Lucky Life Partner: ಮದುವೆಯ ನಂತರದ ತಮ್ಮ ಜೀವನ ಸ್ವರ್ಗದಂತಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಹೀಗಾಗಿ ಜನರು ಸಾಕಷ್ಟು ಎಚ್ಚರಿಕೆಯಿಂದ ಯೋಚಿಸಿದ ನಂತರ ಮದುವೆಯಾಗುತ್ತಾರೆ, ಆದರೆ, ಕೆಲವೊಮ್ಮೆ ಜೀವನದಲ್ಲಿ ಕೆಲ ಸಂಗಾತಿಗಳ ಆಗಮನದಿಂದ ಜೀವನವೇ ನರಕ ಎಂಬ ಭಾವನೆ ಬರಲಾರಂಭಿಸುತ್ತದೆ. ಇದರಿಂದಾಗಿ ವ್ಯಕ್ತಿ ಅತೃಪ್ತನಾಗಿಯೇ ಇರುತ್ತಾನೆ. ಹೀಗಾಗಿ ಮದುವೆಯ ವಿಷಯದಲ್ಲಿ ಎಂದಿಗೂ ಆತುರಪಡಬಾರದು. ನಿಮ್ಮ ವೈವಾಹಿಕ ಜೀವನ ಯಶಸ್ವಿಯಾಗಲು ಎಂತಹ ಹುಡುಗಿಯ ಆಯ್ಕೆ ಉತ್ತಮ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
ಮದುವೆಯ ನಂತರದ ಪಯಣ ಇಬ್ಬರ ಸ್ವಭಾವವನ್ನು ಅವಲಂಬಿಸಿದೆ.
ವಿವಾಹದ ನಂತರದ ಭವಿಷ್ಯದ ಜೀವನವು ಪತಿ ಮತ್ತು ಪತ್ನಿ ಇಬ್ಬರ ಸ್ವಭಾವವನ್ನು ಅವಲಂಬಿಸಿರುತ್ತದೆ. ಇಬ್ಬರೂ ಪರಸ್ಪರರ ಮಾತನ್ನು ಮತ್ತು ಭಾವನೆಗಳನ್ನು ಅರ್ಥಮಾಡಿಕೊಂಡರೆ, ಮುಂದಿನ ಜೀವನ ಯಾವಾಗಲೂ ಯಶಸ್ವಿಯಾಗುತ್ತದೆ. ಹೀಗಾಗಿ ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಮೊದಲು ಹಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ಆಗ ಮಾತ್ರ ನಿಮ್ಮ ಮದುವೆಯ ನಂತರದ ಜೀವನದಲ್ಲಿ ನೀವು ಯಶಸ್ವಿಯಾಗಲು ಸಾಧ್ಯವಾಗುತ್ತದೆ. ಅಂತಹ ಕೆಲವು ವಿಷಯಗಳನ್ನು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ, ಅವುಗಳನ್ನು ಅನುಸರಿಸುವ ಮೂಲಕ ನೀವು ಮದುವೆಯ ನಂತರ ನಿಮ್ಮ ಜೀವನವನ್ನು ಸಂತೋಷದಿಂದ ತುಂಬಿಸಬಹುದು.
ದುರಾಸೆ ಹೊಂದಿರುವ ಸಂಗಾತಿ ಬೇಡ
ಮನಸ್ಸಿನಲ್ಲಿ ದುರಾಸೆಯಿಲ್ಲದ ಹುಡುಗಿಯ ವೈವಾಹಿಕ ಜೀವನ ಯಾವಾಗಲು ಸಂತೋಷದಿಂದ ಕೂಡಿರುತ್ತದೆ. ಏಕೆಂದರೆ ಅವರ ಬಳಿ ಏನೇ ಇದ್ದರು, ಅದರಲ್ಲಿಯೇ ಅವರು ಸಂತೋಷವನ್ನು ಕಂಡುಕೊಳ್ಳುತ್ತಾರೆ. ತೋರ್ಪಡಿಕೆಯ ಸ್ವಭಾವ ಅವರದ್ದಾಗಿರುವುದಿಲ್ಲ , ಆಕೆಗೆ ಹೆಚ್ಚಿನ ಆಸೆಗಳೂ ಇರುವುದಿಲ್ಲ. ಆಸೆಗಳು ಕಡಿಮೆಯಾದಷ್ಟೂ ನಿಮ್ಮ ಜೀವನ ಪಯಣ ಉತ್ತಮವಾಗಿರುತ್ತದೆ.
