿಗುತ್ತದೆ ಮತ್ತು ಒಳ್ಳೆಯ ಕೆಲಸ ಮಾಡಿದರೆ ಶನಿದೇವನ ಆಶೀರ್ವಾದ ಸಿಗುತ್ತದೆ.  

Written by - Nitin Tabib | Last Updated : Feb 9, 2023, 10:31 PM IST
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿದೇವನು ಒಬ್ಬ ವ್ಯಕ್ತಿಗೆ ಅವರ ಕರ್ಮಗಳಿಗೆ ಅನುಗುಣವಾಗಿ ಫಲವನ್ನು ನೀಡುತ್ತಾನೆ.
  • ತಪ್ಪು ಮಾಡಿದರೆ ಕೆಟ್ಟ ಫಲಿತಾಂಶ ಪ್ರಾಪ್ತಿ ಮತ್ತು ಒಳ್ಳೆಯ ಕೆಲಸ ಮಾಡಿದರೆ
  • ಶನಿದೇವನ ಆಶೀರ್ವಾದ ಪ್ರಾಪ್ತಿಯಾಗುತ್ತದೆ. ಶನಿಯ ಅಸ್ಥಿತ್ವದಿಂದಾಗಿ ಜನರು ಕೆಲವು ಕೆಟ್ಟ ಅಭ್ಯಾಸಗಳಿಂದ ದೂರವಿರಬೇಕು.
Shani Ast 2023: ಶನಿ ಅಸ್ತ ಕಾಲದಲ್ಲಿ ಈ ತಪ್ಪುಗಳು ತಪ್ಪಿಸಿ, ದಂಡ ಸಹನೆಗೂ ಮೀರಿರುತ್ತದೆ! title=
ಶನಿ ಅಸ್ತ ಕಾಲದಲ್ಲಿ ಈ ತಪ್ಪುಗಳು ಬೇಡ!

Saturn Combust 2023: ಕರ್ಮ ಫಲದಾತ ಶನಿದೇವ ಜನವರಿ 31 ರಂದು ಮಧ್ಯರಾತ್ರಿ 02:46 ಕ್ಕೆ ಅಸ್ತನಾಗಿದ್ದಾನೆ. ಶನಿಯು ತನ್ನ ಸ್ವರಾಶಿಯಲ್ಲಿ ಅಂದರೆ ಕುಂಭ ರಾಶಿಯಲ್ಲಿದ್ದಾನೆ. ಶನಿಯು ಪ್ರಸ್ತುತ 33 ದಿನಗಳ ಕಾಲ ಕುಂಭ ರಾಶಿಯಲ್ಲಿ ದುರ್ಬಲನಾಗಿರುತ್ತಾನೆ. ನಂತರ ಮಾರ್ಚ್ 05 ರಂದು ರಾತ್ರಿ 08:46 ಕ್ಕೆ ಶನಿಯು ಕುಂಭ ರಾಶಿಯಲ್ಲಿಯೇ ಉದಯಿಸುತ್ತಾನೆ. ಈ 33 ದಿನಗಳಲ್ಲಿ ಶನಿಯಿಂದ ಹೊಡೆತಕ್ಕೆ ಒಳಗಾಗುವರು ಅಥವಾ ಶನಿ ಸಾಡೆಸಾತಿಅಥವಾ ಶನಿ ದೋಷ ಇರುವವರು ಶನಿ ಅಸ್ತದ  ಅವಧಿಯಲ್ಲಿ  ಯಾವುದೇ ತಪ್ಪು ಕೆಲಸ ಮಾಡಬಾರದು. ಇದು ಕೆಟ್ಟ ಪರಿಣಾಮಗಳನ್ನು ಉಂಟುಮಾಡಬಹುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿದೇವನು ಒಬ್ಬ ವ್ಯಕ್ತಿಗೆ ಅವರ ಕರ್ಮಗಳಿಗೆ ಅನುಗುಣವಾಗಿ ಫಲವನ್ನು ನೀಡುತ್ತಾನೆ. ತಪ್ಪು ಮಾಡಿದರೆ ಕೆಟ್ಟ ಫಲಿತಾಂಶ ಪ್ರಾಪ್ತಿ ಮತ್ತು ಒಳ್ಳೆಯ ಕೆಲಸ ಮಾಡಿದರೆ ಶನಿದೇವನ ಆಶೀರ್ವಾದ ಪ್ರಾಪ್ತಿಯಾಗುತ್ತದೆ. ಶನಿಯ ಅಸ್ಥಿತ್ವದಿಂದಾಗಿ ಜನರು ಕೆಲವು ಕೆಟ್ಟ ಅಭ್ಯಾಸಗಳಿಂದ ದೂರವಿರಬೇಕು.

ಮಾಂಸ ಅಥವಾ ತಾಮಸಿಕ ಆಹಾರದಿಂದ ದೂರವಿರಿ
ಮಾಂಸಾಹಾರ ಅಥವಾ ತಾಮಸಿಕ ಆಹಾರವನ್ನು ಸೇವಿಸುವವರು ಈ ಅವಧಿಯಲ್ಲಿ ಅದನ್ನು ತ್ಯಜಿಸಬೇಕು, ಇಲ್ಲದಿದ್ದರೆ ಶನಿಯು ನಿಮ್ಮ ಮೇಲೆ ಕೋಪಗೊಳ್ಳುತ್ತಾನೆ ಮತ್ತು ನಿಮ್ಮ ಕೆಲಸದಲ್ಲಿ ನಿಮಗೆ ಯಶಸ್ಸು ಸಿಗುವುದಿಲ್ಲ.

ಮದ್ಯ ಮತ್ತು ಜೂಜಾಟದಿಂದ ದೂರವಿರಿ
ಶನಿದೇವನು ಮದ್ಯಪಾನ ಅಥವಾ ಜೂಜಾಟದಲ್ಲಿ ತೊಡಗುವವರ ಮೇಲೆ ಕೋಪಗೊಳ್ಳುತ್ತಾನೆ. ಶನಿ ದೇವನ ಕೋಪದಿಂದ ತಪ್ಪಿಸಿಕೊಳ್ಳಲು ಈ ಅವಧಿಯಲ್ಲಿ ಮದ್ಯಪಾನ ಮತ್ತು ಜೂಜಾಟದಿಂದ ದೂರವಿರಿ.

ಹಿರಿಯರನ್ನು ಅಗೌರವಿಸಬೇಡಿ
ತಂದೆ-ತಾಯಿಯನ್ನು ಗೌರವಿಸದಿದ್ದರೆ ಅಥವಾ ಹಿರಿಯರನ್ನು ಅವಮಾನಿಸಿದರೆ ಅಥವಾ ಹಿರಿಯರನ್ನು ಅವಮಾನಿಸಲು ಪ್ರಯತ್ನಿಸಿದರೂ ಕೂಡ ಈ ಅಭ್ಯಾಸವನ್ನು ಆದಷ್ಟು ಬೇಗ ಬದಲಿಸಿಕೊಳ್ಳಿ, ಇಲ್ಲದಿದ್ದರೆ ಶನಿಯು ನಿಮ್ಮ ಮೇಲೆ ಕೋಪಗೊಂಡು ನಿಮ್ಮ ಜೀವನವನ್ನು ಕಷ್ಟದಿಂದ ತುಂಬುತ್ತಾನೆ.

ಇದನ್ನೂ ಓದಿ-Sun-Saturn Conjunction 2023: ಫೆಬ್ರವರಿ 13 ರಿಂದ ಈ ರಾಶಿಗಳ ಗ್ರಹಚಾರ ಹಾಳಾಗಲಿದೆ! ಕಾರಣ ಇಲ್ಲಿದೆ

ಪ್ರಾಣಿಗಳ ಜೊತೆಗೆ ಕೆಟ್ಟ ವರ್ತನೆ ಬೇಡ
ಹಲವು ಬಾರಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಯಾವುದೇ ಕಾರಣವಿಲ್ಲದೆ ಇತರ ಜೀವಿಗಳನ್ನು ಜನ ನೋಯಿಸುತ್ತಾರೆ ಮತ್ತು ಹೊಡೆಯುತ್ತಾರೆ, ಇದನ್ನು ಮಾಡಬೇಡಿ. ಶನಿಯ ವಕ್ರ ದೃಷ್ಟಿ ಮೂಕ ಜೀವಿಗಳ ದಮನಕಾರಿಗಳ ಮೇಲೂ ಬೀಳುತ್ತವೆ.

ಇದನ್ನೂ ಓದಿ-Valentine's Day 2023: ಈ ರಾಶಿಗಳ ಜನರ ಪಾಲಿಗೆ ಪ್ರೇಮಿಗಳ ದಿನ ವಿಶೇಷವಾಗಿದೆ, ನೈಜ ಪ್ರೀತಿಯ ಹುಡುಕಾಟ ಅಂತ್ಯ!

ಈ ಜನರನ್ನು ಸರಿಯಾಗಿ ನೋಡಿಕೊಳ್ಳಿ
ತಮ್ಮ ಸಹೋದ್ಯೋಗಿ, ಸ್ವಚ್ಛತಾ ಸಿಬ್ಬಂದಿ, ರೋಗಿಗಳು, ಅಸಹಾಯಕರು, ಬಡವರು ಇತ್ಯಾದಿಗಳೊಂದಿಗೆ ಅನುಚಿತವಾಗಿ ವರ್ತಿಸುವ ಜನರ ಮೇಲೆ ಶನಿಯು ವಕ್ರ ದೃಷ್ಟಿಯನ್ನು ಬೀರುತ್ತಾನೆ. ಇಂತಹ ಜನರ ಮೇಲೆ ಮೇಲೆ ಶನಿ ಸಾಡೇಸಾತ್ ಪ್ರಾರಂಭವಾದಾಗ, ಶನಿದೇವನು ಅವರಿಗೆ ಅವರ ಕೆಟ್ಟ ಕಾರ್ಯಗಳಿಗೆ ತಕ್ಕ ಫಲವನ್ನು ನೀಡುತ್ತಾನೆ.

ಇದನ್ನೂ ಓದಿ-Shukra Gochara 2023: ಮೊದಲ ನಾಲ್ಕು ರಾಶಿಗಳ ಮೇಲೆ ಶುಕ್ರ ಗೊಚರದ ಪ್ರಭಾವ ಹೇಗಿರಲಿದೆ?

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News