ಆಧ್ಯಾತ್ಮಿಕವಾಗಿರಬೇಕು
ಹುಡುಗಿ ಆಧ್ಯಾತ್ಮಿಕವಾಗಿರಬೇಕು ಮತ್ತು ತನ್ನ ಧರ್ಮವನ್ನು ಅನುಸರಿಸುವವಳಾಗಿರಬೇಕು, ಆಗ ಮಾತ್ರ ಮನೆಯಲ್ಲಿ ಯಾವಾಗಲೂ ಶಾಂತಿ ಮತ್ತು ಸಂತೋಷ ನೆಲೆಸಿರುತ್ತದೆ. ಇಂತಹ ಹುಡುಗಿಯರು ಎಂದಿಗೂ ತಮ್ಮ ಪತಿ ಮತ್ತು ಅತ್ತೆ-ಮಾವರ ವಿರುದ್ಧ ಯಾವುದೇ ತಪ್ಪು ಕೆಲಸ ಮಾಡುವುದಿಲ್ಲ. ಧರ್ಮವನ್ನು ನಂಬುವ ಹುಡುಗಿಯರು ಯಾವಾಗಲೂ ಸಂತೋಷವಾಗಿರುತ್ತಾರೆ.
ಒಳ್ಳೆಯ ನಡತೆ
ಹುಡುಗಿ ಉತ್ತಮ ನಡವಳಿಕೆಯನ್ನು ಹೊಂದಿದ್ದರೆ, ಆಕೆ ತನ್ನ ಮುಂದಿನ ಜೀವನವನ್ನು ಮುನ್ನಡೆಸುವ ತಿಳುವಳಿಕೆಯನ್ನು ಹೊಂದಿರುತ್ತಾಳೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಆಂತರಿಕ ಗುಣಗಳನ್ನು ಹೊಂದಿರುವ ಹುಡುಗಿಯರು ತಮ್ಮ ಪತಿಯ ಭಾಗ್ಯವನ್ನೇ ಬರೆಯುತ್ತಾರೆ.
ಇದನ್ನೂ ಓದಿ-Solar Eclipse 2023: ಈ ರಾಶಿಗಳ ಜನರ ಮೇಲೆ ವರ್ಷದ ಮೊದಲ ಸೂರ್ಯ ಗ್ರಹಣದ ವಿಶೇಷ ಪ್ರಭಾವ, ಉನ್ನತಿ-ಧನಪ್ರಾಪ್ತಿಯ ಯೋಗ!
ಪತಿಯೇ ತನ್ನ ಸರ್ವಸ್ವ ಎನ್ನುವ ಹುಡುಗಿ
ಮದುವೆಯಾದ ನಂತರ ಪತಿಯೇ ತನ್ನ ಸರ್ವಸ್ವ ಎಂದು ಭಾವಿಸುವ ಹುಡುಗಿಯಾಗಿರಬೇಕು. ಇಂತಹ ಮಹಿಳೆಯರು ವೈವಾಹಿಕ ಜೀವನಕ್ಕೆ ತುಂಬಾ ಅದೃಷ್ಟವಂತರು ಮತ್ತು ಅವರ ವೈವಾಹಿಕ ಜೀವನವೂ ಸಂತೋಷದಿಂದ ಕೂಡಿರುತ್ತದೆ.
ಸಂತುಲನ ಕಾಯುವ ಹುಡುಗಿಯಾಗಿರಬೇಕು
ಮದುವೆಯ ನಂತರ ತಮ್ಮ ಅತ್ತೆ ಮನೆಯ ಆರ್ಥಿಕ ಮತ್ತು ಕೌಟುಂಬಿಕ ಸ್ಥಿತಿಯ ಸಮತೋಲನವನ್ನು ಕಾಯುವ ಹುಡುಗಿಯಾಗಿರಬೇಕು. ಇಂತಹ ಹುಡುಗಿಯರು ತನ್ನ ಜೀವನದಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ ಮತ್ತು ಇಂತಹ ಹುಡುಗಿಯರು ತಮ್ಮ ಅತ್ತೆ ಮನೆಯನ್ನು ಸ್ವರ್ಗವನ್ನಾಗಿ ಹೇಗೆ ಮಾಡಬೇಕು ಎಂಬುದನ್ನು ಅರಿತಿರುತ್ತಾರೆ.
ಇದನ್ನೂ ಓದಿ-ಹಂಸ-ಮಾಲವ್ಯ ರಾಜಯೋಗಗಳ ನಿರ್ಮಾಣದಿಂದ 3 ರಾಶಿಗಳ ಜನರಿಗೆ ಭಾರಿ ಧನಲಾಭ-ಬಡ್ತಿ ಭಾಗ್ಯ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.